Dailyhunt Logo
  • Light mode
    Follow system
    Dark mode
    • Play Story
    • App Story
ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವ ಸೌಲಭ್ಯ ಶೀಘ್ರದಲ್ಲೇ ಆರಂಭ: ಕೇಂದ್ರ

ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವ ಸೌಲಭ್ಯ ಶೀಘ್ರದಲ್ಲೇ ಆರಂಭ: ಕೇಂದ್ರ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವ ಸೌಲಭ್ಯ ಶೀಘ್ರದಲ್ಲೇ ಆರಂಭ: ಕೇಂದ್ರ

ಒಂದು ಸಾಲಿನಲ್ಲಿನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರಿಗೆ ತಮ್ಮ ಭವಿಷ್ಯ ನಿಧಿಯಲ್ಲಿನ (ಪಿ.ಎಫ್‌) ಹಣವನ್ನು ಯುಪಿಐ ಮೂಲಕ ಹಿಂದಕ್ಕೆ ಪಡೆಯುವ ಸೌಲಭ್ಯವು ಶೀಘ್ರದಲ್ಲಿಯೇ ಸಿಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಮಂಗಳವಾರ ತಿಳಿಸಿದ್ದಾರೆ.

ಪ್ರಮುಖ ಸಂಗತಿಗಳು• ಯುಪಿಐ ಮೂಲಕ ಪಿ.ಎಫ್‌ ಹಣ ಶೀಘ್ರಪಿ.ಎಫ್‌ ಖಾತೆಯಲ್ಲಿರುವ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ಯುಪಿಐ ವ್ಯವಸ್ಥೆಯ ಮೂಲಕ ಬ್ಯಾಂಕ್‌ ಖಾತೆಗೆ ಪಡೆದುಕೊಳ್ಳುವ ಸೌಲಭ್ಯ ಒದಗಿಸುವ ಉದ್ದೇಶವನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಹೊಂದಿದೆ.• ವಾಟ್ಸ್‌ಆಯಪ್‌ ಮೂಲಕ ಸೇವೆಸದಸ್ಯರಿಗೆ ಸಿಗುವ ಸೇವೆಗಳ ಬಗ್ಗೆ ಮಾಹಿತಿ ನೀಡಲು ವಾಟ್ಸ್‌ಆಯಪ್‌ ವೇದಿಕೆಯನ್ನು ಬಳಸಿಕೊಳ್ಳಲು ಇಪಿಎಫ್‌ಒ ಕೆಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕೂಡ ಸಚಿವರು ತಿಳಿಸಿದ್ದಾರೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರಿಗೆ ತಮ್ಮ ಭವಿಷ್ಯ ನಿಧಿಯಲ್ಲಿನ (ಪಿ.ಎಫ್‌) ಹಣವನ್ನು ಯುಪಿಐ ಮೂಲಕ ಹಿಂದಕ್ಕೆ ಪಡೆಯುವ ಸೌಲಭ್ಯವು ಶೀಘ್ರದಲ್ಲಿಯೇ ಸಿಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಮಂಗಳವಾರ ತಿಳಿಸಿದ್ದಾರೆ.

ಈ ಸೌಲಭ್ಯದ ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 'ಹಿಂದಕ್ಕೆ ಪಡೆದ ಮೊತ್ತವು ಚಂದಾದಾರರ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಿ.ಎಫ್‌ ಖಾತೆಯಲ್ಲಿರುವ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ಯುಪಿಐ ವ್ಯವಸ್ಥೆಯ ಮೂಲಕ ಬ್ಯಾಂಕ್‌ ಖಾತೆಗೆ ಪಡೆದುಕೊಳ್ಳುವ ಸೌಲಭ್ಯ ಒದಗಿಸುವ ಉದ್ದೇಶವನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಹೊಂದಿದೆ. ಇದರ ಅಡಿಯಲ್ಲಿ, ಎಷ್ಟು ಮೊತ್ತವನ್ನು ಪಿ.ಎಫ್‌ ಖಾತೆಯಿಂದ ಯುಪಿಐ ವ್ಯವಸ್ಥೆಯ ಮೂಲಕ ಹಿಂಪಡೆಯಬಹುದು ಎಂಬುದನ್ನು ತಾವೇ ಪರಿಶೀಲಿಸಿಕೊಳ್ಳುವ ಅನುಕೂಲವೂ ಚಂದಾದಾರರಿಗೆ ಸಿಗಲಿದೆ. ಮೊತ್ತವು ಪಿ.ಎಫ್‌ ಖಾತೆಗೆ ಜೋಡಣೆ ಆಗಿರುವ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗುತ್ತದೆ.

ಖಾತೆಗೆ ಜೋಡಣೆ ಆಗಿರುವ ಯುಪಿಐ ಗೋಪ್ಯ ಸಂಖ್ಯೆಯನ್ನು ಬಳಸಿ ಹಣ ಹಿಂಪಡೆಯುವ ವಹಿವಾಟು ಪೂರ್ಣಗೊಳಿಸಬಹುದು. ಹಣವು ಬ್ಯಾಂಕ್ ಖಾತೆಗೆ ವರ್ಗಾವಣೆ ಆದ ನಂತರದಲ್ಲಿ ಅದನ್ನು ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಬಹುದು.

ಹೊಸ ಸೌಲಭ್ಯವು ಏಳು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಚಂದಾದಾರರಿಗೆ ಅನುಕೂಲ ಕಲ್ಪಿಸುವ ನಿರೀಕ್ಷೆ ಇದೆ. ಇದಕ್ಕೆ ಸಂಬಂಧಿಸಿದ ತಂತ್ರಾಂಶದಲ್ಲಿನ ಲೋಪಗಳನ್ನು ಸರಿಪಡಿಸಲು ಇಪಿಎಫ್‌ಒ ಯತ್ನಿಸುತ್ತಿದೆ.

ವಾಟ್ಸ್‌ಆಯಪ್‌ ಮಾರ್ಗ:

ಸದಸ್ಯರಿಗೆ ಸಿಗುವ ಸೇವೆಗಳ ಬಗ್ಗೆ ಮಾಹಿತಿ ನೀಡಲು ವಾಟ್ಸ್‌ಆಯಪ್‌ ವೇದಿಕೆಯನ್ನು ಬಳಸಿಕೊಳ್ಳಲು ಇಪಿಎಫ್‌ಒ ಕೆಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕೂಡ ಸಚಿವರು ತಿಳಿಸಿದ್ದಾರೆ.

ಇದರ ಅಡಿಯಲ್ಲಿ ಚಂದಾದಾರರು ಇಪಿಎಫ್‌ಒ ವಾಟ್ಸ್‌ಆಯಪ್‌ ಸಂಖ್ಯೆಗೆ 'ಹೆಲೊ' (Hello) ಎಂದು ಸಂದೇಶ ಕಳುಹಿಸಬೇಕು. ವಾಟ್ಸ್‌ಆಯಪ್‌ ಮೂಲಕ ಪ್ರಾದೇಶಿಕ ಭಾಷೆಗಳಲ್ಲಿಯೂ ಸಂವಹನ ನಡೆಸಬಹುದು. ಮತ್ತೆ ಮತ್ತೆ ಎದುರಾಗುವ ಪ್ರಶ್ನೆಗಳಿಗೆ ಸ್ವಯಂಚಾಲಿತ ವ್ಯವಸ್ಥೆಯೊಂದು ದಿನದ ಅಷ್ಟೂ ಗಂಟೆಗಳ ಕಾಲ ಉತ್ತರಿಸುತ್ತದೆ. ಈ ಸೌಲಭ್ಯವು ಇದೇ ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani