Dailyhunt
ಯಶ್ ಅವರ ಟಾಕ್ಸಿಕ್ಸ್‌ನಲ್ಲಿ ಮತ್ತೋರ್ವ ಬಹುಭಾಷಾ ನಟ; 'ಕರ್ಮಡಿ'ಯಾಗಿ ಸುದೇವ್

ಯಶ್ ಅವರ ಟಾಕ್ಸಿಕ್ಸ್‌ನಲ್ಲಿ ಮತ್ತೋರ್ವ ಬಹುಭಾಷಾ ನಟ; 'ಕರ್ಮಡಿ'ಯಾಗಿ ಸುದೇವ್

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಯಶ್ ಅವರ ಟಾಕ್ಸಿಕ್ ಚಿತ್ರದಲ್ಲಿ ಮತ್ತೋರ್ವ ಬಹುಭಾಷಾ ನಟ; 'ಕರ್ಮಡಿ'ಯಾಗಿ ಸುದೇವ್

ಒಂದು ಸಾಲಿನಲ್ಲಿಯಶ್ ಅವರ ಟಾಕ್ಸಿಕ್ ಚಿತ್ರದಲ್ಲಿ ಸುದೇವ್ ನಾಯರ್ 'ಕರ್ಮಡಿ' ಪಾತ್ರದಲ್ಲಿ, ಮಾರ್ಚ್ 19ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಪ್ರಮುಖ ಮುಖ್ಯಾಂಶಗಳು• ಕರ್ಮಡಿಯಾಗಿ ಸುದೇವ್ ನಾಯರ್ ಸುದೇವ್ ನಾಯರ್ ಅವರನ್ನು 'ಕರ್ಮಡಿ' ಪಾತ್ರದ ಮೂಲಕ ಪರಿಚಯಿಸಲಾಗಿದೆ, ಇದು 'ಟಾಕ್ಸಿಕ್' ಚಿತ್ರದಲ್ಲಿ ಅವರ ಮೊದಲ ಲುಕ್.• ಪ್ಯಾನ್ ಇಂಡಿಯಾ ಬಿಡುಗಡೆಯ ದಿನಾಂಕಟಾಕ್ಸಿಕ್ ಚಿತ್ರವನ್ನು ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ, ಬಹುನಿರೀಕ್ಷಿತ ಚಿತ್ರ.• ಪ್ರಮುಖ ತಾರಾ ನಾಯಕ ನಟರುಚಿತ್ರದಲ್ಲಿ ಅನೇಕ ತಾರಾ ನಟ, ನಟಿಯರು ಇದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.• ಬಹುಭಾಷಾ ಚಿತ್ರೀಕರಣಯಶ್ ಮತ್ತು ಗೀತು ಮೋಹನದಾಸ್ ಬರೆದ ಕಥೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಇತರೆ ಭಾಷೆಗಳಿಗೆ ಡಬ್ ಮಾಡಲಾಗಿದೆ.ಪ್ರಮುಖ ಅಂಕಿಅಂಶಗಳುಮಾರ್ಚ್ 19ಚಿತ್ರ ಬಿಡುಗಡೆಯ ದಿನಾಂಕಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಬೆಂಗಳೂರು: ನಟ ಯಶ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್' ಮಾರ್ಚ್ 19ರಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ಸಹ ಬಿಡುಗಡೆ ಮಾಡಲಾಗಿದೆ. ಮಾತ್ರವಲ್ಲ, ಸಿನಿಮಾ ತಂಡ ಚಿತ್ರದ ಕುರಿತು ದಿನಕ್ಕೊಂದು ಮಾಹಿತಿ ನೀಡುತ್ತಾ, ಪ್ರೇಕಕ್ಷರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸಿನಿಮಾದಲ್ಲಿ ಅನೇಕ ತಾರಾ ನಟ, ನಟಿಯರ ದಂಡೇ ಇದ್ದು, ಇಂದು (ಸೋಮವಾರ) ಸಿನಿಮಾ ತಂಡವು ಮತ್ತೋರ್ವ ತಾರಾ ನಟನ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೆವಿಎನ್ ಪ್ರೊಡಕ್ಷನ್ಸ್, ನಟ ಸುದೇವ್ ನಾಯರ್ ಅವರ ಮೊದಲ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅವರನ್ನು 'ಕರ್ಮಡಿ' ಎಂಬ ಪಾತ್ರದ ಮೂಲಕ‍ ಪರಿಚಯಿಸಲಾಗಿದೆ.

'ಸುದೇವ್ ನಾಯರ್ ಅವರನ್ನು ಕರ್ಮಡಿಯಾಗಿ ಪರಿಚಯಿಸಲಾಗುತ್ತಿದೆ. ವಿಶ್ವದಾದ್ಯಂತ ಮಾರ್ಚ್ 19ರಂದು ಟಾಕ್ಸಿಕ್ ಬಿಡುಗಡೆಯಾಗುತ್ತಿದೆ. ಎಲ್ಲರೂ ವೀಕ್ಷಿಸಿ ಎಂದು ಕೆವಿಎನ್ ಪ್ರೊಡಕ್ಷನ್ಸ್ ಮಾಹಿತಿ ಹಂಚಿಕೊಂಡಿದೆ.

ಸಿನಿಮಾ ತಂಡವು ನಿರಂತರವಾಗಿ ಒಂದೊಂದೇ ಪಾತ್ರದ ಕುರಿತು ಮಾಹಿತಿ ನೀಡುತ್ತಾ ಬಂದಿದೆ. ವಿಶೇಷವಾಗಿ ಈ ಚಿತ್ರದಲ್ಲಿ ತಾರಾ ನಟಿಯರ ದಂಡೇ ಇರುವುದನ್ನು ಗಮನಿಸಿದಬಹುದು. ನಯನತಾರಾ ಅವರು ಗಂಗಾ ಪಾತ್ರದಲ್ಲಿ, ಕಿಯಾರಾ ಅಡ್ವಾಣಿ ಅವರು ನಾಡಿಯಾ ಪಾತ್ರದಲ್ಲಿ, ಹುಮಾ ಖುರೇಷಿ ಅವರು ಎಲಿಜಬೆತ್ ಪಾತ್ರದಲ್ಲಿ, ರುಕ್ಮಿಣಿ ವಸಂತ್ ಅವರು ಮೆಲ್ಲಿಸಾ ಪಾತ್ರದಲ್ಲಿ ಮತ್ತು ತಾರಾ ಸುತಾರಿಯಾ ಅವರು ರೆಬೆಕ್ಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಕಥೆಯನ್ನು ಯಶ್ ಮತ್ತು ಗೀತು ಮೋಹನದಾಸ್ ಅವರು ಬರೆದಿದ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರೆ ಭಾಷೆಗಳಲ್ಲಿ ಡಬ್ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani