Dailyhunt
ಯೆಮನ್ ಕರಾವಳಿಯಲ್ಲಿ ತೈಲ ನೌಕೆ ಅಪಹರಣ: ಸೊಮಾಲಿಯಾತ್ತ ಸಾಗಿದ ಹಡಗು

ಯೆಮನ್ ಕರಾವಳಿಯಲ್ಲಿ ತೈಲ ನೌಕೆ ಅಪಹರಣ: ಸೊಮಾಲಿಯಾತ್ತ ಸಾಗಿದ ಹಡಗು

ನಾ: ಯೆಮನ್‌ನ ಶಬ್ವಾ ಪ್ರಾಂತ್ಯದ ಕರಾವಳಿಯಲ್ಲಿ ಶನಿವಾರ (ಮೇ.2) 'ಎಂ/ಟಿ ಯುರೇಕಾ' ಎಂಬ ತೈಲ ನೌಕೆಯನ್ನು ಅಪಹರಿಸಲಾಗಿದೆ ಎಂದು ಯೆಮನ್ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನೌಕೆಯನ್ನು ಅತಿಕ್ರಮಿಸಿ, ಹಡಗಿನ ನಿಯಂತ್ರಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಸ್ತುತ ಈ ನೌಕೆಯನ್ನು ಗಲ್ಫ್ ಆಫ್ ಏಡೆನ್ ಮಾರ್ಗವಾಗಿ ಸೊಮಾಲಿಯಾತ್ತ ಕೊಂಡೊಯ್ಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೌಕೆಯು ಸಾಗುತ್ತಿರುವ ಮಾರ್ಗವನ್ನು ಪತ್ತೆಹಚ್ಚಲಾಗಿದ್ದು, ಅದನ್ನು ಮರಳಿ ಪಡೆಯಲು ಮತ್ತು ನೌಕೆಯಲ್ಲಿರುವ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತೈಲ ನೌಕೆ ಇರುವ ಸ್ಥಳವನ್ನು ಗುರುತಿಸಲಾಗಿದ್ದು, ಅದನ್ನು ತಲುಪುವ ಪಯತ್ನದಲ್ಲಿದ್ದೇವೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani