Dailyhunt Logo
  • Light mode
    Follow system
    Dark mode
    • Play Story
    • App Story
ಯುಪಿಐ ಸೇವೆ: ಗ್ರಾಹಕರು ಮತ್ತು ಸಣ್ಣ ವರ್ತಕರಿಗೆ ಶುಲ್ಕ ಇಲ್ಲ

ಯುಪಿಐ ಸೇವೆ: ಗ್ರಾಹಕರು ಮತ್ತು ಸಣ್ಣ ವರ್ತಕರಿಗೆ ಶುಲ್ಕ ಇಲ್ಲ

ನವದೆಹಲಿ: 2007ರ ಪಾವತಿ ಮತ್ತು ಸೆಟ್ಲ್‌ಮೆಂಟ್‌ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದರೂ ಗ್ರಾಹಕರು ಮತ್ತು ಸಣ್ಣ ವರ್ತಕರು ಯುಪಿಐ ಸೇವೆಯನ್ನು ಉಚಿತವಾಗಿ ಪಡೆಯುವುದು ಮುಂದುವರಿಯಲಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಪಿಸಿಐ) ಶುಕ್ರವಾರ ತಿಳಿಸಿದೆ.

'2016ರಲ್ಲಿ ಆರಂಭವಾದಾಗಿನಿಂದಲೂ ಗ್ರಾಹಕರಿಗೆ ಯುಪಿಐ ಸೇವೆ ಉಚಿತವಾಗಿ ಸಿಗುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಯಾವುದೇ ವಹಿವಾಟು ಶುಲ್ಕವನ್ನು ಪಾವತಿಸದೆ ಡಿಜಿಟಲ್ ಪಾವತಿ ಮಾಡುವುದನ್ನು ಮುಂದುವರಿಸಬಹುದು' ಎಂದು ಪಿಸಿಐ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದೆ.

ಯುಪಿಐ ಶುಲ್ಕಗಳ ಕುರಿತು ನಡೆಯುತ್ತಿರುವ ಚರ್ಚೆಗೆ ಸ್ಪಷ್ಟನೆ ನೀಡಿರುವ ಪಿಸಿಐ, 'ಕಿರಾಣಿ ಅಂಗಡಿ ಗಳೂ ಸೇರಿದಂತೆ ಸಣ್ಣ ವರ್ತಕರು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನ್ನು ಪಾವತಿಸದೆಯೇ ಯುಪಿಐ ಪಾವತಿ ಸ್ವೀಕರಿಸುವುದನ್ನು ಮುಂದುವರಿಸಲಿದ್ದಾರೆ' ಎಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani