Dailyhunt
ವಿಶ್ವದ ಜನಪ್ರಿಯ ಟಾಕ್ ಶೋ 'ಎಲೆನ್ ಡಿಜೆನೆರೆಸ್ ಶೋ' ಅಂತ್ಯ..!

ವಿಶ್ವದ ಜನಪ್ರಿಯ ಟಾಕ್ ಶೋ 'ಎಲೆನ್ ಡಿಜೆನೆರೆಸ್ ಶೋ' ಅಂತ್ಯ..!

Saaksha TV 4 years ago

ವಿಶ್ವದ ಜನಪ್ರಿಯ ಟಾಕ್ ಶೋ 'ಎಲೆನ್ ಡಿಜೆನೆರೆಸ್ ಶೋ' ಅಂತ್ಯ..!

ವಿಶ್ವದ ಜನಪ್ರಿಯ ಟಾಕ್‌ ಶೋವಾಗಿ ವಿಶ್ವಾದ್ಯಂತ ಖ್ಯಾತಿ ಪಡೆದಿದ್ದ 'ಎಲೆನ್ ಡಿಜೆನೆರೆಸ್ ಶೋ' ಮುಂದಿನ ವರ್ಷ ಅಂತ್ಯವಾಗಲಿದೆ. ಈ ವಿಚಾರವನ್ನ ಖುದ್ದು ಶೋನ ಖ್ಯಾತ ನಿರೂಪಕಿ ಎಲೆನ್ ಡಿಜೆನೆರೆಸ್ ಅವರೇ ಬಹಿರಂಗಗೊಳಿಸಿದ್ದಾರೆ.

ಸುಮಾರು 19 ವರ್ಷಗಳಿಂದ ಈ ಟಾಕ್ ಶೋ ಅಮೆರಿಕಾದಲ್ಲಿ ನಡೆದುಕೊಂಡುಬಂದಿತ್ತು. ಈ ಶೋನಲ್ಲಿ ಅತಿ ದೊಡ್ಡ ದೊಡ್ಡ ವ್ಯಕ್ತಿಗಳು ಭಾಗಿಯಾಗಿದ್ದಾರೆ.. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ , ಹಲವು ಅಧ್ಯಕ್ಷರು , ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರು , ಟೇಲರ್ ಸ್ವಿಫ್ಟ್ , ಜಾರ್ಜ್ ಬುಷ್, ಜಸ್ಟಿನ್ ಬೀಬರ್, ಲಿಯಾನಾರ್ಡೊ ಡಿ ಕ್ಯಾಪ್ರಿಕೊ, ಯೂಸಫ್ ಜಾಯ್ ಮಲಾಲ, ಅಷ್ಟೇ ಅಲ್ದೇ ಸಾಮಾನ್ಯ ಜನರು , ಮಕ್ಕಳು , ಪ್ರಭಾವಿ ಉದ್ಯಮಿಗಳು , ಬಿಲ್ ಗ್ರೇಟ್ಸ್ ನ ಮಂದಿ ಹೀಗೆ ಹಲವರು ಅತಿಥಿಗಳಾಗಿ ಆಗಮಿಸಿದ್ದಾರೆ.

19 ವರ್ಷಗಳಿಂದ ನಡೆಯುತ್ತಿದ್ದ ಈ ಶೋಗೆ ಅನೇಕ ಫ್ಯಾನ್ಸ್ ಇದ್ದು, ಧಿಡೀರನೇ ಶೋ ನಿಂತುಹೋಗಲಿದೆ ಎಂಬ ಸುದ್ದಿಯಿಂದ ಬೇಸರಗೊಂಡಿದ್ದಾರೆ.

