Dailyhunt
'ನಯಾಗರಾ' ದೇಶ ಕೆನಡಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳು..!

'ನಯಾಗರಾ' ದೇಶ ಕೆನಡಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳು..!

Saaksha TV 4 years ago

'ನಯಾಗರಾ' ದೇಶ ಕೆನಡಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳು..!

ಉತ್ತರ ಅಮೆರಿಕಾ ಖಂಡದಲ್ಲಿ ಸ್ಥಿತವಾಗಿರುವ ಸುಂದರ ರಾಷ್ಟ್ರ ಕೆನಡಾ ಬಗ್ಗೆ ತಿಳಿದುಕೊಳ್ಳಬೇಕಾರುವ ಸಾಕಷ್ಟು ವಿಚಾರಗಳಿವೆ.

ಒಟ್ಟಾರೆ ಜನಸಂಖ್ಯೆ 3 ಕೋಟಿ 70 ಲಕ್ಷ.

ಇನ್ನೂ ವಿಸ್ತೀರ್ಣದ ವಿಚಾರಕ್ಕೆ ಬಂದ್ರೆ ಇಡೀ ವಿಶ್ವದಲ್ಲಿ ರಷ್ಯಾ ಬಿಟ್ರೆ 2ನೇ ಸ್ಥಾನದಲ್ಲಿದೆ ಕೆನಡಾ - 9.98 ಮಿಲಿಯನ್ ಕಿಲೋಮೀಟರ್ ಚದರ ಕಿ.ಮಿ

ಒಟ್ಟಾರೆ ಜನಸಂಖ್ಯೆಯಲ್ಲಿ 82 % ರಷ್ಟು ಜನ ನಗರ ಹಾಗೂ ಉಳಿದವರು ಗ್ರಾಮಗಳಲ್ಲಿ ನೆಲೆಸಿದ್ದಾರೆ.

ರಾಜಧಾನಿ - ಒಟ್ಟಾವಾ - ವಿಶ್ವದ ವಿಶಾಲ ನಗರಗಳ ಪೈಕಿ ಒಟ್ಟಾವಾ 8ನೇ ಸ್ಥಾನದಲ್ಲಿದೆ.

ಕೆನಡಾದ ಹೆಸರನ್ನ ಕನತಾ ಶಬ್ಧದಿಂದ ತೆಗೆದುಕೊಳ್ಳಲಾಗಿದೆ. ಹಳ್ಳಿ ಎಂದು ಇದರ ಅರ್ಥ.

ಹಿಂದೆ ಕೆನಡಾ ಸಾಕಷ್ಟು ದೇಶಗಳ ಅಧೀಕನಕ್ಕೆ ಒಳಗಾಗಿತ್ತು. ಕಡೆಯದಾಗಿ 1 ಜುಲೈ 1867 ರಲ್ಲಿ ಬ್ರಟಿಷ್ ಸರ್ಕಾರ ಬ್ರಿಟಿಷ್ ನಾರ್ತ್ ಅಮೆರಿಕಾ ಕಾಯ್ದೆ ಜಾರಿಗೊಳಿಸಿದ ನಂತರ ಕೆನಡಾದ ರಚನೆಯಾಯ್ತು.

ಕೆನಡಾದಲ್ಲಿ 2 ಅಧಿಕೃತ ಭಾಷೆಗಳಿವೆ - ಇಂಗ್ಲಿಷ್ ,ಫ್ರೆಂಚ್. ಅಷ್ಟೇ ಅಲ್ಲದೇ ಇಲ್ಲಿ ಪಂಜಾಬಿ ಹಾಗೂ ಚೈನೀಸ್ ಕೂಡ ಜನ ಮಾತನಾಡುತ್ತಾರೆ.

ಈ ದೇಶದಲ್ಲಿ ಭಾರತದ ಅದ್ರಲ್ಲೂ ಪಂಜಾಬಿ ಸಮುದಾಯದ ಬಹುತೇಕ ಮಂದಿ ನೆಲೆಸಿದ್ದಾರೆ.

