Dailyhunt
ಮಹಾ ಮಳೆಗೆ ವಾಣಿಜ್ಯ ನಗರಿ ತತ್ತರ : ಸಾವಿನ ಸಂಖ್ಯೆ 264ಕ್ಕೆ ಏರಿಕೆ

ಮಹಾ ಮಳೆಗೆ ವಾಣಿಜ್ಯ ನಗರಿ ತತ್ತರ : ಸಾವಿನ ಸಂಖ್ಯೆ 264ಕ್ಕೆ ಏರಿಕೆ

Saaksha TV 4 years ago

ಮಹಾ ಮಳೆಗೆ ವಾಣಿಜ್ಯ ನಗರಿ ತತ್ತರ : ಸಾವಿನ ಸಂಖ್ಯೆ 264ಕ್ಕೆ ಏರಿಕೆ

ಮುಂಬೈ : ಮಹಾ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿಹೋಗಿದ್ದು, ರಕ್ಕಸ ಮಳೆಗೆ ಮುಂಬೈನಲ್ಲಿ ಈವರೆಗೂ 264 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ನೂರಕ್ಕೂ ಅಧಿಕ ಮಂದಿಯ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಇವತ್ತಿನ ಮಾಹಿತಿ ಪ್ರಕಾರ ರಾಯಗಢದಲ್ಲಿ 11, ವಾರ್ಧಾ ಹಾಗೂ ಅಕೋಲಾದಲ್ಲಿ ತಲಾ ಎರಡು ಶವಗಳು ಸಿಕ್ಕಿವೆ.

ಇದುವರೆಗೆ ರಾಯಗಢ ಜಿಲ್ಲೆಯಲ್ಲಿ 71, ಸತಾರದಲ್ಲಿ 41, ರತ್ನಾಗಿರಿಯಲ್ಲಿ 21, ಥಾಣೆಯಲ್ಲಿ 12,

ಕೊಲ್ಹಾಪುರದಲ್ಲಿ ಏಳು, ಮುಂಬೈನಲ್ಲಿ ನಾಲ್ಕು, ಸಿಂಧುದುರ್ಗ್, ಪುಣೆ, ವಾರ್ಧಾ ಮತ್ತು ಅಕೋಲಾದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ.

ಅಲ್ಲದೆ 56 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

Mahesh M Dhandu :
ಕಂಟೆಂಟ್ ಎಡಿಟರ್

Dailyhunt
Disclaimer: This content has not been generated, created or edited by Dailyhunt. Publisher: Saaksha TV