ಬೆಂಗಳೂರು : ಸದ್ಯ ಕುತೂಹಲ ಕೆರಳಿಸಿದ್ದ ಟಾಲಿವುಡ್‌ನ ಬಹು ನಿರೀಕ್ಷೆಯ ಸಿನಿಮಾ ಡ್ರ್ಯಾಗನ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಜೂನಿಯರ್ ಎನ್‌ಟಿಆರ್ ಅವರ ಬರ್ತ್ ಡೇ ಸಲುವಾಗಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಈ ಚಿತ್ರದ ಮೇಲೆ ಇನ್ನಿಲ್ಲದ ನಿರೀಕ್ಷೆಗಳು ಗರಿಗೆದರಿವೆ.
ಈಗಾಗಲೇ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇದ್ದರು. ಆದರೆ, ಎಲ್ಲೂ ಕೂಡ ಸಿನಿಮಾ ಕುರಿತು ಒಂದು ಸಣ್ಣ ವಿಷಯವನ್ನೂ ಹೇಳಿಕೊಂಡಿರಲಿಲ್ಲ.

ಜೂ.ಎನ್‌ಟಿಆರ್ ಅವರ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಪ್ರಶಾಂತ್ ನೀಲ್ ಅವರು ಡ್ರ್ಯಾಗನ್ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡುವ ಮೂಲಕ ಗಿಫ್ಟ್ ನೀಡಿದ್ದಾರೆ. ಅಭಿಮಾನಿಗಳಿಗಂತೂ ಜೂ.ಎನ್‌ಟಿಆರ್ ಅವರ ಗ್ಲಿಂಪ್ಸ್ ನೋಡಿ ಸಖತ್ ಖುಷಿಯಾಗಿದೆ. ಸಲಾರ್ ಸಿನಿಮಾ ಮುಗಿದ ಬಳಿಕ ಪ್ರಶಾಂತ್ ನೀಲ್ ಅವರು ಜೂ.ಎನ್‌ಟಿಆರ್ ಅವರೊಂದಿಗೆ ಈ ಚಿತ್ರ ಮಾಡಿದ್ದರು. ಆರಂಭದಿಂದಲೂ ಒಂದಷ್ಟು ಮಂದಿಗೆ ಈ ಚಿತ್ರದ ಮೇಲೆ ನಿರೀಕ್ಷೆ ಇತ್ತು. ಕಾರಣ, ಜೂ.ಎನ್‌ಟಿಆರ್ ಅವರನ್ನು ಹೇಗೆ ತೋರಿಸಬಹುದು ಅಂತ. ಅದರಲ್ಲೂ ಕಥೆ ಏನಿರಬಹುದು. ಮೇಕಿಂಗ್ ಹೇಗೆಲ್ಲಾ ಮಾಡುತ್ತಾರೆ ಅನ್ನೋ ಕುತೂಹಲವಿತ್ತು. ಅದಕ್ಕೆ ಇದೀಗ ಗ್ಲಿಂಪ್ಸ್ ಉತ್ತರ ನೀಡಿದೆ.
ಇದನ್ನೂ ಓದಿ : ದರ್ಶನ್-ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?
ಸದ್ಯ ಗ್ಲಿಂಪ್ಸ್ ಸಖತ್ ಟ್ರೆಂಡಿಂಗ್‌ನಲ್ಲಿದೆ. ಒಂದಷ್ಟು ಫ್ಯಾನ್ಸ್ ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಡ್ರ್ಯಾಗನ್ ಮೊದಲ ಗ್ಲಿಂಪ್ಸ್ ಮಾಸ್ ಕಾ ಬಾಸ್, ಎನ್‌ಟಿಆರ್ ಅವರ ಅದ್ಭುತ ಸ್ಕ್ರೀನ್ ಪ್ರೆಸೆನ್ಸ್ ಮತ್ತು ನಿರ್ದೇಶಕ ಕಥೆ ಹೇಳಿರುವ ರೀತಿ, ಆಕ್ಷನ್ ಮತ್ತು ಕೆಲ ರೋಚಕ ಸನ್ನಿವೇಶಗಳು ಹೊಸ ಅನುಭವ ನೀಡಿದೆ.
ಇಲ್ಲೊಂದು ಹೊಸ ಪ್ರಪಂಚದಂತೆ ಕಾಣುವ ಗ್ಲಿಂಪ್ಸ್ ಸಖತ್ ಕುತೂಹಲದಿಂದ ಕೂಡಿದೆ. ಸದ್ಯ ಸಿನಿಮಾ ಚಿತ್ರಮಂದಿರಕ್ಕೆ ಯಾವಾಗ ಎಂಟ್ರಿಯಾಗುತ್ತೆ ಅನ್ನೋ ಕುತೂಹಲ ಇದೆ. ಕುತೂಹಲಕ್ಕೆ ಗ್ಲಿಂಪ್ಸ್ ನ ಕೊನೆಯಲ್ಲಿ ಉತ್ತರವಿದೆ. ಅದೇನೆ ಇರಲಿ, ಗ್ಲಿಂಪ್ಸ್ ನೋಡಿದ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಅಭಿಪ್ರಾಯದಲ್ಲಿ ಟೀಕೆಗಳೂ ಇವೆ. ಮೆಚ್ಚುಗೆಯೂ ಇದೆ. ಏನೇ ಆಗಲಿ, ಒಂದು ಸಿನಿಮಾ ಅಂದಮೇಲೆ ಒಂದಷ್ಟು ಪರ ವಿರೋಧ ಚರ್ಚೆಗಳು ಸಹಜ. ಇಲ್ಲೂ ಅದು ಮುಂದುವರೆಯುತ್ತಲೇ ಇದೆ. ಸದ್ಯ ಈ ಸಿನಿಮಾ ಥಿಯೇಟರ್ ಗೆ ಬರೋಕೆ ಇನ್ನೂ ಬರೋಬ್ಬರಿ ಒಂದು ವರ್ಷ ಕಾಯಬೇಕು.
ವರದಿ :ವಿಜಯ ಭರಮಸಾಗರ,
ಹಿರಿಯ ಸಿನಿಮಾ ಪತ್ರಕರ್ತರು.
