Tuesday, 14 Sep, 1.27 pm Saaksha TV

ರಾಜ್ಯ
ರಾಜ್ಯಕ್ಕೂ ಕಾಲಿಡ್ತು ನಿಫಾ ವೈರಸ್ -ಮಂಗಳೂರಿನ ಯುವಕನಲ್ಲಿ ನಿಫಾ ಲಕ್ಷಣ

ರಾಜ್ಯಕ್ಕೂ ಕಾಲಿಡ್ತು ನಿಫಾ ವೈರಸ್ -ಮಂಗಳೂರಿನ ಯುವಕನಲ್ಲಿ ನಿಫಾ ಲಕ್ಷಣ nipha virus

ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಹಾವಳಿಯ ನಡುವೆ ನಿಫಾ ಆತಂಕವೂ ಹೆಚ್ಚಾಗುತ್ತಿದೆ.. ಹೀಗಾಗಿ ಕರ್ನಾಕದಲ್ಲಿ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ವಹಿಸಲಾಗಿದೆ. ಆದ್ರೆ ಕೇರಳದಲ್ಲಿ ನಿಫಾ ಕಾಟ ಹೆಚ್ಚಾಗಿರೋದು ರಾಜ್ಯಕ್ಕೆ ಮೊದಲೇ ಆತಂಕ ಹೆಚ್ಚಾಗಿದೆ. ಈ ನಡುವೆ ಇದೀಗ ರಾಜ್ಯಕ್ಕೆ ನಿಫಾ ಕಾಲಿಟ್ಟಾಗಿದೆ.

ಹೌದು.. ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಲ್ಲಿ ಇದೀಗ ನಿಫಾ ವೈರಸ್ ನ ಲಕ್ಷಣಗಳು ಪತ್ತೆಯಾಗಿದ್ದು, ಜನರನ್ನ ಆತಂಕಕ್ಕೆ ದೂಡಿದೆ. ಈತ ಜಿಲ್ಲಾ ಆರೋಗ್ಯ ಇಲಾಖೆಯ ವ್ಯಕ್ತಿಯಾಗಿದ್ದು, ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನ ಪುಣೆ ಲ್ಯಾಬ್ ಗೆ ರವಾನೆ ಮಾಡಲಾಗಿದೆ.

ಕೇರಳದಲ್ಲಿ ನಿಫಾಗೆ 12 ವರ್ಷದ ಬಾಲಕ ಬಲಿಯಾದ ಬಳಿಕ ಆತನ ಕುಟುಂಬದ 8 ಮಂದಿಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಆತಂಕ ಹೆಚ್ಚಾಗಿತ್ತು. ರಾಜ್ಯದಲ್ಲಿ ಗಡಿ ಬಾಗದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಅದಾಗ್ಯೂ ಯುವಕನಲ್ಲಿ ನಿಫಾ ಲಕ್ಷಣ ಕಂಡುಬಂದಿರೋದು ಆತಂಕಕ್ಕೆ ಕಾರಣವಾಗಿದೆ.

nipha virus

Mahesh M Dhandu :
ಕಂಟೆಂಟ್ ಎಡಿಟರ್

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Saaksha TV
Top