Dailyhunt Logo
  • Light mode
    Follow system
    Dark mode
    • Play Story
    • App Story
ಯುದ್ಧ ಇನ್ನೂ ಮುಗಿದಿಲ್ಲ: ಇರಾನ್‌ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಯುದ್ಧ ಇನ್ನೂ ಮುಗಿದಿಲ್ಲ: ಇರಾನ್‌ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಟೆಲ್ ಅವಿವ್ (ಇಸ್ರೇಲ್): ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಕದನ ವಿರಾಮ ಒಪ್ಪಂದ ಮುರಿದುಬಿದ್ದ ಕಾರಣ, ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಯುದ್ಧ ಇನ್ನೂ ಮುಗಿದಿಲ್ಲ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಡೆದ ಇಸ್ರೇಲ್ ವಾಯುಪಡೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನೆತನ್ಯಾಹು, ದೇಶದ ರಕ್ಷಣೆಗೆ ನಮ್ಮ ವಾಯುಪಡೆಯನ್ನು ಬಲಿಷ್ಠವಾಗಿ ಇಟ್ಟುಕೊಳ್ಳುವುದೇ ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಮುಂದುವರಿದು, ಇರಾನ್ ಆಡಳಿತಕ್ಕೆ ಭಾರಿ ಪೆಟ್ಟು ಬಿದ್ದಿದೆ. ಒಪ್ಪಂದ ಇರಲಿ ಅಥವಾ ಇಲ್ಲದಿರಲಿ, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರಗಳನ್ನು ಹೊಂದಲು ನಾವು ಬಿಡುವುದಿಲ್ಲ. ಒಂದು ವೇಳೆ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಇರಾನ್ ಇಷ್ಟೊತ್ತಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಿತ್ತು ಎಂದು ನೆತನ್ಯಾಹು ಹೇಳಿದ್ದಾರೆ.

‌ಇರಾನ್ ಮತ್ತು ಅಮೆರಿಕ ನಡುವೆ ಪರಸ್ಪರ ಮಿಲಿಟರಿ ದಾಳಿಗಳು ನಡೆದ ಬೆನ್ನಲ್ಲೇ, ನನ್ನ ಮಟ್ಟಿಗೆ ಇರಾನ್‌ ಜತೆಗಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಮುಗಿದ ಅಧ್ಯಾಯ. ಈ ವಿಚಾರವಾಗಿ ಮತ್ತೆ ನನ್ನ ಸಮಯ ವ್ಯರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅವರು (ಇರಾನ್‌) ದುಷ್ಟರು ಮತ್ತು ಮೂರ್ಖರು. ಆದಾಗ್ಯೂ, ನಮ್ಮ ಸಂಧಾನಕಾರರು ಮಾತುಕತೆ ಮುಂದುವರಿಸಲು ಸಿದ್ಧರಿದ್ದಾರೆ. ಆದರೆ, ಅದು ಇರಾನ್‌ಗೆ ಬೇಕಿದ್ದರೆ ಮಾತ್ರ, ಅಂತಹ ಸಾಧ್ಯತೆಗಳು ಕಡಿಮೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಹೇಳಿದ್ದರು.

ಟ್ರಂಪ್ ಹೇಳಿಕೆ ಬೆನ್ನಲೇ ನೆತನ್ಯಾಹು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ನೆತನ್ಯಾಹು ಎಚ್ಚರಿಕೆಗೆ ಧ್ವನಿಗೂಡಿಸಿರುವ ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್, ಇರಾನ್ ಮೇಲಿನ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ರಕ್ಷಣಾ ಪಡೆಗಳು ಹೊಸ ಯುದ್ಧತಂತ್ರಗಳನ್ನು ರೂಪಿಸುತ್ತಿವೆ. ದೊಡ್ಡ ಮಟ್ಟದ ಕಾರ್ಯಾಚರಣೆಗಳು ಇನ್ನೂ ನಮ್ಮ ಮುಂದಿವೆ ಎಂದಿದ್ದಾರೆ.

ಇರಾನ್‌ನ 80 ಕ್ಕೂ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ಸೇನೆ ಮಂಗಳವಾರ ರಾತ್ರಿ ದಾಳಿ ನಡೆಸಿದೆ. ಈ ದಾಳಿಗೆ ಪ್ರತಿಯಾಗಿ ಬಹರೇನ್‌ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಇರಾನ್‌ ಸೇನೆ ಹೇಳಿದೆ.

ಇರಾನ್‌ ಮೇಲೆ ಹೊಸ ದಾಳಿ ಆರಂಭಿಸಿದ ಅಮೆರಿಕ: ಕುವೈತ್‌ ಮೇಲೆ ಇರಾನ್ ಡ್ರೋನ್ ದಾಳಿ
Dailyhunt
Disclaimer: This content has not been generated, created or edited by Dailyhunt. Publisher: Prajavani