Dailyhunt

ದುಬಾರಿ ಕಾರು ಖರೀದಿಸಿದ ಬಿಗ್ ಬಾಸ್ 6 ರ ವಿನ್ನರ್ ಶಶಿ..!

Saaksha TV 5 years ago

ದುಬಾರಿ ಕಾರು ಖರೀದಿಸಿದ ಬಿಗ್ ಬಾಸ್ 6 ರ ವಿನ್ನರ್ ಶಶಿ..!

ಬಿಗ್ ಬಾಸ್ 6 ರಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ಜನಪ್ರಿಯತೆ ಗಳಿಸಿದ್ದ ಶಶಿ ಮತ್ತೊಂದು ವಿಚಾರಕ್ಕೂ ಖ್ಯಾತಿ ಪಡೆದಿದ್ದಾರೆ. ಅದು ಆಧುನಿಕ ಶೈಲಿಯ ಕೃಷಿ. ಬಿಗ್ ಬಾಸ್ ನಂತರವೂ ಕೃಷಿಯಲ್ಲಿ ತೊಡಗಿರುವ ಶಶಿ ನಟನೆಯಲ್ಲೂ ಬ್ಯುಸಿಯಾಗಿದ್ದಾರೆ. ಆದ್ರೆ ಇದೀಗ ಶಶಿ ಸುದ್ದಿಯಲ್ಲಿರುವುದು ಒಂದು ಕಾರಿನ ವಿಚಾರವಾಗಿ. ಅದು ಕೂಡ ಅಂತಿಂತ ಕಾರಲ್ಲಿ. ಅತಿ ದುಬಾರಿ ಬೆಲೆಯ ಕಾರು..

ಹೌದು.. ಶಶಿ ಕುಮಾರ್ ಅವರು ಮಿನಿ ಕೂಪರ್ ಖರೀದಿಸಿದ್ದು, ಈ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ದುಬಾರಿ ಬೆಲೆಯ ಕಾರ್ ಖರೀದಿಸಿ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ.

'ನನ್ನ ಕನಸಿನ ಕಾರುಗಳಲ್ಲಿ ಒಂದಾದ ಮಿನಿ ಕೂಪರ್ ನನ್ನ ಪಾರ್ಕಿಂಗ್ ಸೇರಿದೆ.

ನನ್ನ ಮೊದಲ ಕಾರು ಓಮಿನಿ. ಆದರೀಗ ಕೇವಲ ಮಿನಿ' ಎಂದು ಬರೆದುಕೊಂಡಿದ್ದಾರೆ.

ಇನ್ನೂ ಸಿನಿಮಾ ವಿಚಾರವಾಗಿ ಮಾತನಾಡುವುದಾದ್ರೆ ಶಶಿ ಮೆಹಬೂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಆಂಟೋನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Namratha Rao
ಕಂಟೆಂಟ್ ಎಡಿಟರ್ -saakshatv.com

Dailyhunt
Disclaimer: This content has not been generated, created or edited by Dailyhunt. Publisher: Saaksha TV