ರಾಜ್ಯ
ಇನ್ಮುಂದೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಚಪ್ಪಲಿ ಸವೆಸಲಿ

ಇನ್ಮುಂದೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಚಪ್ಪಲಿ ಸವೆಸಲಿ
ಚಿಕ್ಕಮಗಳೂರು : ಇಲ್ಲಿವರೆಗೂ ಜನ ಸರ್ಕಾರಿ ಕಚೇರಿಗಳಿಗೆ ಅಲೆದು ಅವರ ಚಪ್ಪಲಿ ಸವೆಸುತ್ತಿದ್ದರು.
ಇನ್ಮುಂದೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಚಪ್ಪಲಿ ಸವೆಸಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲಾಧಿಕಾರಿಗಳು ಇನ್ಮುಂದೆ ಹಳ್ಳಿಗಳಿಗೆ ತೆರಳಬೇಕು.
ಜನರ ಸಮಸ್ಯೆಗಳನ್ನು ಕೇಳಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಶೋಕ್ ಸೂಚನೆ ನೀಡಿದ್ದಾರೆ.
ಇಲ್ಲಿವರೆಗೂ ಜನ ಸರ್ಕಾರಿ ಕಚೇರಿಗಳಿಗೆ ಅಲೆದು ಅವರ ಚಪ್ಪಲಿ ಸವೆಸುತ್ತಿದ್ದರು. ಇನ್ಮುಂದೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಚಪ್ಪಲಿ ಸವೆಸಲಿ.
ಅಧಿಕಾರಿಗಳಿಗೂ ಹಳ್ಳಿಯ ಜೀವನ ಅರ್ಥವಾಗಲಿ ಎಂದು ಹೇಳಿದರು.
ಇನ್ನು ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಹಳ್ಳಿಗೆ ತೆರಳಬೇಕು. ಹಳ್ಳಿಗೆ ನಡೆಯಿರಿ, ಹಳ್ಳಿಗಳಲ್ಲಿ ಜಿಲ್ಲಾಧಿಕಾರಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ಹಳ್ಳಿ ಕಟ್ಟೆ ಮೇಲೆ ಜಿಲ್ಲಾಧಿಕಾರಿ ಯೋಜನೆ ತರಲಾಗುವುದು.
ವೃದ್ಧರಿಗೆ, ಹಿರಿಯರಿಗೆ, ವಿಕಲಚೇತನರಿಗೆ ಮಾಸಾಶನದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು.
ಇಷ್ಟು ದಿನ ಅಂಚೆ ಕಚೇರಿಯ ಮೂಲಕ ಮಾಸಾಶನ ಹಣವನ್ನು ಪಾವತಿ ಮಾಡಲಾಗುತ್ತಿತ್ತು.
ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್ ಮೂಲಕ ಹಣ ಸಂದಾಯ ಮಾಡಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel