Dailyhunt Logo
  • Light mode
    Follow system
    Dark mode
    • Play Story
    • App Story
ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

Saaksha TV 6 months ago

ಬೆಂಗಳೂರು: ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ನೀವು ಇದುವರೆಗೆ ನಿಮಗೆ ಇಷ್ಟ ಬಂದ ಸಮಯದಲ್ಲಿ ಅಥವಾ ಗ್ಯಾಸ್ ಖಾಲಿಯಾದ ತಕ್ಷಣ ಫೋನ್ ಮಾಡಿ ಸಿಲಿಂಡರ್ ಬುಕ್ ಮಾಡುತ್ತಿದ್ದೀರಾ?

ಹಾಗಿದ್ದರೆ ಇನ್ನು ಮುಂದೆ ಆ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕಿದೆ. ಗ್ಯಾಸ್ ಏಜೆನ್ಸಿಗಳು ಬುಕಿಂಗ್‌ಗಾಗಿ ನಿರ್ದಿಷ್ಟ ವೇಳಾಪಟ್ಟಿಯನ್ನು ಜಾರಿಗೆ ತಂದಿದ್ದು ಹಳೆಯ ಪದ್ಧತಿಗೆ ಬ್ರೇಕ್ ಹಾಕಲಾಗಿದೆ. ಈ ಹೊಸ ನಿಯಮಗಳ ಬಗ್ಗೆ ಗ್ರಾಹಕರು ತಿಳಿದುಕೊಳ್ಳದಿದ್ದರೆ ಗ್ಯಾಸ್ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು.

ಇಲ್ಲಿಯವರೆಗೆ ಗ್ರಾಹಕರು ದಿನದ 24 ಗಂಟೆಯೂ ಐವಿಆರ್ ಅಥವಾ ಆನ್‌ಲೈನ್ ಮೂಲಕ ಗ್ಯಾಸ್ ಬುಕ್ ಮಾಡುವ ಸೌಲಭ್ಯವಿತ್ತು. ಆದರೆ ಹೊಸ ನಿಯಮಗಳ ಪ್ರಕಾರ ಬುಕಿಂಗ್ ವಿಂಡೋ ಇನ್ನು ಮುಂದೆ ದಿನದ 24 ಗಂಟೆಗಳೂ ತೆರೆದಿರುವುದಿಲ್ಲ. ನೀವು ಸಿಲಿಂಡರ್ ಬುಕ್ ಮಾಡಲು ಬಯಸಿದರೆ ಮುಂಜಾನೆ ಅಥವಾ ರಾತ್ರಿಯ ಸಮಯವನ್ನೇ ಆಯ್ಕೆ ಮಾಡಿಕೊಳ್ಳಬೇಕು.

ಗ್ರಾಹಕರು ಬೆಳಿಗ್ಗೆ 5 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ನಡುವೆ ಅಥವಾ ರಾತ್ರಿ 8 ಗಂಟೆಯಿಂದ ರಾತ್ರಿ 12 ಗಂಟೆಯ ನಡುವೆ ಕರೆ ಮಾಡುವ ಮೂಲಕ ಅಥವಾ ಸಂದೇಶ ಕಳುಹಿಸುವ ಮೂಲಕ ಬುಕ್ ಮಾಡಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅಂದರೆ ಸರಿಸುಮಾರು 13 ಗಂಟೆಗಳ ಕಾಲ ಬುಕಿಂಗ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಗ್ಯಾಸ್ ಖಾಲಿಯಾಗುವ ಮುನ್ಸೂಚನೆ ಸಿಕ್ಕ ತಕ್ಷಣ ನಿಗದಿತ ಸಮಯದಲ್ಲಿ ಅಲಾರಂ ಇಟ್ಟುಕೊಂಡು ಬುಕ್ ಮಾಡುವುದು ಜಾಣತನ.

