Dailyhunt Logo
  • Light mode
    Follow system
    Dark mode
    • Play Story
    • App Story
ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹತ್ಯೆ: PoKನಲ್ಲಿ ಹಮ್ಹಾ ಬುರ್ಹಾನ್‌ಗೆ ಗುಂಡೇಟು

ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹತ್ಯೆ: PoKನಲ್ಲಿ ಹಮ್ಹಾ ಬುರ್ಹಾನ್‌ಗೆ ಗುಂಡೇಟು

Saaksha TV 9 hrs ago

2019ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಎಂದು ಗುರುತಿಸಲಾಗಿದ್ದ ಹಮ್ಹಾ ಬುರ್ಹಾನ್ ಅಲಿಯಾಸ್ ಅರ್ಜುಮಂಡ್ ಗುಲ್ಬಾರ್ ದಾರ್‌ನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ತರಬೇತುದಾರನ ರೂಪದಲ್ಲಿ ಅಡಗಿಕೊಂಡಿದ್ದ ಹಮ್ಹಾ ಬುರ್ಹಾನ್ ಮೇಲೆ ಮುಜಾಫರಾಬಾದ್ ನಲ್ಲಿರುವ ಕಚೇರಿಯೊಳಗೆ ನುಗ್ಗಿದ ಶಸ್ತ್ರಸಜ್ಜಿತರು ಭೀಕರ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಆತ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

2019ರ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಉಗ್ರ ದಾಳಿಯಲ್ಲಿ CRPF ಯೋಧರು ಹುತಾತ್ಮರಾಗಿದ್ದು, ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಈ ದಾಳಿಯ ಸಂಚಿನಲ್ಲಿ ಹಮ್ಹಾ ಬುರ್ಹಾನ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಹೇಳಿಕೊಂಡಿದ್ದವು.

2022ರಲ್ಲಿ ಭಾರತದ ಗೃಹ ಸಚಿವಾಲಯ ಹಮ್ಹಾ ಬುರ್ಹಾನ್‌ನನ್ನು ಅಧಿಕೃತವಾಗಿ ಉಗ್ರನೆಂದು ಘೋಷಿಸಿತ್ತು. ಆತನ ಚಟುವಟಿಕೆಗಳು ಪಾಕಿಸ್ತಾನ ಆಧಾರಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದವು ಎಂಬ ಆರೋಪಗಳೂ ಕೇಳಿಬಂದಿದ್ದವು.

ಈ ಹತ್ಯೆಯ ಹಿಂದೆ ಯಾರ ಕೈವಾಡ ಇದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ PoK ಪ್ರದೇಶದಲ್ಲಿ ಸಕ್ರಿಯವಾಗಿದ್ದ ಹಲವು ಉಗ್ರ ನಾಯಕರ ಮೇಲೆ ಇತ್ತೀಚಿನ ತಿಂಗಳುಗಳಲ್ಲಿ ನಿರಂತರ ದಾಳಿಗಳು ನಡೆಯುತ್ತಿರುವುದು ಗಮನಾರ್ಹವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Saaksha TV