
ನವದೆಹಲಿ: ಭಾರತದ ಬಾಕ್ಸಿಂಗ್ ತಾರೆ ಪರ್ವೀನ್ ಹೂಡಾ (Parveen Hooda) ಏಷ್ಯನ್ ಗೇಮ್ಸ್ (Asian Games) 2026ರಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮಹಿಳೆಯರ ಬಾಕ್ಸಿಂಗ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಚೈನೀಸ್ ತೈಪೆಯ ಬಲಿಷ್ಠ ಸ್ಪರ್ಧಿ ನಿಯೆನ್-ಚಿನ್ ಚೆನ್ ಅವರನ್ನು ಮಣಿಸಿ ಪರ್ವೀನ್ ಈ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತದ ಕೇವಲ 3ನೇ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪರ್ವೀನ್ ಪಾತ್ರರಾಗಿದ್ದಾರೆ. ಈ ಗೆಲುವಿನೊಂದಿಗೆ ಪ್ರಸ್ತುತ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಪದಕ ಪಟ್ಟಿಯಲ್ಲಿ ಭಾರತದ ಭರ್ಜರಿ ಮುನ್ನಡೆ ಮುಂದುವರಿದಿದೆ.

ರಿಂಗ್‌ನಲ್ಲಿ ಆರಂಭದಿಂದಲೇ ಅದ್ಭುತ ಪಂಚ್ ಹಾಗೂ ರಕ್ಷಣಾತ್ಮಕ ಕೌಶಲ ತೋರಿದ ಪರ್ವೀನ್, ಎದುರಾಳಿಗೆ ಯಾವುದೇ ಅವಕಾಶ ನೀಡದೆ ಪಂದ್ಯವನ್ನು ತಮ್ಮ ಪರವಾಗಿಸಿಕೊಂಡರು. ಭಾರತೀಯ ಬಾಕ್ಸಿಂಗ್ ಇತಿಹಾಸಕ್ಕೆ ಹೊಸ ಮೆರುಗು ತಂದ ಪರ್ವೀನ್ ಸಾಧನೆಗೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾಗೆ ಸ್ಯಾಂಡಲ್‌ವುಡ್ ತಾರಾ ಮೆರಗು: ಇಡೀ ಚಿತ್ರರಂಗ ಭಾಗಿ | Sandalwood
