Dailyhunt
ಮದುವೆ - ವಿಚ್ಛೇಧಧನದ ಬಗ್ಗೆ ಪುರಿ ಜಗಗನ್ನಾಥ್ ಮಾತು..!

ಮದುವೆ - ವಿಚ್ಛೇಧಧನದ ಬಗ್ಗೆ ಪುರಿ ಜಗಗನ್ನಾಥ್ ಮಾತು..!

Saaksha TV 4 years ago

ಮದುವೆ - ವಿಚ್ಛೇಧಧನದ ಬಗ್ಗೆ ಪುರಿ ಜಗಗನ್ನಾಥ್ ಮಾತು..!

ಟಾಲಿವುಡ್ ನ ಸ್ಟಾರ್ ನಿರ್ದೇಶಕ ವಿಶೇಷ ಕಥೆಗಳನ್ನ ಒಳಗೊಂಡ ಸಿನಿಮಾಗಳ ನಿರ್ದೇಶನದ ಮೂಲಕವೇ ಹೆಸರುಗಳಿಸಿರುವ ಡೈರೆಕ್ಟರ್ ಪುರಿ ಜಗನ್ನಾಥ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ ನಾಯಕರಾಗಿದ್ದಾರೆ.

ಇದೀಗ ಪುರಿ ಜಗನ್ನಾಥ್ ಅವರು ಮದುವೆ, ವಿಚ್ಛೇಧನದ ಕುರಿತಾಗಿ ಮಾತನ್ನಾಡಿದ್ದಾರೆ. ಅಂದ್ಹಾಗೆ ಅವರ ಮಾತುಗಳು ಸಾಮಾಜಿಕ ಜಾಲತಣದಲ್ಲಿ ಸಖತ್ ವೈರಲ್ ಆಗ್ತಿದೆ. ಯೂಟ್ಯೂಬ್ ನಲ್ಲಿ 'ಪುರಿ ಮಸ್ಸಿಂಗ್' ಹೆಸರಿನ ಚಾನೆಲ್ ತೆರೆದಿದ್ದು ಚಾನೆಲ್ ನಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಾರೆ.

ಅದ್ರಂತೆ ಇತ್ತೀಚೆಗೆ ಮದುವೆ ಮತ್ತು ವಿಚ್ಚೇಧನದ ಬಗ್ಗೆ ಮಾತನಾಡಿದ್ದಾರೆ.

ಲಾಕ್ ಡೌನ್ ನಿಂದಾಗಿ ಪತಿ-ಪತ್ನಿ ಗಂಟೆ-ಗಟ್ಟಲೆ ಒಟ್ಟಿಗೆ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಖಂಡಿತ ಒಳ್ಳೆಯದಲ್ಲ. ನಿಮ್ಮ ದಾಂಪತ್ಯವನ್ನು ನೀವು ಕಾಪಾಡಿಕೊಳ್ಳಬೇಕು ಎಂದುಕೊಂಡಿದ್ದರೆ ಹೆಂಡತಿಯೊಂದಿಗೆ ಅರ್ಧ ಗಂಟೆಗಿಂತಲೂ ಹೆಚ್ಚಿನ ಸಮಯ ಕಳೆಯ ಬೇಡಿ ಎಂದಿದ್ದಾರೆ.

ಒಂದೇ ಮನೆಯಲ್ಲಿದ್ದರೂ ಸಹ ಹೆಂಡತಿಯೊಂದಿಗೆ ಹೆಚ್ಚಾಗಿ ಕಾಲ ಕಳೆಯಬೇಡಿ. ಹೆಚ್ಚು ಕಾಲ ಕಳೆದರೆ ಸಮಸ್ಯೆಗಳು ಹೆಚ್ಚು ಬರುತ್ತವೆ. ಲಾಕ್ಡೌನ್ ಅವಧಿಯಲ್ಲಿ ಟಿವಿ ನೋಡಿ, ವಾಟ್ಸ್‌ಆಪ್, ಫೇಸ್ಬುಕ್ ನೋಡಿ. ಪಕ್ಕಕ್ಕೆ ತಿರುಗಿ ಮಲಗುವುದು ಕಲಿತುಕೊಳ್ಳಿ, ನಿಮ್ಮ ದಾಂಪತ್ಯವನ್ನು ಉಳಿಸಿಕೊಳ್ಳಿ ಎಂದಿದ್ದಾರೆ.

