ಮುಂಬಯಿ - ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತದ ಆಯುಕ್ತರಾದ ತುಕಾರಾಮ ಮುಂಢೆ ಅವರು ಕೇವಲ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿನ 'ಮಹಾಪ್ರಸಾದ' ಮತ್ತು 'ಅನ್ನದಾನ`ಗಳನ್ನಷ್ಟೇ ವಿಶೇಷವಾಗಿ ಉಲ್ಲೇಖಿಸಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಆಹಾರ ಸುರಕ್ಷತೆಯ ಹೆಸರಿನಲ್ಲಿ ಕೇವಲ ಹಿಂದೂಗಳ ಧಾರ್ಮಿಕ ಪರಂಪರೆಗಳನ್ನು ಪರವಾನಗಿಗಳು, ನೋಂದಣಿ ಮತ್ತು ನಿಯಮಗಳ ಜಾಲದಲ್ಲಿ ಸಿಲುಕಿಸುವ ಈ ಯತ್ನವು ಅತ್ಯಂತ ಪಕ್ಷಪಾತದಿಂದ ಕೂಡಿದ್ದು ಆಡಳಿತಾತ್ಮಕ ದುಷ್ಟತನದ ಉತ್ತಮ ಉದಾಹರಣೆಯಾಗಿದೆ. ಬಕ್ರೀದ, ರಮಜಾನ ಈದ, ಇಫ್ತಾರ ಕೂಟಗಳು, ಕ್ರಿಸ್ಮಸ ಅಥವಾ 'ಗುಡ ಫ್ರೈಡೇ' ನಂತಹ ಇತರ ಧರ್ಮೀಯರ ಹಬ್ಬಗಳ ಸಮಯದಲ್ಲಿ ಬೇಯಿಸುವ ಆಹಾರ ಮತ್ತು ನಡೆಯುವ ಸಾರ್ವಜನಿಕ ಅನ್ನದಾನವು ಆಡಳಿತಕ್ಕೆ ಕಾಣಿಸುವುದಿಲ್ಲವೇ? ಆ ಸಮಯದಲ್ಲಿ ಆಹಾರ ಸುರಕ್ಷತೆಯ ನಿಯಮಗಳನ್ನು ಪಾಲಿಸಲಾಗುತ್ತದೆಯೇ? ಎಂಬುದಕ್ಕೆ ಸ್ಪಷ್ಟ ಉತ್ತರವನ್ನು ಆಡಳಿತವು ನೀಡಬೇಕು. ಇತರ ಧರ್ಮೀಯರ ಹಬ್ಬಗಳಿಗೂ ಈ ನಿಯಮಗಳನ್ನು ಅನ್ವಯಿಸಿ ಅವರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದೇ ಎಂಬುದನ್ನು ಆಡಳಿತವು ಘೋಷಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಘಟಕರಾದ ಶ್ರೀ. ಸುನೀಲ ಘನವಟ ಅವರು ಸವಾಲು ಹಾಕಿದ್ದಾರೆ. 'ತುಕಾರಾಮ ಮುಂಢೆ ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರೂ, ಕೇವಲ ಹಿಂದೂಗಳ ಹಬ್ಬ-ಉತ್ಸವಗಳನ್ನು ಗುರಿಯಾಗಿಸುವ ನಿಲುವನ್ನು ಸಹಿಸಲು ಸಾಧ್ಯವಿಲ್ಲ', ಎಂದೂ ಶ್ರೀ. ಘನವಟ ಅವರು ನಮೂದಿಸಿದ್ದಾರೆ.
ಶ್ರೀ. ಘನವಟ ಅವರು ತಮ್ಮ ಮಾತನ್ನು ಮುಂದುವರಿಸಿ…
1. ಭಾರತೀಯ ಸಂವಿಧಾನದ ಪ್ರಕಾರ ಕಾಯಿದೆಯು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು, ಅಲ್ಲದೆ ಸರಕಾರಕ್ಕೆ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಕೇವಲ ಹಿಂದೂಗಳ ಶ್ರದ್ಧೆಗೆ ಸಂಬಂಧಿಸಿದ ಅನ್ನದಾನ ಮತ್ತು ಭಂಡಾರದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಮಾತುಗಳನ್ನಾಡುವುದು ಪಕ್ಷಪಾತವಾಗಿದೆ. ಜನರಿಗೆ ಆಹಾರದ ಗುಣಮಟ್ಟದ ಪಾಠ ಹೇಳುವ ಆಡಳಿತಕ್ಕೆ ತನ್ನದೇ ಕಟ್ಟಡಗಳಲ್ಲಿನ ಅಶುಚಿತ್ವ ಕಾಣಿಸದಿರುವುದು ದುರದೃಷ್ಟಕರವಾಗಿದೆ.
