Tuesday, 03 Aug, 4.39 pm Saaksha TV

ಹಳೆ ಮೈಸೂರು
ಮಾಜಿ ಸಚಿವ ವರ್ತೂರ್ ಪ್ರಕಾಶ್ ವಿರುದ್ಧ ಎಫ್ ಐಆರ್

ಮಾಜಿ ಸಚಿವ ವರ್ತೂರ್ ಪ್ರಕಾಶ್ ವಿರುದ್ಧ ಎಫ್ ಐಆರ್

ಕೋಲಾರ : ಮಾಜಿ ಸಚಿವ ವರ್ತೂರ್ ಪ್ರಕಾಶ್ ಸೇರಿ 105 ಮಂದಿ ವಿರುದ್ಧ ಕೊರೊನಾ ನಿಯಮ ಉಲ್ಲಂಘನೆದಡಿ ಎಫ್ ಐಆರ್ ದಾಖಲಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿರುವ ಹಿನ್ನೆಲೆಯಲ್ಲಿ ಒಂದು ಕಡೆ ಹೆಚ್ಚಿನ ಜನರು ಸೇರುವುದಕ್ಕೆ ನಿಷೇಧವಿದೆ.

ಹೀಗಿದ್ದರೂ ಮಾಜಿ ಸಚಿವ ವರ್ತೂರು ಪ್ರಕಾಶ್ ಕೋಲಾರ ನಗರದಲ್ಲಿ ಸಭೆ ನಡೆಸಿ, ಕಾರ್ಯಕರ್ತರಿಗೆ ಊಟ ಹಾಕಿಸಿದ್ದರು.

ಈ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿದ್ದರು. ಆ ಮೂಲಕ, ಕೊರೊನಾ ನಿಯಂತ್ರಣ ಕ್ರಮ ಉಲ್ಲಂಘನೆ ಮಾಡಲಾಡಲಾಗಿತ್ತು.

ಈ ಸಂಬಂಧ ಇದೀಗ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ, ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ವರ್ತೂರು ಪ್ರಕಾಶ್ ಸೇರಿ 105 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

Mahesh M Dhandu :
ಕಂಟೆಂಟ್ ಎಡಿಟರ್

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Saaksha TV
Top