Sunday, 20 Sep, 8.19 pm Saaksha TV

ರಾಜ್ಯ
ಗ್ರೇಟ್ ನಶೆ ತಲೆಮಾರಿನಿಂದ ಆಸಿಡ್ ಕುಡಿದಂತಾಗಿದೆ: ನಟ ಜಗ್ಗೇಶ್ ಬೇಸರ..!

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸಲ್ಲಿ ದಿನದಿಂದ ದಿನಕ್ಕೆ ಒಬ್ಬೊಬ್ಬರಾಗಿ ನಟ-ನಟಿಯರು ಸಿಲುಕಿಕೊಳ್ಳುತ್ತಿರುವುದಕ್ಕೆ ನವರಸ ನಾಯಕ ಜಗ್ಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕೈಬರವಣಿಗೆ ನೋಡಿ ಆನಂದಿಸಿದವರು ನಾವು. ಇಂದಿನ ಗ್ರೇಟ್ ನಶೆ ತಲೆಮಾರು ನಮ್ಮ ಉದ್ಯಮದ ಹರಾಜು ಹಾಕುವುದು ನೋಡಿ ಹೊಟ್ಟೆಗೆ ಅಸಿಡ್ ಕುಡಿದಂತೆ ಆಗಿದೆ ನಮ್ಮತಲೆಮಾರಿಗೆ. ಕರ್ಮದ ದಿನಗಳು ಮೇಡಂ! ಎಂದು ಟ್ವಿಟರ್‍ನಲ್ಲಿ ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ.


ಗೋಲ್ಡನ್ ಡೇಸ್..ಎಲ್ಲರೂ ಕಷ್ಟ ಪಡುತ್ತಿದಂತಹ ಕಾಲವದು. ಆದರೂ ಖುಷಿ ಇರೋದು. ನೀವು ನಮ್ಮ ದಿನಗಳ ಕಣ್ಣಾರೆ ಕಂಡವರು. ನನ್ನ ಬಫ್ ಫಿಯೆಟ್ ನಿಮಗೆ 24 ಸಾವಿರಕ್ಕೆ ಮಾರಿ ನಾನು ಮಾರುತಿ 800 ಕಾರು ಕೊಂಡದ್ದು ನೆನಪಾಯಿತು ಎಂದು ಟ್ವಿಟರ್‍ನಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆಗಿನ ದಿನಗಳಲ್ಲಿ ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು. ತಿನ್ನಲು ಅನ್ನವಿಲ್ಲದಿದ್ದರೂ ಮುಖದಲ್ಲಿ ನಗು ಮಾಸುತ್ತಿರಲಿಲ್ಲ. ಗೆದ್ದ ಮೇಲೆ ಯಶಸ್ಸು ತಲೆಗೆ ಏರಲಿಲ್ಲ. ಸ್ವಾಭಿಮಾನಕ್ಕೆ ಪಡೆದದ್ದು ಏನು ಬೇಕಾದರು ಬಿಸಾಕಿ ಗೌರವದಿಂದ ಬದುಕಿದವರು. ಬದುಕನ್ನ ಪ್ರೀತಿಸಿ ಬೆಳೆದವರು, ಪ್ರೀತಿಗಾಗಿ ಬದುಕಿದ ತಲೆಮಾರು.


ಕಷ್ಟ ಪಟ್ಟು ಒಂದೊಂದು ಪಾತ್ರಕ್ಕೂ ಅಲೆದರೂ ಅವಕಾಶ ಸಿಕ್ಕಾಗ ತಮ್ಮ ಟ್ಯಾಲೆಂಟನ್ನು ಅಡವಿಟ್ಟು ಪರದೆ ಮೇಲೆ ಮಿಂಚಿದರು. ಜಗ್ಗೇಶ್, ದೇವರಾಜ್, ಅವಿನಾಶ್ ಇನ್ನೂ ಅನೇಕ ಪ್ರತಿಭಾವಂತರು ಬೆಳೆದು ಬಂದ ದಾರಿ ಇಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಅಭಿಮಾನಿಯೊಬ್ಬರು ಜಗ್ಗೇಶ್ ಟ್ವೀಟ್‍ಗೆ ಕಮೆಂಟ್ ಮಾಡಿದ್ದಾರೆ.


ನಾನು ಎಂದಿಗೂ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಿದವನು ಅಲ್ಲ. ನಾನು ಎಂದಿಗೂ ಕಲೆಗಾಗಿ ಬದುಕುವನು. ನನ್ನ ಅಭಿಮಾನಿಗಳಿಗಾಗಿ ಪಕ್ಷಗಳ ಪಕ್ಕ ಇಟ್ಟು ಪ್ರೀತಿಸುವವನು. ನನಗೆ ರಾಜಕೀಯಕ್ಕಿಂತ ಕಲೆ ಹಾಗು ಅಭಿಮಾನಿಗಳ ಪ್ರೀತಿ ಮುಖ್ಯ ಎಂದು ಟ್ವೀಟ್‍ನಲ್ಲಿ ಜಗ್ಗೇಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Saaksha TV
Top