Sunday, 25 Apr, 4.30 pm Saaksha TV

ಮನರಂಜನೆ
ಬುಟ್ಟ ಬೊಮ್ಮ , ಫಿದಾ ರೆಕಾರ್ಡ್ ಬ್ರೇಕ್ ಮಾಡಿದ 'ಕಿರಿಕ್ ರಾಣಿ' ನಟನೆಯ ಹಾಡು..!

ಬುಟ್ಟ ಬೊಮ್ಮ , ಫಿದಾ ರೆಕಾರ್ಡ್ ಬ್ರೇಕ್ ಮಾಡಿದ 'ಕಿರಿಕ್ ರಾಣಿ' ನಟನೆಯ ಹಾಡು..!

ನ್ಯಾಷನಲ್ ಕ್ರಷ್ ರಷ್ಮಿಕಾ ಮಂದಣ್ಣ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್ ವುಡ್ ಕಿರಿಕ್ ಪಾರ್ಟಿ ಮೂಲಕ ಸಿನಿ ಜರ್ನಿ ಆರಂಭಿಸಿರುವ ಕಿರಿಕ್ ರಾಣಿ ಕಾಂಟ್ರವಸಿಗಳು , ಹಿಟ್ ಸಿನಿಮಾಗಳು ಇತರೇ ವಿಚಾರಗಳಲ್ಲಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿಯೇ ಇರುತ್ತಾರೆ. ಇದೀಗ ಮತ್ತೆ ಸುದ್ದಿಯಾಗಿರೋದಕ್ಕೆ ಕಾರಣ ರಷ್ಮಿಕಾ ಯೂಟ್ಯೂಬ್ ನಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ಹೌದು ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಅಲಾ ವೈಕುಂಠಪುರಂಲೋ ಸಿನಿಮಾದ ಬುಟ್ಟ ಬೊಮ್ಮ ಹಾಗೂ ಫಿದಾ ಸಿನಿಮಾದ ಹಾಡು ಆರ್ ಎಕ್ಸ್ 100 ಸಿನಿಮಾದ ಹಾಡು ಯೂಟ್ಯೂಬ್ ನಲ್ಲಿ ಮಾಡಿದ್ದ ಸಾಧನೆಯನ್ನ ಈಗ ರಷ್ಮಿಕಾ ಂದಣ್ಣ ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಸರಿಟಗಟ್ಟಿದೆ. ಹೌದು ಮಹೇಶ್ ಬಾಬು ನಾಯಕನಾಗಿರುವ ಈ ಸಿನಿಮಾದ ಮೈಂಡ್ ಬ್ಲಾಕ್ ಹಾಡು 10 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದು ರೆಕಾರ್ಡ್ ಮಾಡಿದೆ.

ಅಂದ್ಹಾಗೆ ರಷ್ಮಿಕಾ ಸದ್ಯ ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ದೇ ಬಾಲಿವುಡ್ ನ ಮೊದಲನೇ ಸಿನಿಮಾ ಮಿಷನ್ ಮಜ್ನು ಶೂಟಿಂಗ್ ಕೂಡ ಮುಗಿಸಿದ್ದಾರೆ. ಅವರ ನಟನೆಯ ಅಲ್ಲು ಅರ್ಜುನ್ ನಾಯಕನಾಗಿರುವ ಪುಷ್ಪಾ ಸಿನಿಮಾ ಇನ್ನೂ ರಿಲೀಸ್ ಆಗ್ಬೇಕಿದೆ.

Namratha Rao
ಕಂಟೆಂಟ್ ಎಡಿಟರ್ -saakshatv.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Saaksha TV
Top