C NEWS KANNADA

@rakshit9197757574482

18 Dec 2021.8:53 PM

2.1k Views

*ಲೀಲಾ ಪೂನಾವಾಲಾ ಪ್ರತಿಷ್ಠಾನದಿಂದ ಬೆಂಗಳೂರಿನ ಯುವತಿಯರಿಂದ* *ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ*

ಆರ್ಥಿಕವಾಗಿ ಹಿಂದುಳಿದ, ಆದರೆ ಕಲಿಕೆಯಲ್ಲಿ ಮುಂದಿರುವ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಕಾರ್ಯದಲ್ಲಿ ಲೀಲಾ ಪೂನಾವಾಲಾ ಪ್ರತಿಷ್ಠಾನ (ಎಲ್ಪಿಎಫ್) ತೊಡಗಿಕೊಂಡು 2021ಕ್ಕೆ 26 ಅಮೋಘ ವರ್ಷಗಳು ಸಂದಿವೆ.

ಕಳೆದ 25 ವರ್ಷಗಳಲ್ಲಿ ಪ್ರತಿಷ್ಠಾನವು ಮಹಾರಾಷ್ಟ್ರದ ಪುಣೆ, ವಾರ್ಧಾ, ಅಮರಾವತಿ ಹಾಗೂ ನಾಗ್ಪುರದಲ್ಲಿ ಮತ್ತು ತೆಲಂಗಾಣದ ಹೈದರಾಬಾದ್ನಲ್ಲಿ 10,800ಕ್ಕೂ ಅಧಿಕ ಹೆಣ್ಣುಮಕ್ಕಳ ಬದುಕನ್ನು ಬದಲಿಸಿದೆ. ಈ ವರ್ಷ ಕರ್ನಾಟಕದ ಬೆಂಗಳೂರಿನಲ್ಲೂ ಎಲ್ಪಿಎಫ್ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ.

“ಎಲ್ಪಿಎಫ್ಗೆ 2021ನೇ ವರ್ಷವು ಮೈಲುಗಲ್ಲಿದ್ದಂತೆ. ನಾವು ಸಮಾಜ ಸೇವೆಯಲ್ಲಿ 26 ವರ್ಷಗಳನ್ನು ಪೂರೈಸುವುದರ ಜೊತೆಗೆ ಮಹಾರಾಷ್ಟ್ರದ ಹೊರಗೂ ನಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ. ಇದೇ ಮೊದಲ ಬಾರಿಗೆ ಬೆಂಗಳೂರು ಜಿಲ್ಲೆಯಲ್ಲಿ ಈ ವರ್ಷದಿಂಧ ಮೆರಿಟ್ ಆಧಾರಿತ ವಿದ್ಯಾರ್ಥಿ ವೇತನವನ್ನು ಆರಂಭಿಸುತ್ತಿದ್ದೇವೆ. ಅರ್ಹ ಹೆಣ್ಣುಮಕ್ಕಳು ಈ ಸ್ಕಾಲರ್ಶಿಪ್ಗೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಾರೆಂಬ ನಿರೀಕ್ಷೆಯಿದೆ” ಎಂದು ಎಲ್ಪಿಎಫ್ನ ಚೇರ್ಮನ್ ಶ್ರೀಮತಿ ಲೀಲಾ ಪೂನಾವಾಲಾ ಹೇಳಿದ್ದಾರೆ.

ಚೇರ್ಮನ್ ಶ್ರೀಮತಿ ಲೀಲಾ ಪೂನಾವಾಲಾ (1989ರಲ್ಲಿ ಪದ್ಮಶ್ರೀ ಪುರಸ್ಕøತರು) ಹಾಗೂ ಶ್ರೀ ಫಿರೋಜ್ ಪೂನಾವಾಲಾ (ಸಂಸ್ಥಾಪಕ ಟ್ರಸ್ಟಿ, ಎಲ್ಪಿಎಫ್) ಅವರಿಂದ ಆರಂಭಗೊಂಡ ಎಲ್ಪಿಎಫ್, ಈವರೆಗೆ ಸಾಕಷ್ಟು ಹೆಣ್ಣುಮಕ್ಕಳು ಸ್ಕಾಲರ್ಶಿಪ್ ಪಡೆದು ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿರುವುದಕ್ಕೆ ಸಾಕ್ಷಿಯಾಗಿದೆ. ಇದೀಗ ಪ್ರತಿಷ್ಠಾನವು ಬೆಂಗಳೂರು ಜಿಲ್ಲೆಯ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಯುವತಿಯರಿಂದ ವಿದ್ಯಾರ್ಥಿವೇತನಕ್ಕೆ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಿದೆ. 2021-2022ನೇ ಸಾಲಿನಲ್ಲಿ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ 4 ವರ್ಷದ ಪದವಿ ವ್ಯಾಸಂಗ ಮಾಡಲು ಬಯಸುವ ಹಾಗೂ 3 ವರ್ಷದ ಡಿಪ್ಲೊಮಾ ನಂತರ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿನಿಯರು ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಬಹುದು.

ಪದವಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನದ ಅರ್ಜಿಗಳು https://www.lpfscholarship.comನಲ್ಲಿ ಲಭ್ಯವಿವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಲೀಲಾ ಶ್ರೀರಾಮ್, ದೂರವಾಣಿ ಸಂಖ್ಯೆ 080-29903808/ +91 8956982190 (ಸಮಯ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ, ಸೋಮವಾರದಿಂದ ಶನಿವಾರದವರೆಗೆ).

ಇ-ಮೇಲ್ ಐಡಿ: lpfbengaluruscholarship@lilapoonawallafoundation.com

ಇನ್ನಷ್ಟು ವಿವರಗಳಿಗೆ ಎಲ್ಪಿಎಫ್ ವೆಬ್ಸೈಟ್ಗೆ ಭೇಟಿ ನೀಡಿ https://www.lilapoonawallafoundation.com

ಗಮನಿಸಿ: ಮೊದಲು ಬಂದವರಿಗೆ ಆದ್ಯತೆಯ ಮೇಲೆ ಸೀಮಿತ ಸಂಖ್ಯೆಯ ಅರ್ಜಿಗಳು ಮಾತ್ರ ಲಭ್ಯವಿರುತ್ತವೆ.
Disclaimer

Disclaimer

This content has been published by the user directly on Dailyhunt, an intermediary platform. Dailyhunt has neither reviewed nor has knowledge of such content. Publisher: C NEWS KANNADA