ಅಲ್ಲದೇ ಭಾರತದಲ್ಲಿ ಗುಜರಾತ್, ಮಹಾರಾಷ್ಟ್ರಗಳಲ್ಲಿ ವಿಚ್ಛೇಧನ ಸಂಖ್ಯೆ ಹೆಚ್ಚಿದೆ. ಮಹಾರಾಷ್ಟ್ರ ನ್ಯಾಯಾಲಯದಲ್ಲಿ ದಿನಕ್ಕೆ 20 ವಿಚ್ಛೇಧನ ಪ್ರಕರಣಗಳು ದಾಖಲಾಗುತ್ತಿವೆ. ಗೋವಾದಲ್ಲಿ ಹೊಸ ಕಾನೂನನ್ನೇ ಮಾಡಿ, ಮದುವೆಗೆ ಮುಂಚೆಯೇ ವಧು-ವರರು ಕೌನ್ಸಿಲ್ಗೆ ಒಳಪಟ್ಟು ತಮಗೆ ಮದುವೆ ಏಕೆ ಅವಶ್ಯಕ ಎಂದು ಕಾರಣ ನೀಡಿ ಒಪ್ಪಿಗೆ ಪಡೆದ ನಂತರವೇ ಮದುವೆ ಆಗಬೇಕು. ಈ ಕಾನೂನು ದೇಶದೆಲ್ಲೆಡೆ ಬರಬೇಕು ಎಂದಿದ್ದಾರೆ.
ಇನ್ನೂ ವಿಚ್ಛೇಧನಕ್ಕಾಗಿ ಜನ ಹೇಗೆ ನ್ಯಾಯಾಲಯದ ಸುತ್ತ ಸುತ್ತಿದ್ದಾರೋ ಹಾಗೆಯೇ ಮದುವೆ ಆಗುವ ಮೊದಲು ನ್ಯಾಯಾಲಯದ ಸುತ್ತ ಅಲೆಯಬೇಕು. ಆ ರೀತಿಯಾದ ಕಠಿಣ ನಿಯಮ ಮದುವೆ ಆಗಲು ತರಬೇಕು. ಆಗ ಜೊಳ್ಳುಗಳೆಲ್ಲ ಉದುರಿಹೋಗಿ. ನಿಜವಾಗಿಯೂ ಮದುವೆ ಬೇಕಿರುವವರು ಮಾತ್ರವೇ ಮದುವೆ ಆಗುತ್ತಾರೆ. ಆಗ ವಿಚ್ಛೇಧನ ಪ್ರಕರಣಗಳು ಕಡಿಮೆ ಆಗುತ್ತವೆ ಎಂದಿದ್ದಾರೆ.

ಮುಂದುವರೆದು ಇನ್ನೂ 20 ವರ್ಷಗಳಲ್ಲಿ ಈಗ 50 ವರ್ಷದಲ್ಲಿರುವವರು ಸಾವನ್ನಪ್ಪುತ್ತಾರೆ. 2040 ರ ವೇಳೆಗೆ ಭಾರತದಲ್ಲಿ ಮದುವೆ ವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚುತ್ತದೆ. ಶೇ 30% ಜನ ಮಾತ್ರವೇ ಮದುವೆಗಳಾಗುತ್ತಾರೆ. ಮದುವೆ ಒಳ್ಳೆಯದಲ್ಲ ಎಂದು ಬುದ್ಧ, ಜೀಸಸ್ ಅವರುಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಆದರೆ ನಾವು ಅದನ್ನು ಕೇಳಲಿಲ್ಲ ಎಂದಿದ್ದಾರೆ.

ಸಾಕಷ್ಟು ಜನ ಒಂಟಿ ತನ ಹೋಗಲಾಡಿಸಿಕೊಳ್ಳಲು ಮದುವೆಯಾಗುತ್ತಾರೆ. ಆದರೆ ಅದು ತಪ್ಪು, ಒಂಟಿತನ ಸಹಿಸಿಕೊಳ್ಳಲಾಗಲಿಲ್ಲ ಎಂದರೆ ಮದುವೆ ಆಗಲೇಬೇಡಿ. ಮದುವೆ ಆದಮೇಲೆ ಎಲ್ಲರನ್ನೂ ಒಂಟಿಯನ್ನಾಗಿ ಮಾಡಿಬಿಡುತ್ತೀರ. ಗಂಡು-ಹೆಣ್ಣುಗಳು ಮದುವೆ ಆಗಲು ಸೃಷ್ಟಿಸಲ್ಪಟ್ಟವರಲ್ಲ. ಹಾಗಾಗಿ ಈ ಲಾಕ್ಡೌನ್ನಲ್ಲಿ ನಿಮ್ಮ ದಾಂಪತ್ಯ ಉಳಿಸಿಕೊಳ್ಳಲು ಹೆಂಡತಿಯೊಂದಿಗೆ ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಕಳೆಯಬೇಡಿ' ಎಂದಿದ್ದಾರೆ. ಸದ್ಯ ಮದುವೆ ಗಂಡ ಹೆಂಡತಿ ವಿಚ್ಛೇಧನದ ಬಗ್ಗೆ ಪುರಿ ಜಗನ್ನಾಥ್ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಪುರಿ ಮಾತನ್ನ ಹಲವರು ಒಪ್ಪಿಕೊಂಡಿದ್ದಾರೆ.

Namratha Rao
ಕಂಟೆಂಟ್ ಎಡಿಟರ್ -saakshatv.com

Dailyhunt
Disclaimer: This content has not been generated, created or edited by Dailyhunt. Publisher: Saaksha TV