ಇನ್ನೂ ಇಷ್ಟೂ ವರ್ಷಗಳ ಕಾಲ ಶೋನ ನಿರೂಪಕಿಯಾಗಿರುವ ಎಲೆನ್ ಡಿಜೆನೆರೆಸ್ ತಾವು ಟಾಕ್‌ ಶೋ ಅನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಸೀಸನ್ ಚಾಲ್ತಿಯಲ್ಲಿದ್ದು ಇದೇ ಶೋನ ಕೊನೆಯ ಸೀಸನ್ ಆಗಿರಲಿದೆ ಎಂದು ಸಹ ಹೇಳಿದ್ದಾರೆ. ಶೋನ ಕೊನೆಯ ಎಪಿಸೋಡ್ ಮುಂದಿನ ವರ್ಷದ ಆರಂಭದಲ್ಲಿ ಪ್ರಸಾರವಾಗಲಿದೆ.

ಶೋ ನಿಲ್ಲಲು ಕಾರಣವೇನು..?

ಇನ್ನೂ ವಿಶ್ವಾದ್ಯಂತ ಇಷ್ಟು ಪ್ರಖ್ಯಾತಿ ಗಳಿಸಿದ್ದು, ಟಾಕ್ ಶೋ ಅಚಾನಕ್ ಆಗಿ ನಿಲ್ಲಿಸುವ ನಿರ್ಧಾರ ಕೈಗೊಳ್ಳೋದ್ರ ಹಿಂದಿನ ಕಾರಣವೇನು ಎಂಬ ಗೊಂದಲ ಅನೇಕರಿಗಿದೆ.. ಅಂದ್ಹಾಗೆ ಈ ಶೋ ನಲ್ಲಿ ಕೆಲಸ ಮಾಡಿದ್ದ ಅನೇಕರ ಬಗ್ಗೆ ಹಲವಾರು ಆರೋಪಗಳು, ವದಂತಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಕೆಲವು ಮಾಜಿ ಸಿಬ್ಬಂದಿ ಶೋ ಬಗ್ಗೆ ಕೆಲವು ಆರೋಪ ಮಾಡಿದ್ದರು. ಶೋನ ಸೆಟ್‌ನಲ್ಲಿ ವರ್ಣಬೇಧ ನೀತಿ ಇದೆ, ದಬ್ಬಾಳಿಕೆ, ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದರು. ಶೋನ ಮೂವರು ಹಿರಿಯ ಸಿಬ್ಬಂದಿಯ ಮೇಲೆ ಆರೋಪ ಬಂದಿತ್ತು. ಅವರನ್ನು ಶೋನಿಂದ ಹೊರಗೆ ಹಾಕಲಾಯಿತು.

ಆದ್ರೆ ನಿರೂಪಕಿ ಎಲೆನ್ ಮೇಲೆ ಮಾತ್ರ ಯಾವುದೇ ರೀತಿಯಾದ ಆರೋಪಗಳು ಕೇಳಿ ಬಂದಿಲ್ಲ.. ಆದ್ರೂ ಈ ನಿರ್ಧಾರ ಕೈಗೊಂಡಿದ್ದಾರೆ. 'ನನ್ನ ನಂಬಿಕೆಗೆ ದೊಡ್ಡ ಪೆಟ್ಟು ಬಿದ್ದಿತು. ನಾನು ಮಾನವೀಯತೆ ಮತ್ತು ಸಹಾನುಭೂತಿಯನ್ನು ಹಂಚುವ ಕಾರ್ಯ ಮಾಡುತ್ತಿದ್ದೆ. ಆದರೆ ನನ್ನ ನಂಬಿಕೆಗೆ ನನ್ನ ಆದರ್ಶಕ್ಕೆ ದೊಡ್ಡ ಹೊಡೆತ ಬಿತ್ತು. ಅದು ನನ್ನನ್ನು ತೀವ್ರವಾಗಿ ಘಾಸಿಗೊಳಿಸಿತು' ಎಂದಿದ್ದಾರೆ.

ಕೊರೊನ ಮಹಾಮಾರಿ:

ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ".

ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.

ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .

ಜನ ನಿಬಿಡ ಪ್ರದೇಶದಿಂದ ದೂರವಿರಿ.

ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.

ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.

ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.

ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.

ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Namratha Rao
ಕಂಟೆಂಟ್ ಎಡಿಟರ್ -saakshatv.com

Dailyhunt
Disclaimer: This content has not been generated, created or edited by Dailyhunt. Publisher: Saaksha TV