Dailyhunt Logo
  • Light mode
    Follow system
    Dark mode
    • Play Story
    • App Story

BIG BREAKING : ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಶುಭ ಶುಕ್ರವಾರ ; ಕೊಲೆ ಕೇಸ್‌ನಲ್ಲಿ ಜಾಮೀನು..!

Pratidhvani 1 week ago

ಬೆಂಗಳೂರು : ಧಾರವಾಡದ ಯೋಗೇಶ್‌ ಗೌಡ ಕೊಲೆ ಪ್ರಕಣದಲ್ಲಿ ಜೀವಾವಾಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಹೈಕೋರ್ಟ್‌ ದಿಸದಸ್ಯ ಪೀಠ ಆದೇಶ ಹೊರಡಿಸಿದೆ. ಜಾಮೀನು ನೀಡಿದೆ. ಇದೀಗ ಅವರ ಶಾಸಕ ಸ್ಥಾನಕ್ಕೆ ಮತ್ತೆ ಜೀವ ಬಂದಂತಾಗಿದೆ.

5 ಲಕ್ಷ ರೂಪಾಯಿಗಳ ಬಾಂಡ್‌ ಜೊತೆಗೆ ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಹೈಕೋರ್ಟ್‌ ಜಾಮೀನು ನೀಡಿದೆ. ಇದೇ ವೇಳೆ ಧಾರವಾಡಕ್ಕೆ ಪ್ರವೇಶಕ್ಕೆ ಹೈಕೋರ್ಟ್ ಅವಕಾಶ ನೀಡಿದ್ದು ವಿಶೇಷವಾಗಿದೆ.

ಕಳೆದ ಏಪ್ರಿಲ್‌ 17 ರಿಂದ ಜೈಲಿನಲ್ಲಿದ್ದ ವಿನಯ್‌ ಕುಲಕರ್ಣಿಗೆ ಹೈಕೋರ್ಟ್‌ ತೀರ್ಪಿನಿಂದ ಬಿಗ್‌ ರಿಲೀಫ್‌ ಸಿಕ್ಕಿದ್ದು, ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೋಗುವಂತಿಲ್ಲ ಎಂದು ಹೈಕೋರ್ಟ್‌ ಸೂಚನೆ ನೀಡಿದೆ.

ನ್ಯಾ.ಮೊಹಮ್ಮದ್ ನವಾಜ್, ಜಿ.ಬಸವರಾಜ ಅವರಿದ್ದ ಪೀಠದಿಂದ ಈ ಆದೇಶ ಹೊರಬಿದ್ದಿರುವ ಈ ಆದೇಶದಲ್ಲಿ 10 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

ಪ್ರಕರಣದ ಹಿನ್ನೆಲೆ ಏನು..?

ಯೋಗೇಶ್ಗೌಡ(ಯೋಗೇಶ್ಗೌಡರ್)ಧಾರವಾಡಜಿಲ್ಲಾಪಂಚಾಯತ್‌ನಮಾಜಿಸದಸ್ಯ.2016ರಜೂನ್15ರಂದುಬೆಳಗ್ಗೆ ಧಾರವಾಡದಸಪ್ತಾಪುರದಲ್ಲಿರುವತಮ್ಮಜಿಮ್‌ಹೊರಗೆಅವರನ್ನುಬರ್ಬರವಾಗಿಕೊಚ್ಚಿಕೊಲೆಮಾಡಲಾಗಿತ್ತು.ಮೆಣಸಿನಪುಡಿಎಸೆದುಕತ್ತಿ/ಆಯುಧಗಳಿಂದಹಲ್ಲೆಮಾಡಿದ್ದರು.ಈಘಟನೆರಾಜ್ಯವನ್ನೇನಡುಗಿಸಿತ್ತು.

ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ 17 ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರ ಪರಿಣಾಮವಾಗಿ ವಿನಯ್ ಕುಲಕರ್ಣಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು. ಆದರೆ ಇಂದು ಹೈಕೋರ್ಟ್ ಶಿಕ್ಷೆ ಮತ್ತು ದೋಷಾರೋಪಣೆಯ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಜಾಮೀನು ಮಂಜೂರು ಮಾಡಿದೆ. ಹೀಗಾಗಿ, ವಿನಯ್ ಕುಲಕರ್ಣಿಗೆ ಅವರ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಮಧ್ಯಂತರವಾಗಿ ಕಾನೂನಾತ್ಮಕ ಪರಿಹಾರ ದೊರೆತಂತಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Pratidhvani