Dailyhunt Logo
  • Light mode
    Follow system
    Dark mode
    • Play Story
    • App Story

ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

Pratidhvani 4 days ago

ಬೆಂಗಳೂರು : ಐಪಿಎಲ್ 2026ರ ಆವೃತ್ತಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 222/4 ರನ್ ಗಳಿಸಿದ್ದು, ರನ್‌ ಮಷಿನ್‌ ವಿರಾಟ್‌ ಕೊಹ್ಲಿ ಅಬ್ಬರಿಸಿದ್ದಾರೆ. ಧರ್ಮಶಾಲಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿರುವ ಆರ್‌ಸಿಬಿ ಕಳಪೆ ಆರಂಭ ಮಾಡಿದರೂ,, ಪಂಜಾಬ್ ಕಿಂಗ್ಸ್​ಗೆ 223 ರನ್​ಗಳ ಕಠಿಣ ಟಾರ್ಗೆಟ್‌ ನೀಡಿದೆ.

ವಿರಾಟ್ ಕೊಹ್ಲಿ (58), ವೆಂಕಟೇಶ್ ಅಯ್ಯರ್ (ಅಜೇಯ 73) ಅರ್ಧಶತಕ ಹಾಗೂ ದೇವದತ್ ಪಡಿಕ್ಕಲ್ (45) ಅಬ್ಬರದ ನೆರವಿನಿಂದ ಆರ್​ಸಿಬಿ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ.

ಇದನ್ನೂ ಓದಿ : ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

ವೆಂಕಟೇಶ್ ಅಯ್ಯರ್ 73 ರನ್ ಗಳಿಸಿ ಅಜೇಯರಾಗಿ ಉಳಿದರು. ವಿರಾಟ್ ಕೊಹ್ಲಿ (58) ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿ ಎರಡನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್ (45) ಅವರೊಂದಿಗೆ 76 ರನ್‌ಗಳ ಜೊತೆಯಾಟ ಆರ್‌ಸಿಬಿಗೆ ಅಡಿಪಾಯ ಹಾಕುವಲ್ಲಿ ಸಫಲವಾಗಿದೆ.

ಅಯ್ಯರ್ ಅವರೊಂದಿಗೆ 60 ರನ್‌ಗಳ ಮೂರನೇ ವಿಕೆಟ್ ಜೊತೆಯಾಟದಲ್ಲಿ ಪಡಿಕ್ಕಲ್ ಸೇರಿಕೊಂಡರು, ಸದ್ಯದ ಐಪಿಎಲ್‌ನ ಅದ್ಭುತ ಆಟವಾಡುತ್ತಿರು ಆರ್‌ಸಿಬಿ ಉತ್ತಮ ಬ್ಯಾಟಿಂಗ್‌ ನೀಡುವ ಪ್ರಯತ್ನ ಮಾಡಿದೆ. ಆದರೆ ಕೊಹ್ಲಿ ಔಟಾದ ನಂತರ ಅಯ್ಯರ್ ತೀವ್ರ ಆಕ್ರಮಣಕಾರಿಯಾದ ಆಟಕ್ಕೆ ಮುಂದಾದರು. ಈ ಹಿನ್ನೆಲೆಯಲ್ಲಿ, ಈ ಆಟಗಾರನ ಸ್ಫೋಟಕ ಸ್ಟ್ರೈಕ್ ದರವು 200 ರನ್‌ಗಳ ಗಡಿ ದಾಟುವಲ್ಲಿ ಹಿಂದೆ ಬೀಳಲಿಲ್ಲ. ಇನ್ನೂ ಪಂಜಾಬ್‌ ತಂಡದ ಪರವಾಗಿ, ಹರ್‌ಪ್ರೀತ್ ಬ್ರಾರ್ ಎರಡು ವಿಕೆಟ್‌ಗಳನ್ನು ಪಡೆದರು.

ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಈ ಆವೃತ್ತಿಯಲ್ಲಿ 500 ರನ್​ಗಳ ಗಡಿ ಕೂಡ ದಾಟಿದರು. ಇಲ್ಲಿಯವರೆಗೆ ನಡೆದಿರುವ 19 ಆವೃತ್ತಿಗಳಲ್ಲಿ ಕೊಹ್ಲಿ 500 ಕ್ಕೂ ಅಧಿಕ ರನ್ ಕಲೆಹಾಕಿರುವ 9ನೇ ಸೀಸನ್ ಇದಾಗಿದೆ. ಈ ಮೂಲಕ ಅಧಿಕ ಬಾರಿ 500+ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Pratidhvani