Thursday, 16 Sep, 11.38 am Saaksha TV

ರಾಜ್ಯ
ಎಚ್ಚರದ ಗಂಟೆ : ಬೆಂಗಳೂರಲ್ಲಿ ಮತ್ತೆ ಕೊರೊನಾ ಹೆಚ್ಚಳ

ಎಚ್ಚರದ ಗಂಟೆ : ಬೆಂಗಳೂರಲ್ಲಿ ಮತ್ತೆ ಕೊರೊನಾ ಹೆಚ್ಚಳ Corona saaksha tv

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಎಚ್ಚರದ ಗಂಟೆ ಬಾರಿಸಿದೆ.

ನಗರದಲ್ಲಿ ಒಂದೇ ದಿನ ಕೊರೊನಾ ಪ್ರಕರಣಗಳ ಸಂಖ್ಯೆ ಡಬಲ್ ಆಗಿವೆ.

ಬುಧವಾರ ರಾಜ್ಯದಾದ್ಯಂತ ಒಟ್ಟಾರೆ 1116 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 462 ಕೇಸ್ ಗಳು ಪತ್ತೆಯಾಗಿವೆ.

ಮಂಗಳವಾರ ಬೆಂಗಳೂರಲ್ಲಿ 231 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬುಧವಾರ ಆ ಸಂಖ್ಯೆ ದುಪ್ಪಟ್ಟಾಗಿದೆ.

ಅಂದರೆ, 462 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಈ ಹಿಂದೆ ತಜ್ಞರು ಕೊರೊನಾ ಮೂರನೇ ಅಲೆ ಅಕ್ಟೋಬರ್ ವೇಳೆಗೆ ಬರಲಿದೆ ಎಂದಿದ್ದರು.

ಹೀಗಾಗಿ ಇದು ಮೂರನೇ ಅಲೆಯ ಮುನ್ಸೂಚನೆಯಾ ಎಂಬ ಆತಂಕ ಎಲ್ಲರಲ್ಲೂ ಮೂಡಿದೆ.

Mahesh M Dhandu :
ಕಂಟೆಂಟ್ ಎಡಿಟರ್

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Saaksha TV
Top