Dailyhunt Logo
  • Light mode
    Follow system
    Dark mode
    • Play Story
    • App Story
ಅಲಿಬಾಗ್‌ನಿಂದ ಮುಂಬಯಿ ಪ್ರಯಾಣ ಕೇವಲ ೪೫ ನಿಮಿಷಗಳಲ್ಲಿ !

ಅಲಿಬಾಗ್‌ನಿಂದ ಮುಂಬಯಿ ಪ್ರಯಾಣ ಕೇವಲ ೪೫ ನಿಮಿಷಗಳಲ್ಲಿ !

ದೇಶದ ಮೊದಲ ಅತಿ ಎತ್ತರದ ಸಮುದ್ರ ಸೇತುವೆಯ ಕಾಮಗಾರಿ ೨೦೨೮ರ ವೇಳೆಗೆ ಪೂರ್ಣಗೊಳ್ಳಲಿದೆ !

ಮುಂಬಯಿ - 'ಕೇಬಲ್ ಸ್ಟೇ ಗರ್ಡರ್' ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು (ಎಂ.ಎಸ್.ಆರ್.ಡಿ.ಸಿ.) ಮಹತ್ವಾಕಾಂಕ್ಷೆಯ ಸಮುದ್ರ ಸೇತುವೆ ಯೋಜನೆಯನ್ನು ನಿರ್ಮಿಸುತ್ತಿದೆ.

ನವಿ ಮುಂಬಯಿನ ಉರಣ್‌ನಲ್ಲಿರುವ ರೇವಸ್-ಕರಂಜಾ ಸಮುದ್ರದ ಧರಮತರ್ ಕೊಲ್ಲಿಯ ಮೇಲೆ ಈ ಮೇಲ್ಸೇತುವೆಯ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರಲ್ಲಿ ೧೦ ಕಿಲೋಮೀಟರ್‌ನಷ್ಟು ಮೇಲ್ಸೇತುವೆ (ಫ್ಲೈಓವರ್) ಮತ್ತು ೨ ಕಿಲೋಮೀಟರ್‌ನಷ್ಟು ಸಮುದ್ರ ಸೇತುವೆ ಇರಲಿದೆ. ಈ ಸಮುದ್ರ ಸೇತುವೆಯಿಂದಾಗಿ ಅಲಿಬಾಗ್‌ನಿಂದ ಮುಂಬಯಿಗೆ ಕೇವಲ ೪೫ ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಯ ಕಾಮಗಾರಿಯು ನವೆಂಬರ್ ೨೦೨೮ರ ವೇಳೆಗೆ ಪೂರ್ಣಗೊಳ್ಳಲಿದೆ.

ಈ ಸುಸ್ಥಿರ ಮೂಲಸೌಕರ್ಯ ಯೋಜನೆಯಿಂದ ಕೊಂಕಣ ಭಾಗದ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಹೊಸ ದಿಕ್ಕು ಸಿಗಲಿದೆ. ಆದ್ದರಿಂದ, ಈ ಯೋಜನೆಯು ಒಟ್ಟಾರೆ ಕೊಂಕಣ ಪ್ರದೇಶಕ್ಕೆ ಅತ್ಯಂತ ಮಹತ್ವದ್ದಾಗಲಿದೆ. ೪೫ ಮೀಟರ್ ಎತ್ತರದ ಈ ಸಮುದ್ರ ಸೇತುವೆಯನ್ನು ನಿರ್ಮಿಸಲು ರಾಯಗಡ ಜಿಲ್ಲೆಯವರಾದ ಮಾಜಿ ಮುಖ್ಯಮಂತ್ರಿ ಅಂತುಲೆ ಅವರು ೨೫ ವರ್ಷಗಳ ಹಿಂದೆಯೇ ಪ್ರಯತ್ನಿಸಿದ್ದರು; ಆದರೆ ಈಗ ಈ ಯೋಜನೆಯು ಫಡ್ನವಿಸ್ ಸರಕಾರದ ಅವಧಿಯಲ್ಲಿ ಸಾಕಾರಗೊಳ್ಳಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada