ಬುಮ್ರಾ ನಮ್ಮ ನಂಬರ್ ಒನ್ ಬೌಲರ್ : ರಾಹುಲ್
ಇಂಗ್ಲೆಂಡ್ : ಆತಿಥೇಯ ಇಂಗ್ಲೆಂಡ್ - ಭಾರತದ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಪಂದ್ಯದಲ್ಲಿ ಆಂಗ್ಲರು ಭಾರತಕ್ಕೆ 209 ರನ್ ಗಳ ಗುರಿ ನೀಡಿದ್ದರು. 4ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಕೊನೆಯ ದಿನ ಗೆಲ್ಲಲು ಭಾರತಕ್ಕೆ 157 ರನ್ ಗಳನ್ನು ಅವಶ್ಯಕತೆಯಿತ್ತು. ಆದರೆ ಮಳೆ ಕೊಹ್ಲಿ ಪಡೆಯನ್ನು ನಿರಾಶೆಗೊಳಿಸಿತು. ಆದ್ರೆ ಈ ಪಂದ್ಯದಲ್ಲಿ ಭಾರತದ ಪರ ಜಸ್ಪ್ರೀತ್ ಬೂಮ್ರಾ 9 ವಿಕೆಟ್ ಗಳನ್ನು ಪಡೆದು ಮಿಂಚಿದ್ರು.
ಬೂಮ್ರಾ ಪ್ರದರ್ಶನಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದು ಬೂಮ್ರಾ ಅವರ ಕಮ್ ಬ್ಯಾಕ್ ಅಂತ ಹೇಳುತ್ತಿದ್ದಾರೆ. ಈ ವಿಚಾರವಾಗಿ ಇದೀಗ ಕನ್ನಡಿಗ ಕೆ ಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದು, ಜಸ್ಪ್ರೀತ್ ಬುಮ್ರಾ ವಿಶ್ವದರ್ಜೆಯ ಬೌಲರ್ ಅನ್ನೋದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ.
ಅಲ್ಲದೆ ಎಲ್ಲಾ ಸಮಯ, ಎಲ್ಲಾ ಸಂದರ್ಭ, ಎಲ್ಲಾ ಪಂದ್ಯಗಳಲ್ಲೂ ಬುಮ್ರಾ ತನ್ನನ್ನು ತಾನು ಪ್ರೂವ್ ಮಾಡಿದ್ದಾರೆ, ಅವರು ನಮ್ಮ ನಂಬರ್ ಒನ್ ಬೌಲರ್ ಎಂದಿರುವ ರಾಹುಲ್, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನ್ಯೂಜಿಲೆಂಡ್ ವಿರುದ್ದ ಚೆನ್ನಾಗಿ ಆಡಿದರೂ, ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಒಂದೆರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ತೋರಿರಲಿಲ್ಲ. ಇದಕ್ಕೆ ಕೆಲವೊಂದು ಕಾರಣಗಳಿವೆ ಎಂದಿದ್ದಾರೆ.
Mahesh M Dhandu :
ಕಂಟೆಂಟ್ ಎಡಿಟರ್

