ಡಾಕರ್ (ಸೆನೆಗಲ್): ಮಣಿಪುರದ ವುಶುಪಟು ರಾಜಕುಮಾರಿ ಲಾಲ್‌ಚೆನ್‌ಬಿ ಚಾನು ಅವರು ಯೂತ್ ಒಲಿಂಪಿಕ್ಸ್‌ನಲ್ಲಿ ಮಂಗಳವಾರ ಕಂಚಿನ ಪದಕ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದರು. ವುಶು ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಮಹಿಳೆಯರ 'ಚಾಂಗ್‌ಕ್ವಾನ್ ಕಂಬೈನ್ಡ್' ಸ್ಪರ್ಧೆಯಲ್ಲಿ 15 ವರ್ಷದ ಚಾನು ಒಟ್ಟು 18.039 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದರು. ಈಜಿಪ್ಟ್‌ನ ಸೋಂಡೋಸ್ ಸೊನ್‌ಬೋಲ್ (18.660) ಚಿನ್ನ ಗೆದ್ದರೆ, ವೆನೆಜುವೆಲಾದ ವ್ಯಾಲೆರಿಯಾ ಫ್ರಾನೆರಿಸ್ ದುಡಾಮೆಲ್ (18.199) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಕೂಟದಲ್ಲಿ ಭಾರತಕ್ಕೆ ಲಭಿಸಿದ ಮೂರನೇ ಪದಕ ಇದಾಗಿದೆ. ಸೋಮವಾರ ಜುಡೊಕಾ ಖುಷ್ಬು ರಜಾಕ್ ಭಾಯ್ ಬೆಳ್ಳಿ ಗೆದ್ದರೆ, ಬೆಂಗಳೂರಿನ ಈಜುಗಾರ್ತಿ ದಿನಿಧಿ ದೇಸಿಂಗು ಮಹಿಳೆಯರ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಕಂಚು ಜಯಿಸಿದ್ದರು.
261104-4-913435617