2. ಮಹಾರಾಷ್ಟ್ರ ರಾಜ್ಯದ ಮುಖ್ಯ ಕೇಂದ್ರವಾಗಿರುವ ಸಚಿವಾಲಯ, ಶಾಸಕರ ಭವನ ಮತ್ತು ವಿಧಾನ ಭವನಗಳಲ್ಲಿನ ಉಪಹಾರ ಗೃಹಗಳ (ಕ್ಯಾಂಟೀನ) ಕಳಪೆ ಮಟ್ಟದ ಆಹಾರದ ಬಗ್ಗೆ ಜನಪ್ರತಿನಿಧಿಗಳೇ ಪದೇ ಪದೇ ದೂರುಗಳನ್ನು ನೀಡಿದ್ದಾರೆ. ಉಪಹಾರ ಗೃಹದ ನಿರ್ವಹಣಾ ಸಿಬ್ಬಂದಿಯೊಂದಿಗೆ ಶಾಸಕರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪ್ರಸಂಗಗಳನ್ನೂ ಮಹಾರಾಷ್ಟ್ರ ಕಂಡಿದೆ. ಸರಕಾರಿ ಆಸ್ಪತ್ರೆಗಳು ಮತ್ತು ವಸತಿನಿಲಯಗಳಲ್ಲಿ ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ನೀಡಲಾಗುವ ಆಹಾರವು ಅತ್ಯಂತ ಕಳಪೆ ಗುಣಮಟ್ಟದ್ದಾಗಿರುತ್ತದೆ. ತಮ್ಮದೇ ಸರಕಾರಿ ವ್ಯವಸ್ಥೆಗಳಲ್ಲಿ ಸುರಕ್ಷಿತ ಆಹಾರವನ್ನು ಒದಗಿಸಲು ಸಾಧ್ಯವಾಗದ ಅಧಿಕಾರಿಗಳು ನಿಷ್ಕಾಮ ಸೇವಾಭಾವದಿಂದ ಸಿದ್ಧವಾಗುವ 'ಮಹಾಪ್ರಸಾದ'ದ ಮೇಲೆ ಪ್ರಶ್ನೆ ಎತ್ತುತ್ತಿರುವುದು ಆಕ್ರೋಶಜನಕ ವಿಷಯವಾಗಿದೆ.
3. ಆಹಾರ ಸುರಕ್ಷತೆಯ ನಿಯಮಗಳನ್ನು ಜಾರಿಗೆ ತರುವುದಿದ್ದರೆ, ಅವುಗಳನ್ನು ಎಲ್ಲಾ ಧರ್ಮೀಯರ ಹಬ್ಬ-ಉತ್ಸವಗಳ ಆಹಾರ ವಿತರಣೆಗೆ ಸಮಾನ ರೀತಿಯಲ್ಲಿ ಅನ್ವಯಿಸಬೇಕು. ಆಡಳಿತವು ಮೊದಲು ಸಚಿವಾಲಯ, ಶಾಸಕರ ಭವನ ಮತ್ತು ಎಲ್ಲಾ ಸರಕಾರಿ ಉಪಹಾರ ಗೃಹಗಳ ಸಮಗ್ರ ತಪಾಸಣೆ ನಡೆಸಿ ಅಲ್ಲಿನ ಆಹಾರದ ಗುಣಮಟ್ಟದ ವರದಿಯನ್ನು ಸಾರ್ವಜನಿಕಗೊಳಿಸಬೇಕು. ಹಿಂದೂಗಳ ದೇವಸ್ಥಾನಗಳು, ಗಣೇಶೋತ್ಸವ ಮತ್ತು ನವರಾತ್ರೋತ್ಸವದ ಸಾರ್ವಜನಿಕ ಮಂಡಳಿಗಳಿಗೆ ಪರವಾನಗಿಯ ಹೆಸರಿನಲ್ಲಿ ಕಿರುಕುಳ ನೀಡುವ ಕೆಲಸವನ್ನು ಮಾಡಬಾರದು, ಹಾಗೆಯೇ ಅನ್ನದಾನದ ಸೇವಾಭಾವದ ಪ್ರಕ್ರಿಯೆಯಲ್ಲಿ ಅಡೆತಡೆಗಳನ್ನು ಉಂಟುಮಾಡಬಾರದು.

