Dailyhunt Logo
  • Light mode
    Follow system
    Dark mode
    • Play Story
    • App Story
ಗೃಹ ಸಚಿವ ಅಮಿತ್ ಶಾ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ

ಗೃಹ ಸಚಿವ ಅಮಿತ್ ಶಾ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ

Saaksha TV 6 years ago

ಗೃಹ ಸಚಿವ ಅಮಿತ್ ಶಾ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ

ಹೊಸದಿಲ್ಲಿ, ಸೆಪ್ಟೆಂಬರ್18: ಗೃಹ ಸಚಿವ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್-19 ನಿಂದ ಚೇತರಿಸಿಕೊಂಡ ನಂತರ ಅವರು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಮರು ದಾಖಲಾಗಿದ್ದರು. ನಾಲ್ಕು ದಿನಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಏಮ್ಸ್ ದೆಹಲಿಯಿಂದ ಬಿಡುಗಡೆ ಮಾಡಲಾಗಿದೆ. ಈ ಮೊದಲು ಆಗಸ್ಟ್ 30 ರಂದು ಕೋವಿಡ್ ನಂತರದ ಆರೈಕೆ ಪಡೆದು ಆಸ್ಪತ್ರೆಯಿಂದ ಅವರು ಬಿಡುಗಡೆಯಾಗಿದ್ದರು. ಸೆಪ್ಟೆಂಬರ್ 13 ರಂದು ‌ ಸಂಪೂರ್ಣ ವೈದ್ಯಕೀಯ ತಪಾಸಣೆಗಾಗಿ ಮರು ದಾಖಲಾಗಿದ್ದರು. ‌
ಕಳೆದ ಶನಿವಾರ ಉಸಿರಾಟದ ಸಮಸ್ಯೆಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗೃಹ ಸಚಿವರನ್ನು ಮತ್ತೆ ಏಮ್ಸ್ ಗೆ ದಾಖಲಿಸಲಾಗಿತ್ತು. ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ಅವರನ್ನು ದಿನನಿತ್ಯದ ಆರೋಗ್ಯ ತಪಾಸಣೆಗಾಗಿ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿಕೊಂಡಿದ್ದರು.

ಆದರೆ, ಅಂದಿನಿಂದ ಗೃಹ ಸಚಿವರ ಆರೋಗ್ಯದ ಯಾವುದೇ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಿಲ್ಲ.

ಪ್ರಧಾನಿ ಮೋದಿಯವರ 70 ನೇ ಹುಟ್ಟುಹಬ್ಬದ ಪ್ರಯಕ್ತ ರಸಪ್ರಶ್ನೆ- ವಿಜೇತರಿಗೆ ಮೋದಿ ಆಟೋಗ್ರಾಫ್

ಏಮ್ಸ್ ನಲ್ಲಿ ಅವರ ದಾಖಲಾದ ಬಳಿಕ, ಏಮ್ಸ್ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ, ಡಿಸ್ಚಾರ್ಜ್ ಸಮಯದಲ್ಲಿ ನೀಡಿದ ಸಲಹೆಯಂತೆ, ಅವರನ್ನು ಈಗ 1-2 ದಿನಗಳ ಕಾಲ ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ಸಂಪೂರ್ಣ ವೈದ್ಯಕೀಯ ತಪಾಸಣೆಗಾಗಿ ದಾಖಲಿಸಲಾಗಿದೆ ಎಂದು ಹೇಳಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Saaksha TV