ಕೇವಲ ಸಮಯ ಬದಲಾವಣೆ ಮಾತ್ರವಲ್ಲದೆ ಬುಕ್ಕಿಂಗ್ ಅಂತರದಲ್ಲಿಯೂ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಹಿಂದೆಲ್ಲಾ ತಿಂಗಳಿಗೆ ಎರಡು ಅಥವಾ ಮೂರು ಸಿಲಿಂಡರ್ ಬೇಕಾದಾಗ ತಕ್ಷಣ ಬುಕ್ ಮಾಡಲಾಗುತ್ತಿತ್ತು. ಆದರೆ ಈಗ ನಿಮ್ಮ ಕೊನೆಯ ಸಿಲಿಂಡರ್ ವಿತರಣೆಯಾಗಿ ಕನಿಷ್ಠ 25 ದಿನಗಳು ಕಳೆದಿದ್ದರೆ ಮಾತ್ರ ಹೊಸ ಬುಕಿಂಗ್ ಅನ್ನು ಸಿಸ್ಟಮ್ ಸ್ವೀಕರಿಸುತ್ತದೆ. 25 ದಿನಗಳು ಪೂರ್ಣಗೊಳ್ಳುವ ಮೊದಲೇ ನೀವು ಬುಕ್ ಮಾಡಲು ಪ್ರಯತ್ನಿಸಿದರೆ ನಿಮ್ಮ ಮನವಿಯನ್ನು ಸ್ವಯಂಚಾಲಿತವಾಗಿ ತಿರಸ್ಕರಿಸಲಾಗುತ್ತದೆ. ಅಕ್ರಮ ದಾಸ್ತಾನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಗ್ರಾಹಕರ ಅನುಕೂಲಕ್ಕಾಗಿ ವಿವಿಧ ಕಂಪನಿಗಳು ಡಿಜಿಟಲ್ ಬುಕಿಂಗ್‌ಗಳನ್ನು ಸರಳೀಕರಿಸಿವೆ.
ಭಾರತ್ ಗ್ಯಾಸ್ ಗ್ರಾಹಕರು 1800224344 ಸಂಖ್ಯೆಗೆ ವಾಟ್ಸಾಪ್ ಮೂಲಕ ಹಾಯ್ ಎಂದು ಕಳುಹಿಸುವ ಮೂಲಕ ಸಿಲಿಂಡರ್ ಆರ್ಡರ್ ಮಾಡಬಹುದು.
ಇಂಡೇನ್ ಗ್ಯಾಸ್ ಗ್ರಾಹಕರು 7588888824 ಸಂಖ್ಯೆಗೆ REFILL ಎಂದು ಸಂದೇಶವನ್ನು ಕಳುಹಿಸಬಹುದು.
ಎಚ್‌ಪಿ ಗ್ಯಾಸ್ ಗ್ರಾಹಕರು 9222201122 ಸಂಖ್ಯೆಗೆ ಬುಕ್ ಎಂದು ಸಂದೇಶ ಕಳುಹಿಸುವ ಮೂಲಕ ಬುಕ್ ಮಾಡಬಹುದು.

ಒಂದು ವೇಳೆ ನೀವು ಸಾಮಾನ್ಯ ಎಸ್‌ಎಂಎಸ್ ಬಳಸಲು ಬಯಸಿದರೆ ಭಾರತ್ ಗ್ಯಾಸ್‌ಗಾಗಿ 7715012345 ಮತ್ತು ಇಂಡೇನ್‌ಗಾಗಿ 7718955555 ಸಂಖ್ಯೆಗೆ ನಿಮ್ಮ ಸಂದೇಶವನ್ನು ಕಳುಹಿಸುವ ಮೂಲಕ ದೃಢೀಕರಣವನ್ನು ಪಡೆಯಬಹುದು.

ಸ್ಮಾರ್ಟ್ ಫೋನ್ ಇಲ್ಲದವರಿಗೆ ಅಥವಾ ಇಂಟರ್ನೆಟ್ ಬಳಸಲು ಬಾರದವರಿಗೆ ಮಿಸ್ಡ್ ಕಾಲ್ ಸೌಲಭ್ಯ ವರದಾನವಾಗಿದೆ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ಕೆಳಗಿನ ನಂಬರ್‌ಗಳಿಗೆ ಕೇವಲ ಒಂದು ಮಿಸ್ಡ್ ಕಾಲ್ ಕೊಡುವ ಮೂಲಕ ಗ್ಯಾಸ್ ಬುಕ್ ಮಾಡಬಹುದು.
ಭಾರತ್ ಗ್ಯಾಸ್ ಗ್ರಾಹಕರು 7718012345 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು.
ಇಂಡೇನ್ ಗ್ಯಾಸ್ ಗ್ರಾಹಕರು 8454955555 ಸಂಖ್ಯೆಗೆ ಕರೆ ಮಾಡಬಹುದು.
ಎಚ್‌ಪಿ ಗ್ಯಾಸ್ ಗ್ರಾಹಕರು 94936022222 ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಬಹುದು.

ಗ್ಯಾಸ್ ಬುಕಿಂಗ್ ಅಥವಾ ಸಿಲಿಂಡರ್ ವಿತರಣೆಯಲ್ಲಿ ನಿಮಗೆ ಯಾವುದೇ ತೊಂದರೆಯಾದರೆ ದೂರು ನೀಡಲು ಪ್ರತ್ಯೇಕ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಲಾಗಿದೆ. ಇಂಡೇನ್ ಮತ್ತು ಎಚ್‌ಪಿ ಗ್ಯಾಸ್ ಗ್ರಾಹಕರು 18002333555 ಸಂಖ್ಯೆಗೆ ಹಾಗೂ ಭಾರತ್ ಗ್ಯಾಸ್ ಗ್ರಾಹಕರು 1800224344 ಸಂಖ್ಯೆಗೆ ಕರೆ ಮಾಡಿ ತಮ್ಮ ದೂರುಗಳನ್ನು ದಾಖಲಿಸಬಹುದು.

ಅಡುಗೆ ಅನಿಲ ಬುಕ್ಕಿಂಗ್ ವ್ಯವಸ್ಥೆಯಲ್ಲಿನ ಈ ದಿಢೀರ್ ಬದಲಾವಣೆಗೆ ಗ್ರಾಹಕರು ಒಗ್ಗಿಕೊಳ್ಳಬೇಕಿದೆ. ಸಮಯ ಮತ್ತು ದಿನಾಂಕದ ಲೆಕ್ಕಾಚಾರ ಹಾಕಿಕೊಂಡು ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Saaksha TV