ವಿದ್ಯಾಭ್ಯಾಸದಲ್ಲಿ ವಿಶ್ವದ ಅತಿ ಬಬಲಶಾಲಿ ರಾಷ್ಟ್ರವೂ ಕೂಡ ಕೆನಡಾವಾಗಿದೆ. ಇಲ್ಲಿನ ಲಿಟ್ರೆಸಿ ರೇಟ್ 100 %. ಇಲ್ಲಿನ ಪ್ರತಿಯೊಬ್ಬರು ಕಡಿಮೆಯಂದ್ರು ಕಾಲೇಜಿನ ಶಿಕ್ಷಣ ಮುಗಿಸಿರುತ್ತಾರೆ.

ಇಲ್ಲಿನ ಜನಪ್ರಿಯ ಕ್ರೀಡೆ ಐಸ್ ಹಾಕಿ - ಆದ್ರೆ ಈ ದೇಶದ ರಾಷ್ಟ್ರೀಯ ಆಟ ಲಾಕ್ರೋಸ್

ಕೆನಡಾದಲ್ಲಿ ಸುಮಾರು 4 ತಿಂಗಳ ಕಾಲ ಸ್ಫೋ ಫಾಲ್ / ಹಿಮ ಪಾತವಾಗುತ್ತೆ. ಅಲ್ಲದೇ ಇಲ್ಲಿನ ಮಿನಿಮನ್ ಟೆಂಪರೇಚರ್ -81.4 ಡೆಗ್ರಿ. ಹೀಗಾಗಿ ಕೆನಡಾವನ್ನು ಇಡೀ ವಿಶ್ವದಲ್ಲಿ ಅತ್ಯಂತ ಚಳಿಯಿಂದ ದೇಶ ಎನ್ನಲಾಗುತ್ತದೆ.

ಇಲ್ಲಿನ ಜಿಡಿಪಿ - 1.8444 ಟ್ರಿಲಿಯನ್ ಡಾಲರ್ - ಕೆನಡಾ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪೈಕಿ ಒಂದಾಗಿದೆ. ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ದೇಶವಾಗಿದೆ.

ಕೆನಡಾ ಶಕ್ತಿಯುತ GDP ರೇಟ್ ವಿಚಾರದಲ್ಲಿ ವಿಶ್ವದ 11ನೇ ದೇಶವಾಗಿದೆ.

ದೇಶದ ಕರೆನ್ಸಿ - ಕೆನೆಡಿಯನ್ ಡಾಲರ್ - 1 ಕೆನೆಡಿಯನ್ ಡಾಲರ್ ಬಾರತದ ಸುಮಾರು 57 ರೂಪಾಯಿಗಳಿಗೆ ಸಮ

ವಿಶ್ವದ ಅತಿ ಉದ್ದವಾದ ರಸ್ತೆ ಇರೋದು ಕೂಡ ಕೆನಡಾದಲ್ಲಿಯೇ - ( ದ ಯೋಂಗೆಸ್ಟ್ ಸ್ಟ್ರೀಟ್ )

ಪ್ರವಾಸಿ ತಾಣಗಳು

ನಯಾಗರ ಫಾಲ್ಸ್ - ವರ್ಲ್ಡ್ ಫೇಮಸ್ ನಯಾಗರಾ ಫಾಲ್ಸ್ ಅನ್ನ ಹನಿಮೂನ್ ಕ್ಯಾಪಿಟಲ್ ಆಫ್ ದ ವರ್ಲ್ಡ್ ಅಂತಲೂ ಸಹ ಕರೆಯಲಾಗುತ್ತದೆ.
ಟೋರಂಟೋ , ಕ್ಯೂಬೇಕ್ ಸಿಟಿ , ಮಾಂಟ್ರಿಯಲ್ , ಬಾನಫ್ ರಾಷ್ಟ್ರೀಯ ಉದ್ಯಾನವನ , ವಿಸ್ಲರ್ ಹೀಗೆ ಇನ್ನೂ ಅನೇಕ ಆಕರ್ಷಣೀಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಬಹುದು.

Namratha Rao
ಕಂಟೆಂಟ್ ಎಡಿಟರ್ -saakshatv.com

Dailyhunt
Disclaimer: This content has not been generated, created or edited by Dailyhunt. Publisher: Saaksha TV