Dailyhunt
ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಹರ್ಬಲ್ ಚಹಾಗಳು

ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಹರ್ಬಲ್ ಚಹಾಗಳು

Saaksha TV 4 years ago

ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಹರ್ಬಲ್ ಚಹಾಗಳು

ಇಂದಿನ ಜೀವನ ಶೈಲಿಯಲ್ಲಿ ಮಧುಮೇಹ ಸಮಸ್ಯೆ ಬಹಳ ಸಾಮಾನ್ಯವಾಗಿದೆ. ಮಧುಮೇಹ ಸಮಸ್ಯೆ ಇದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ದೀರ್ಘಕಾಲದವರೆಗೆ ಹೆಚ್ಚಾಗುತ್ತದೆ.

ಇದರಿಂದ ಅತಿಯಾದ ಬಾಯಾರಿಕೆ ಮತ್ತು ಹಸಿವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಮಧುಮೇಹದಿಂದಾಗಿ, ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಈ ಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ, ಮಧುಮೇಹಿಗಳಿಗೆ ಇತರ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ.

ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ ಏಕೆಂದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾದರೆ ಮೂತ್ರಪಿಂಡ ವೈಫಲ್ಯ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಅನೇಕ ಗಂಭೀರ ರೋಗಗಳ ಅಪಾಯ ಹೆಚ್ಚು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಹರ್ಬಲ್ ಚಹಾಗಳ ಸೇವನೆಯಿಂದ ಇನ್ಸುಲಿನ್ ಹಾರ್ಮೋನ್ ಸಮತೋಲನವನ್ನು ಸರಿಯಾಗಿ ಇಟ್ಟುಕೊಳ್ಳುವುದಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು.

ಬ್ಲಾಕ್ ಚಹಾ
ಬ್ಲಾಕ್ ಚಹಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾಸ್ತವವಾಗಿ, ಫ್ಲಾವಿನ್ಸ್ ಮತ್ತು ಥೆರುಬಿಜಿನ್ ಸೇರಿದಂತೆ ಬ್ಲಾಕ್ ಚಹಾದಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಅವುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿ ರೋಗಿಗಳು ಕಪ್ಪು ಚಹಾವನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸುವುದು ಉತ್ತಮ.

ದಾಸವಾಳ ಚಹಾ
ದಾಸವಾಳದ ಚಹಾದಲ್ಲಿ ಪಾಲಿಫಿನಾಲ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಥೋಸಯಾನಿನ್‌ಗಳು ಇವೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಸವಾಳ ಚಹಾದ ಮೂಲಕ, ಇನ್ಸುಲಿನ್ ಹಾರ್ಮೋನ್ ಸಮತೋಲನವನ್ನು ಸರಿಪಡಿಸುವುದು ಮಾತ್ರವಲ್ಲ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಹ ನಿಯಂತ್ರಣದಲ್ಲಿಡಬಹುದು.

ದಾಲ್ಚಿನ್ನಿ ಚಹಾ
ಆಹಾರದ ರುಚಿಯನ್ನು ಹೆಚ್ಚಿಸಲು ಜನರು ದಾಲ್ಚಿನ್ನಿ ಬಳಸುತ್ತಾರೆ. ಆದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ದಾಲ್ಚಿನ್ನಿ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ದಾಲ್ಚಿನ್ನಿ ಚಹಾವು ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ಎಚ್ಚರಿಕೆ - ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

ಅಜ್ವೈನ್ ಚಹಾದ ಆರೋಗ್ಯ ಪ್ರಯೋಜನಗಳು https://t.co/iuwAerrEag

- Saaksha TV (@SaakshaTv)

ಮೊಟ್ಟೆಯ ಕಬಾಬ್‌ https://t.co/PPxu5NEUa7

- Saaksha TV (@SaakshaTv)

ಮೊಬೈಲ್ ಪ್ಯಾಟರ್ನ್ ಮರೆತು ಹೋಗಿದ್ದರೆ ಏನು ಮಾಡಬೇಕು? https://t.co/gL0TlN7EYv

- Saaksha TV (@SaakshaTv)

ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/7fHIeZQgG9

- Saaksha TV (@SaakshaTv)

#Saakshatv #healthrecipe #Herbaltea

Shwetha Hegde
ಕಂಟೆಂಟ್ ಎಡಿಟರ್-saakshatv.com

Dailyhunt
Disclaimer: This content has not been generated, created or edited by Dailyhunt. Publisher: Saaksha TV