ಜಸ್ಟ್ ಡಯಲ್ ಕಂಪನಿ ಖರೀದಿಗೆ ಮುಂದಾದ ರಿಲಯನ್ಸ್ ಇಂಡಸ್ಟ್ರೀಸ್
ಮುಂಬೈ : ಭಾರತದ ಆಗರ್ಭ ಶ್ರೀಮಂತ ರಿಲಯನ್ಸ್ ಸಂಸ್ಥೆಯ ಒಡೆಯ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ಜಸ್ಟ್ ಡಯಲ್ ಕಂಪನಿಯನ್ನು ಖರೀದಿಸಲು ಮುಂದಾಗಿದೆ. ಹೌದು ಒಟ್ಟು 6,600 ಕೋಟಿ ರೂ. ಖರೀದಿ ಸಂಬಂಧ ಎರಡು ಕಂಪನಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
25 ವರ್ಷದ ಹಳೆಯ ಕಂಪನಿಯಾಗಿರುವ ಜಸ್ಟ್ ಡಯಲ್ ಬೋರ್ಡ್ ಸಭೆ ನಾಳೆ ನಡೆಯಲಿದ್ದು, ನಾಳೆಯೇ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಭಾರತದ ಲೋಕಲ್ ಸರ್ಚ್ ಇಂಜಿನ್ ಆಗಿರುವ ಜಸ್ಟ್ ಡಯಲ್, ಆನ್ ಲೈನ್ ಶಾಪಿಂಗ್, ಹೋಟೆಲ್, ಸಿನಿಮಾ, ಬಸ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದೆ.
ಜಸ್ಟ್ ಡಯಲ್ ಸಂಸ್ಥಾಪಕ ವಿಎಸ್‍ಎಸ್ ಮಣಿ ಮತ್ತು ಕುಟುಂಬದ ಸದಸ್ಯರು ಕಂಪನಿಯಲ್ಲಿ ಶೇ.35.5 ಪಾಲು ಹೊಂದಿದ್ದಾರೆ. ಕಂಪನಿ ಒಟ್ಟು 2,387 ಕೋಟಿ ರೂ.
Namratha Rao
ಕಂಟೆಂಟ್ ಎಡಿಟರ್ -saakshatv.com

