Dailyhunt Logo
  • Light mode
    Follow system
    Dark mode
    • Play Story
    • App Story
ಯುರೋಪ್ ಪ್ರವೇಶಕ್ಕೆ 50 ಸಾವಿರ ಮಂದಿಯಿಂದ ಜೀವಪಣ: ಸ್ಯೂಟದಲ್ಲಿ ಮಾನವೀಯ ಬಿಕ್ಕಟ್ಟು

ಯುರೋಪ್ ಪ್ರವೇಶಕ್ಕೆ 50 ಸಾವಿರ ಮಂದಿಯಿಂದ ಜೀವಪಣ: ಸ್ಯೂಟದಲ್ಲಿ ಮಾನವೀಯ ಬಿಕ್ಕಟ್ಟು

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಯುರೋಪ್ ಪ್ರವೇಶಕ್ಕೆ 50 ಸಾವಿರ ಮಂದಿಯಿಂದ ಜೀವಪಣ: ಸ್ಯೂಟದಲ್ಲಿ ಮಾನವೀಯ ಬಿಕ್ಕಟ್ಟು

ಒಂದು ಸಾಲಿನಲ್ಲಿಉತ್ತರ ಆಫ್ರಿಕಾದ ಸ್ಯೂಟ ಗಡಿಯಲ್ಲಿ 50 ಸಾವಿರ ವಲಸಿಗರ ನುಗ್ಗುವ ಪ್ರಯತ್ನದಿಂದಾಗಿ ತೀವ್ರ ಮಾನವೀಯ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ಉಂಟಾಗಿದೆ.

ಪ್ರಮುಖ ಪ್ರಶ್ನೋತ್ತರ


ಸ್ಯೂಟ ಪ್ರದೇಶದ ಪ್ರಾಮುಖ್ಯತೆ ಏನು?

ಸ್ಯೂಟವು ಉತ್ತರ ಆಫ್ರಿಕಾದಲ್ಲಿದ್ದರೂ ಸ್ಪೇನ್‌ನ ಸ್ವಾಯತ್ತ ಪ್ರದೇಶವಾಗಿದೆ. ಇದು ಐರೋಪ್ಯ ಒಕ್ಕೂಟವನ್ನು ಪ್ರವೇಶಿಸಲು ಆಫ್ರಿಕಾದ ವಲಸಿಗರಿಗೆ ಇರುವ ಏಕೈಕ ಭೂಗಡಿಯಾಗಿದೆ.


ಈ ಬಾರಿಯ ವಲಸೆ ಬಿಕ್ಕಟ್ಟಿಗೆ ಕಾರಣವೇನು?

ಮೊರೊಕ್ಕೊ ಗಡಿ ನಿಯಂತ್ರಣದಲ್ಲಿನ ಸಡಿಲಿಕೆ, ಸ್ಪೇನ್ ಪ್ರಧಾನಿಯ ಅಲ್ಜೀರಿಯಾ ಭೇಟಿ ಮತ್ತು ಮಾನವ ಕಳ್ಳಸಾಗಣೆ ಜಾಲಗಳು ಹರಡಿದ ತಪ್ಪು ಮಾಹಿತಿ ಈ ಘಟನೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.


ಗಡಿ ಘಟನೆಯಲ್ಲಿ ಸಂಭವಿಸಿದ ಸಾವುನೋವುಗಳೆಷ್ಟು?

ಈ ಬಾರಿಯ ವಲಸಿಗರ ನುಗ್ಗುವ ಪ್ರಯತ್ನದ ವೇಳೆ ಸಂಭವಿಸಿದ ದುರಂತದಲ್ಲಿ ಕನಿಷ್ಠ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


ಸ್ಪೇನ್ ಸರ್ಕಾರ ಕೈಗೊಂಡಿರುವ ಕ್ರಮವೇನು?

ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೆಝ್ ಈ ಘಟನೆಯನ್ನು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಸವಾಲು ಎಂದು ಕರೆದಿದ್ದು, ಗಡಿಯಲ್ಲಿ ಸೇನೆ ಮತ್ತು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದಾರೆ.


ಈ ಬಿಕ್ಕಟ್ಟು ಜಾಗತಿಕವಾಗಿ ಏಕೆ ಮಹತ್ವದ್ದಾಗಿದೆ?

