Dailyhunt
ಅಕೋಲಾದಲ್ಲಿ ಹನುಮಾನ್ ಜಯಂತಿಯಂದು ವಾನರ ಸೇನೆಗೆ ಮಹಾಪ್ರಸಾದದ ಪಂಕ್ತಿ!

ಅಕೋಲಾದಲ್ಲಿ ಹನುಮಾನ್ ಜಯಂತಿಯಂದು ವಾನರ ಸೇನೆಗೆ ಮಹಾಪ್ರಸಾದದ ಪಂಕ್ತಿ!

೨೦ ವರ್ಷಗಳ ಪರಂಪರೆ!

ಕೋಲಾ - ಇಲ್ಲಿನ ಕೋಥಳಿ ಬುರ್ದೂಕ್‌ನಲ್ಲಿ ಹನುಮಾನ್ ಜಯಂತಿಯಂದು ವಾನರ ಸೇನೆಯು ಪಂಕ್ತಿಯಲ್ಲಿ ಸಾಲಾಗಿ ಕುಳಿತು ಸ್ಟೀಲ್ ತಟ್ಟೆಗಳಲ್ಲಿ ಪ್ರಸಾದವನ್ನು ಸ್ವೀಕರಿಸಿತು. ಇಲ್ಲಿನ ಮುಂಗಸಾಜಿ ಮಹಾರಾಜ್ ಸಂಸ್ಥಾನದಲ್ಲಿ ಹನುಮಾನ್ ಜನ್ಮೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ಈ ನಿಮಿತ್ತ ಭಕ್ತರಿಗಾಗಿ ಮಹಾಪ್ರಸಾದವನ್ನು ಏರ್ಪಡಿಸಲಾಗಿತ್ತು. ವಾನರರಿಗೂ ಮಹಾಪ್ರಸಾದವನ್ನು ಬಡಿಸಲಾಯಿತು. ವಾನರರು ಅತ್ಯಂತ ಶಿಸ್ತುಬದ್ಧವಾಗಿ ಮಹಾಪ್ರಸಾದವನ್ನು ಸ್ವೀಕರಿಸಿದವು. ಕಳೆದ ೨೦ ವರ್ಷಗಳಿಂದ ಇಲ್ಲಿ ಈ ಪರಂಪರೆಯನ್ನು ಉಳಿಸಿಕೊಂಡು ಬರಲಾಗುತ್ತಿದೆ. ಈ ಪಂಕ್ತಿಯಲ್ಲಿ ಕೋತಿಗಳಿಗಾಗಿ ಕಡಲೆ, ಸೋಯಾಬೀನ್ ಮತ್ತು ವಿವಿಧ ಸಿಹಿತಿಂಡಿಗಳನ್ನು ಬಡಿಸಲಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada