ಜೀವನ ಜೈಲಿ
ಭಾರತದಲ್ಲಿ ಪ್ರತಿ ವರ್ಷ ವ್ಯರ್ಥವಾಗುತ್ತಿರುವ ಆಹಾರ ಎಷ್ಟು ಗೊತ್ತಾ..! ವಿಶ್ವಸಂಸ್ಥೆಯಿಂದ ಆಘಾತಕಾರಿ ಮಾಹಿತಿ

ಭಾರತದಲ್ಲಿ ಪ್ರತಿ ವರ್ಷ ವ್ಯರ್ಥವಾಗುತ್ತಿರುವ ಆಹಾರ ಎಷ್ಟು ಗೊತ್ತಾ..! ವಿಶ್ವಸಂಸ್ಥೆಯಿಂದ ಆಘಾತಕಾರಿ ಮಾಹಿತಿ
ನವದೆಹಲಿ: ನಮ್ಮ ದೇಶದಲ್ಲಿ ಅದೆಷ್ಟೋ ಜನರು ಹೊಟ್ಟೆಗೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದ್ರೆ ಮತ್ತೊಂದೆಡೆ ಊಟದ ಬೆಲೆ ಗೊತ್ತಿಲ್ಲದೇ ಹಸಿವಿನ ಅರ್ಥ ಗೊತ್ತಿಲ್ಲದವರೂ ಕೂಡ ಇದ್ದಾರೆ. ಆಹಾರವನ್ನ ವ್ಯರ್ಥ ಮಾಡೋರು ಸಿಗುತ್ತಾರೆ. ಅಂದ್ಹಾಗೆ ವಿಶ್ವಸಂಸ್ಥೆ ಜಾಗತಿಕವಾಗಿ ವರ್ಷಕ್ಕೆ ವೇಸ್ಟ್ ಆಗುವ ಆಹಾರದ ಬಗ್ಗೆ ಆಘಾತಕಾರಿ ವರದಿ ನೀಡಿದೆ. ಈ ವರದಿ ಅನ್ವಯ ಕೇವಲ 2019ರಲ್ಲಿ ವಿಶ್ವದಲ್ಲಿ 93.1 ಕೋಟಿ ಟನ್ ಆಹಾರ ವ್ಯರ್ಥವಾಗಿದೆ. ಇದೇ ವರ್ಷದಲ್ಲಿ ಬಾರತದಲ್ಲಿ 6.87 ಕೋಟಿ ಟನ್ ಮನೆಯ ಆಹಾರ ವ್ಯರ್ಥವಾಗಿದೆ. UNEP ಮತ್ತು WRPF 2021ರ ಆಹಾರ ತ್ಯಾಜ್ಯ ಸೂಚ್ಯಂಕ ವರದಿ ರಿಲೀಸ್ ಮಾಡಿದೆ.
ವಿಶ್ವದಲ್ಲಿ 93.1 ಕೋಟಿ ಟನ್ ಆಹಾರ ತ್ಯಾಜ್ಯ ಉತ್ಪತ್ತಿಯಾಗಿದ್ದು, ಇದರಲ್ಲಿ ಶೇಕಡ 61ರಷ್ಟು ಭಾಗ ಮನೆಯ ಆಹಾರವಾಗಿದ್ದು, ಶೇಕಡ 13 ರಷ್ಟು ಭಾಗ ಚಿಲ್ಲರೆ ವ್ಯಾಪಾರದ್ದಾಗಿದೆ ಎಂದು ವರದಿ ತಿಳಿಸಿದೆ. ಇದರಲ್ಲಿ ಜಾಗತಿಕ ಆಹಾರ ಉತ್ಪಾದನೆಯಲ್ಲಿ ಶೇಕಡ 17ರಷ್ಟು ವ್ಯರ್ಥವಾಗಬಹುದು. ಭಾರತದಲ್ಲಿ ವರ್ಷಕ್ಕೆ ಅಂದಾಜು ಪ್ರತಿಯೊಂದು ಮನೆಯಲ್ಲಿ 50 ಕೆ.ಜಿಯಷ್ಟು ಆಹಾರ ಹಾಳಾಗುತ್ತಿದೆ. ಅಮೆರಿಕದಲ್ಲಿ 69 ಕೆ.ಜಿ ಮತ್ತು ಚೀನಾದಲ್ಲಿ 64 ಕೆ.ಜಿ ಆಹಾರ ವ್ಯರ್ಥವಾಗುತ್ತಿದೆ ಎಂದು ವರದಿ ಹೇಳಿದೆ. ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದು ವರ್ಷಕ್ಕೆ ಸರಾಸರಿ 50 ಕೆಜಿಯಷ್ಟು ಆಹಾರ ಪದಾರ್ಥ ವ್ಯರ್ಥ ಮಾಡುತ್ತಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಆದ್ರೆ ಭಾರತಕ್ಕಿಂತ ಹೆಚ್ಚು ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಆಹಾರ ವ್ಯರ್ಥವಾಗುತ್ತಿದೆ. ಬಾಂಗ್ಲಾದೇಶದಲ್ಲಿ ಪ್ರತೀ ವರ್ಷ 65 ಕಿ.ಗ್ರಾಂ, ಪಾಕಿಸ್ತಾನದಲ್ಲಿ 74 ಕಿ.ಗ್ರಾಂ, ಶ್ರೀಲಂಕಾದಲ್ಲಿ 76 ಕಿ.ಗ್ರಾಂ, ನೇಪಾಳದಲ್ಲಿ 79 ಕಿ.ಗ್ರಾಂ, ಅಫ್ಘಾನಿಸ್ತಾನದಲ್ಲಿ 82 ಕಿ.ಗ್ರಾಂನಷ್ಟು ಆಹಾರ ವ್ಯರ್ಥವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
Namratha Rao
ಕಂಟೆಂಟ್ ಎಡಿಟರ್ -saakshatv.com