ಇದು ಕೇವಲ ಒಂದು ಗಡಿ ಉಲ್ಲಂಘನೆಯಲ್ಲ, ಬದಲಾಗಿ ಆರ್ಥಿಕ ಅಸಮಾನತೆ, ಯುದ್ಧ ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ ಸಾವಿರಾರು ವಲಸಿಗರು ಎದುರಿಸುತ್ತಿರುವ ಬದುಕಿನ ಹೋರಾಟದ ಸಂಕೇತವಾಗಿದೆ.

ಪ್ರಮುಖ ಅಂಕಿಅಂಶಗಳು

50 ಸಾವಿರಒಟ್ಟು ವಲಸಿಗರ ಪ್ರಯತ್ನ60ಕ್ಕೂ ಹೆಚ್ಚುಘಟನೆಯಲ್ಲಿ ಮೃತಪಟ್ಟವರು35 ಸಾವಿರಕ್ಕೂ ಹೆಚ್ಚು2014ರಿಂದ ಸಮುದ್ರ ಮಾರ್ಗದಲ್ಲಿ ಮೃತಪಟ್ಟವರು1,5002026ರ ಮೊದಲ ಏಳು ತಿಂಗಳ ಸಾವುಗಳು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಉತ್ತರ ಆಫ್ರಿಕಾದ ಮೊರೊಕ್ಕೊ ಕರಾವಳಿಯಲ್ಲಿರುವ ಸ್ಪೇನ್‌ನ ಸಣ್ಣ ಸ್ವಾಯತ್ತ ಪ್ರದೇಶ ಸ್ಯೂಟ ಮತ್ತೊಮ್ಮೆ ಜಾಗತಿಕ ಸುದ್ದಿಯ ಕೇಂದ್ರಬಿಂದುವಾಗಿದೆ. ಕೆಲವೇ ಗಂಟೆಗಳಲ್ಲಿ ಸುಮಾರು 50 ಸಾವಿರ ವಲಸಿಗರು ಸ್ಯೂಟಕ್ಕೆ ಪ್ರವೇಶಿಸಲು ಯತ್ನಿಸಿದ್ದು, ಈ ವೇಳೆ ನಡೆದ ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಯುರೋಪಿನ ವಲಸೆ ನೀತಿ, ಗಡಿ ಭದ್ರತೆ ಮತ್ತು ಸ್ಪೇನ್-ಮೊರೊಕ್ಕೊ ರಾಜತಾಂತ್ರಿಕ ಸಂಬಂಧಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

ಸ್ಯೂಟ ಎಂದರೇನು?

ಸ್ಯೂಟ ಉತ್ತರ ಆಫ್ರಿಕಾದ ಮೊರೊಕ್ಕೊ ಗಡಿಗೆ ಹೊಂದಿಕೊಂಡಿರುವ ಸ್ಪೇನ್‌ನ ಸ್ವಾಯತ್ತ ಪ್ರದೇಶ. ಮೆಲಿಲ್ಲಾ ಜೊತೆಗೆ ಇದು ಐರೋಪ್ಯ ಒಕ್ಕೂಟದ ಆಫ್ರಿಕಾ ಖಂಡದಲ್ಲಿರುವ ಏಕೈಕ ಭೂಗಡಿಯಾಗಿದೆ. ಭೌಗೋಳಿಕವಾಗಿ ಆಫ್ರಿಕಾ ಖಂಡದಲ್ಲಿದ್ದರೂ, ಆಡಳಿತಾತ್ಮಕವಾಗಿ ಇದು ಸ್ಪೇನ್‌ನ ಭಾಗವಾಗಿದೆ. ಹೀಗಾಗಿ ಸ್ಯೂಟವನ್ನು ತಲುಪುವುದು ಎಂದರೆ ಐರೋಪ್ಯ ಒಕ್ಕೂಟಕ್ಕೆ ಪ್ರವೇಶಿಸಿದಂತೆಯೇ. ಇದೇ ಕಾರಣಕ್ಕೆ ಉತ್ತಮ ಬದುಕು, ಉದ್ಯೋಗ ಮತ್ತು ಆಶ್ರಯದ ನಿರೀಕ್ಷೆಯಲ್ಲಿರುವ ಸಾವಿರಾರು ವಲಸಿಗರಿಗೆ ಇದು ಯುರೋಪ್ ಪ್ರವೇಶದ ಪ್ರಮುಖ ಹೆಬ್ಬಾಗಿಲು.

