Thursday, 16 Sep, 11.12 am Saaksha TV

ರಾಜ್ಯ
ಇ-ಆಫೀಸ್ ಮೂಲಕ ವ್ಯವಹಾರ : ಸರ್ಕಾರ ಮಹತ್ವದ ಆದೇಶ

ಇ-ಆಫೀಸ್ ಮೂಲಕ ವ್ಯವಹಾರ : ಸರ್ಕಾರ ಮಹತ್ವದ ಆದೇಶ

ಬೆಂಗಳೂರು : ಆಡಳಿತವನ್ನು ಮತ್ತಷ್ಟು ದಕ್ಷ, ಪಾರದರ್ಶಕ ಹಾಗೂ ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಇನ್ಮುಂದೆ ಜಿಲ್ಲಾಧಿಕಾರಿಗಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ, ಇಲಾಖಾ ಮುಖ್ಯಸ್ಥರುಗಳ ಎಲ್ಲಾ ಕಛೇರಿಗಳಲ್ಲಿ ಎಲ್ಲಾ ಕಡತಗಳನ್ನು ಹಾಗೂ ಪತ್ರಗಳನ್ನು ಇ-ಆಫೀಸ್ ಮೂಲಕವೇ ವ್ಯವಹರಿಸುವಂತೆ ಸರ್ಕಾರ ಆದೇಶ ಹೊರಡಿಸಲಾಗಿದೆ.

ಇದು ಅಕ್ಟೋಬರ್ ಜಾರಿ ಬರಬೇಕೆಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೊರಡಿಸಿರುವ ಆದೇಶದಲ್ಲಿದೆ.

ಅಂದರೆ ಅಕ್ಟೋಬರ್ ನಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರುಗಳು ತಮ್ಮ ಪ್ರಸ್ತಾವನೆಗಳು, ಪತ್ರಗಳು ಹಾಗೂ ವರದಿಗಳನ್ನು ಸಂಬಂಧಪಟ್ಟ ಸರ್ಕಾರದ ಕಾರ್ಯದರ್ಶಿಗಳಿಗೆ ಇ-ಆಫೀಸ್ ಮೂಲಕವೇ ಚಲನವಲನಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದಲ್ಲದೆ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

Namratha Rao
ಕಂಟೆಂಟ್ ಎಡಿಟರ್ -saakshatv.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Saaksha TV
Top