Dailyhunt Logo
  • Light mode
    Follow system
    Dark mode
    • Play Story
    • App Story
ಟಿವಿಕೆ ಮೈತ್ರಿಕೂಟದಿಂದ ಕಾಂಗ್ರೆಸ್‌ ಹಿಂದೆ ಸರಿಯುವ ಎಚ್ಚರಿಕೆ

ಟಿವಿಕೆ ಮೈತ್ರಿಕೂಟದಿಂದ ಕಾಂಗ್ರೆಸ್‌ ಹಿಂದೆ ಸರಿಯುವ ಎಚ್ಚರಿಕೆ

Saaksha TV 2 weeks ago

ಮಿಳುನಾಡಿನ ರಾಜಕಾರಣದಲ್ಲಿ ಟಿವಿಕೆ ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಟಿವಿಕೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ನಿರ್ಧಾರ ಕೈಗೊಂಡರೆ, ಕಾಂಗ್ರೆಸ್‌ ಮೈತ್ರಿಕೂಟದಿಂದ ಹಿಂದೆ ಸರಿಯಲಿದೆ ಎಂದು ಕಾಂಗ್ರೆಸ್‌ ಹೈಕಮಾಂಡ್ ವೀಕ್ಷಕ ಅಶೋಕನ್ ಸೊಲೊಮನ್ ಎಚ್ಚರಿಸಿದ್ದಾರೆ.

ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಪರಿಸ್ಥಿತಿ ನಿರ್ಮಾಣವಾದರೆ, ಕಾಂಗ್ರೆಸ್‌ ಸರ್ಕಾರದ ಸಂಪುಟದಿಂದಲೂ ಹೊರಬರಲಿದೆ ಎಂದು ಸಚಿವ ರಾಜೇಶ್‌ಕುಮಾರ್ ಈ ಹಿಂದೆ ಬಹಿರಂಗವಾಗಿ ಹೇಳಿದ್ದರು.
ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ ಮೊದಲ ಪಕ್ಷಗಳಲ್ಲಿ ಕಾಂಗ್ರೆಸ್‌ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ಈ ನಿಲುವು ಮುಖ್ಯಮಂತ್ರಿ ವಿಜಯ್ ಅವರಿಗೆ ರಾಜಕೀಯವಾಗಿ ಹೊಸ ಸವಾಲು ತಂದೊಡ್ಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Saaksha TV