ಏಕೆ ಸ್ಯೂಟವೇ ವಲಸಿಗರ ಪ್ರಮುಖ ಗುರಿ?

ಆಫ್ರಿಕಾದ ವಿವಿಧ ದೇಶಗಳು ಹಾಗೂ ಸಂಘರ್ಷಪೀಡಿತ ಪ್ರದೇಶಗಳಿಂದ ಸಾವಿರಾರು ಜನ ಉತ್ತಮ ಉದ್ಯೋಗ, ಸುರಕ್ಷಿತ ಬದುಕು ಮತ್ತು ಆಶ್ರಯದ ನಿರೀಕ್ಷೆಯಲ್ಲಿ ಯುರೋಪ್‌ಗೆ ತೆರಳಲು ಪ್ರಯತ್ನಿಸುತ್ತಾರೆ. ಮೊರೊಕ್ಕೊದಿಂದ ಸ್ಯೂಟಕ್ಕೆ ಸಮುದ್ರ ಮಾರ್ಗ ಕೇವಲ ಐದು ಕಿಲೋಮೀಟರ್‌ನಷ್ಟಿರುವುದರಿಂದ ಅನೇಕರು ಈಜುತ್ತಲೇ ಗಡಿ ದಾಟಲು ಯತ್ನಿಸುತ್ತಾರೆ. ಕೆಲವರು ಎತ್ತರದ ಭದ್ರತಾ ಬೇಲಿಗಳನ್ನು ಹತ್ತಿ ಪ್ರವೇಶಿಸಲು ಪ್ರಯತ್ನಿಸುತ್ತಾರೆ.

ಸ್ಯೂಟ ಮತ್ತು ಮೆಲಿಲ್ಲಾ ಗಡಿಗಳನ್ನು ಸ್ಪೇನ್ ಬಲಿಷ್ಠ ಬೇಲಿಗಳು, ನಿಗಾ ವ್ಯವಸ್ಥೆಗಳು ಮತ್ತು ಭದ್ರತಾ ಪಡೆಗಳ ಮೂಲಕ ರಕ್ಷಿಸುತ್ತಿದ್ದರೂ, ಈ ಮಾರ್ಗದಲ್ಲಿ ವಲಸೆ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ.

ಈ ಬಾರಿ ಇಷ್ಟೊಂದು ಜನ ಹೇಗೆ ಗಡಿ ದಾಟಿದ್ದು ಹೇಗೆ?

ಇದಕ್ಕೆ ಅಧಿಕೃತ ಉತ್ತರ ಇನ್ನೂ ಲಭ್ಯವಾಗಿಲ್ಲ. ಮೊರೊಕ್ಕೊ ಸರ್ಕಾರ ಈ ಕುರಿತು ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ. ಆದರೆ ವಲಸೆ ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಕೆಲವು ಕಾರಣಗಳನ್ನು ಸೂಚಿಸಿದ್ದಾರೆ.

ಮೊದಲನೆಯದಾಗಿ, ಮೊರೊಕ್ಕೊ ಗಡಿ ನಿಯಂತ್ರಣದಲ್ಲಿ ತಾತ್ಕಾಲಿಕ ಸಡಿಲಿಕೆ ಉಂಟಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ತಿಂಗಳಿಗೆ ನೂರಾರು ಜನ ಮಾತ್ರ ಗಡಿ ದಾಟುವ ಪ್ರದೇಶದಲ್ಲಿ ಏಕಾಏಕಿ 50 ಸಾವಿರ ಜನ ಪ್ರವೇಶಿಸಲು ಯತ್ನಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಎರಡನೆಯದಾಗಿ, ಇತ್ತೀಚೆಗೆ ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೆಝ್ ಅವರು ಅಲ್ಜೀರಿಯಾ ಭೇಟಿ ನೀಡಿರುವುದೂ ಈ ಬೆಳವಣಿಗೆಗೆ ಒಂದು ಕಾರಣವಾಗಿರಬಹುದು ಎಂಬ ಚರ್ಚೆ ನಡೆದಿದೆ. ಪಶ್ಚಿಮ ಸಹಾರಾ ವಿವಾದದಲ್ಲಿ ಮೊರೊಕ್ಕೊ ಮತ್ತು ಅಲ್ಜೀರಿಯಾ ಹಲವು ದಶಕಗಳಿಂದ ಭಿನ್ನ ನಿಲುವುಗಳನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಸ್ಪೇನ್‌ ಪ್ರಧಾನಿಯ ಅಲ್ಜೀರಿಯಾ ಭೇಟಿಯಿಂದ ಅಸಮಾಧಾನಗೊಂಡ ಮೊರೊಕ್ಕೊ, ಗಡಿ ನಿಯಂತ್ರಣವನ್ನು ಉದ್ದೇಶಪೂರ್ವಕವಾಗಿ ಸಡಿಲಗೊಳಿಸಿರಬಹುದು ಎಂದು ಕೆಲವು ವಲಸೆ ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಕುರಿತು ಮೊರೊಕ್ಕೊ ಸರ್ಕಾರ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ

ಮೂರನೆಯದಾಗಿ, ಮಾನವ ಕಳ್ಳಸಾಗಣೆ ಜಾಲಗಳು ಸ್ಪೇನ್‌ನ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಬಗ್ಗೆ ತಪ್ಪು ಮಾಹಿತಿ ಹರಡಿರುವ ಸಾಧ್ಯತೆಯನ್ನು ಸ್ಪೇನ್ ಸರ್ಕಾರ ಉಲ್ಲೇಖಿಸಿದೆ. ಸಮುದ್ರ ಮಾರ್ಗದಿಂದ ಸ್ಪೇನ್ ತಲುಪುವ ವಲಸಿಗರನ್ನು ತಕ್ಷಣ ಹಿಂದಕ್ಕೆ ಕಳುಹಿಸಲಾಗುವುದಿಲ್ಲ ಎಂಬ ವದಂತಿಯನ್ನು ಕಳ್ಳಸಾಗಣೆ ಜಾಲಗಳು ಹರಡಿದ್ದರಿಂದ, ಸಾವಿರಾರು ಜನ ಸ್ಯೂಟದತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಪ್ರಧಾನಿ ಪೆಡ್ರೊ ಸಾಂಚೆಝ್ ಆರೋಪಿಸಿದ್ದಾರೆ.

2021ರ ಘಟನೆಯ ಪುನರಾವರ್ತನೆ?

ಇದು ಮೊದಲ ಬಾರಿಗೆ ಸಂಭವಿಸಿದ್ದೇನಲ್ಲ. 2021ರಲ್ಲಿಯೂ ಸ್ಪೇನ್ ಮತ್ತು ಮೊರೊಕ್ಕೊ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾವಿರಾರು ಜನ ಏಕಕಾಲದಲ್ಲಿ ಸ್ಯೂಟಗೆ ಪ್ರವೇಶಿಸಿದ್ದರು. ಆಗ ಪಶ್ಚಿಮ ಸಹಾರಾ ಸ್ವಾತಂತ್ರ್ಯ ಚಳವಳಿಯ ನಾಯಕನಿಗೆ ಸ್ಪೇನ್ ಚಿಕಿತ್ಸೆ ನೀಡಿದ್ದನ್ನು ವಿರೋಧಿಸಿ ಮೊರೊಕ್ಕೊ ಗಡಿ ನಿಯಂತ್ರಣವನ್ನು ಸಡಿಲಗೊಳಿಸಿತ್ತು ಎಂಬ ಆರೋಪ ಕೇಳಿಬಂದಿತ್ತು.

ಮಾನವೀಯ ಸಂಕಷ್ಟ

ಈ ಬಾರಿಯ ಘಟನೆ ಸೆಯುಟಾದಲ್ಲಿ ತೀವ್ರ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸುಮಾರು 80 ಸಾವಿರ ಜನಸಂಖ್ಯೆ ಹೊಂದಿರುವ ಈ ಪ್ರದೇಶಕ್ಕೆ ಒಂದೇ ದಿನದಲ್ಲಿ ಸುಮಾರು 50 ಸಾವಿರ ವಲಸಿಗರು ಪ್ರವೇಶಿಸಲು ಯತ್ನಿಸಿದ್ದು, ಇದು ಸ್ಥಳೀಯ ಆಡಳಿತದ ಮೇಲೆ ಭಾರೀ ಒತ್ತಡವನ್ನು ಉಂಟುಮಾಡಿದೆ. ಗಡಿ ದಾಟುವ ಪ್ರಯತ್ನದ ವೇಳೆ ಕನಿಷ್ಠ 60 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿಯನ್ನು ಸ್ಪೇನ್ ಅಧಿಕಾರಿಗಳು ಮತ್ತೆ ಮೊರೊಕ್ಕೊಗೆ ಹಿಂದೆ ಕಳುಹಿಸಿದ್ದಾರೆ.

ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, 2014ರಿಂದ ಮೆಡಿಟರೇನಿಯನ್ ಸಮುದ್ರ ಮಾರ್ಗದಲ್ಲಿ 35 ಸಾವಿರಕ್ಕೂ ಹೆಚ್ಚು ವಲಸಿಗರು ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ. 2026ರ ಮೊದಲ ಏಳು ತಿಂಗಳಲ್ಲಿ ಮಾತ್ರ ಸುಮಾರು 1,500 ಮಂದಿ ಜೀವ ಕಳೆದುಕೊಂಡಿರುವುದು ಈ ಮಾರ್ಗದ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಸ್ಪೇನ್ ಮತ್ತು ಯುರೋಪಿನ ಪ್ರತಿಕ್ರಿಯೆ

ಘಟನೆಯ ನಂತರ ಸ್ಪೇನ್ ಸರ್ಕಾರ ಸೇನೆ ಹಾಗೂ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಿ ಗಡಿ ನಿಯಂತ್ರಣವನ್ನು ಪುನಃ ಬಿಗಿಗೊಳಿಸಿದೆ. ಪ್ರಧಾನಿ ಪೆಡ್ರೊ ಸಾಂಚೆಝ್ ಈ ಘಟನೆಯನ್ನು 'ಸ್ಪೇನ್‌ನ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಸವಾಲು' ಎಂದು ಬಣ್ಣಿಸಿದ್ದಾರೆ.

ಈ ಬೆಳವಣಿಗೆ ಐರೋಪ್ಯ ಒಕ್ಕೂಟದಲ್ಲೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕೆಲವು ದೇಶಗಳು ಕಠಿಣ ವಲಸೆ ನೀತಿಗೆ ಒತ್ತಾಯಿಸಿದರೆ, ಇನ್ನು ಕೆಲವು ಸರ್ಕಾರಗಳು ಮಾನವೀಯ ದೃಷ್ಟಿಕೋನದಿಂದ ಸಮಸ್ಯೆ ಪರಿಹರಿಸುವ ಅಗತ್ಯವನ್ನು ಒತ್ತಿ ಹೇಳಿವೆ.

ಜಾಗತಿಕ ವಲಸೆ ಬಿಕ್ಕಟ್ಟಿನ ಪ್ರತೀಕ

ಸ್ಯೂಟದ ಘಟನೆ ಕೇವಲ ಒಂದು ಗಡಿ ಉಲ್ಲಂಘನೆಯಲ್ಲ. ಉತ್ತಮ ಬದುಕಿನ ಕನಸು ಹೊತ್ತ ಸಾವಿರಾರು ಜನರ ನಿರಾಶೆ, ಉತ್ತರ ಆಫ್ರಿಕಾ-ಯುರೋಪ್ ರಾಜಕೀಯ ಸಂಬಂಧಗಳು ಮತ್ತು ಗಡಿ ಭದ್ರತೆ ನಡುವಿನ ಸಂಕೀರ್ಣ ವಾಸ್ತವಿಕತೆಯ ಪ್ರತೀಕವಾಗಿದೆ. ಆರ್ಥಿಕ ಅಸಮಾನತೆ, ಯುದ್ಧ, ರಾಜಕೀಯ ಅಸ್ಥಿರತೆ ಮತ್ತು ರಾಜತಾಂತ್ರಿಕ ಉದ್ವಿಗ್ನತೆಗಳು ಮುಂದುವರಿಯುವವರೆಗೂ ಸ್ಯೂಟದಂತಹ ಗಡಿಗಳು ಜಾಗತಿಕ ವಲಸೆ ಬಿಕ್ಕಟ್ಟಿನ ಕೇಂದ್ರವಾಗಿಯೇ ಉಳಿಯುವ ಸಾಧ್ಯತೆ ಇದೆ.

(ಆಧಾರ: ದಿ ಗಾರ್ಡಿಯನ್ ಹಾಗೂ ರಾಯಿಟರ್ಸ್)

Dailyhunt
Disclaimer: This content has not been generated, created or edited by Dailyhunt. Publisher: Prajavani