Dailyhunt
ಟಿ-20 ವಿಶ್ವಕಪ್ : ಸೆಮೀಸ್ ಗೆ ಎಂಟ್ರಿ ಕೊಡೋ ತಂಡಗಳು ಇವೆ..

ಟಿ-20 ವಿಶ್ವಕಪ್ : ಸೆಮೀಸ್ ಗೆ ಎಂಟ್ರಿ ಕೊಡೋ ತಂಡಗಳು ಇವೆ..

Saaksha TV 4 years ago

ಟಿ-20 ವಿಶ್ವಕಪ್ : ಸೆಮೀಸ್ ಗೆ ಎಂಟ್ರಿ ಕೊಡೋ ತಂಡಗಳು ಇವೆ..

ಮುಂಬೈ : ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ 'ಟಿ-20 ವಿಶ್ವಕಪ್' ಸಮರವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಈಗಾಗಲೇ ಎಲ್ಲಾ ಪ್ರಮುಖ ದೇಶಗಳು ತಮ್ಮ ಟಿ 20 ತಂಡಗಳನ್ನು ಘೋಷಿಸಿವೆ.

ಇದರ ಮಧ್ಯೆ ಈ ಬಾರಿಯ ಚಾಂಪಿಯನ್ ಯಾವ ತಂಡವಾಗಬಹುದು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಇದೇ ವಿಚಾರವಾಗಿ ಇದೀಗ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ಕೂಡ ಪ್ರತಿಕ್ರಿಯಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಆಕಾಶ್ ಚೋಪ್ರಾ ಅವರಿಗೆ ಅಭಿಮಾನಿಯೊರ್ವ "ನಿಮ್ಮ ಅಂದಾಜಿನ ಪ್ರಕಾರ, ಯಾವ ನಾಲ್ಕು ತಂಡಗಳು ಟಿ 20 ವಿಶ್ವಕಪ್‍ನ ಸೆಮಿಫೈನಲ್ ತಲುಪುತ್ತವೆ?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆಕಾಶ್ ಚೋಪ್ರಾ ಉತ್ತರಿಸಿದ್ದು, "ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಎಂದಿದ್ದಾರೆ.

ಅದೇ ರೀತಿ, ಟಿ 20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಸ್ಪಿನ್ ವಿಭಾಗದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂದು ನೀವು ಭಾವಿಸುತ್ತೀರಿ ಎಂಬ ಪ್ರಶ್ನೆಗೆ ಆಕಾಶ್ ಚೋಪ್ರಾ, "ಜಡೇಜಾ, ಅಶ್ವಿನ್, ಚಾಹರ್ ಅಥವಾ ವರುಣ್" ಎಂದು ಅವರು ಉತ್ತರಿಸಿದ್ದಾರೆ.

ಇದೇ ವೇಳೆ ಎಂಎಸ್ ಡಿ ಅಭಿಮಾನಿ ಒಬ್ಬ ಧೋನಿಯ ಬಗ್ಗೆ ಎರಡು ಪದಗಳಲ್ಲಿ ವಿವರಿಸಲು ಕೇಳಿದಾಗ, ಆಕಾಶ್ ಚೋಪ್ರಾ ಅವರು "ಜೀನಿಯಸ್, ಲೆಜೆಂಡ್" ಎಂದು ಧೋನಿಯನ್ನು ಹೊಗಲಿದ್ದಾರೆ.

Mahesh M Dhandu :
ಕಂಟೆಂಟ್ ಎಡಿಟರ್

Dailyhunt
Disclaimer: This content has not been generated, created or edited by Dailyhunt. Publisher: Saaksha TV