Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕ 'ಎಐ ಪಡೆ' (ಫೋರ್ಸ್) ಸ್ಥಾಪಿಸಲಿದೆ

ಅಮೆರಿಕ 'ಎಐ ಪಡೆ' (ಫೋರ್ಸ್) ಸ್ಥಾಪಿಸಲಿದೆ

ಡೊನಾಲ್ಡ್ ಟ್ರಂಪ್ ಅವರ ಘೋಷಣೆ

​(ಎಐ ಎಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ - ಕೃತಕ ಬುದ್ಧಿಮತ್ತೆ)

​ವಾಷಿಂಗ್ಟನ್ (ಅಮೆರಿಕ) - ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, 'ನಾವು 'ಎಐ ಪಡೆ' (ಫೋರ್ಸ್) ಸ್ಥಾಪಿಸಲು ಸಿದ್ಧತೆ ನಡೆಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ವಿಶೇಷ ಸಲಹೆಗಾರರ ನೇಮಕವನ್ನು ಘೋಷಿಸುತ್ತೇವೆ' ಎಂದು ತಿಳಿಸಿದ್ದಾರೆ.

​ಟ್ರಂಪ್ ಅವರು ತಮ್ಮ 'ಟ್ರೂತ್ ಸೋಶಿಯಲ್' ಸಾಮಾಜಿಕ ಜಾಲತಾಣದ ಖಾತೆಯಲ್ಲಿ, ನಾವು ಈ ಅದ್ಭುತ ಉದ್ಯಮದ ಬೆಳವಣಿಗೆಗೆ ಯಾವುದೇ ರೀತಿಯಲ್ಲಿ ಅಡೆತಡೆ ಉಂಟುಮಾಡುವುದಿಲ್ಲ ಅಥವಾ ಅದನ್ನು ಹತೋಟಿಯಲ್ಲಿಡಲು ಪ್ರಯತ್ನಿಸುವುದಿಲ್ಲ. ಬದಲಾಗಿ, ನಾವು ಇದಕ್ಕೆ ಆದ್ಯತೆ ನೀಡುತ್ತೇವೆ, ಸಹಾಯ ಮಾಡುತ್ತೇವೆ. ಮತ್ತು ಇದರ ಬೆಳವಣಿಗೆಯ ಮೇಲೆ ನಿಗಾ ಇಡುತ್ತೇವೆ. ಆದಾಗ್ಯೂ, ನಾವು ಅಕ್ರಮ ಚಟುವಟಿಕೆಗಳ ಮೇಲೆಯೂ ನಿಗಾ ವಹಿಸುತ್ತೇವೆ ಮತ್ತು ಪ್ರಸ್ತುತವಿರುವ ಅಪರಾಧ ಹಾಗೂ ನಾಗರೀಕ ಕಾನೂನು ವ್ಯವಸ್ಥೆಯ ಮೂಲಕವೇ ಇದನ್ನು ಸುಲಭವಾಗಿ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

​ಟ್ರಂಪ್ ಅವರು ೨೦೧೯ ರಲ್ಲಿ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಬಾಹ್ಯಾಕಾಶದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಹೆಚ್ಚಿಸಲು 'ಸ್ಪೇಸ್ ಫೋರ್ಸ್' (ಬಾಹ್ಯಾಕಾಶ ಪಡೆ) ಅನ್ನು ಸ್ಥಾಪಿಸಿದ್ದರು. ಇತ್ತೀಚೆಗಷ್ಟೇ ಮೊದಲ ಬಾರಿಗೆ ತನ್ನ ಬಳಿ ಬಾಹ್ಯಾಕಾಶ ಕಕ್ಷೆಯಲ್ಲಿ ನಿಯೋಜಿಸಲಾಗಿರುವ ಶಸ್ತ್ರಾಸ್ತ್ರಗಳಿವೆ ಎಂದು ಅಮೆರಿಕ ಸ್ಪಷ್ಟವಾಗಿ ಒಪ್ಪಿಕೊಂಡಿದೆ. ಈ ಶಸ್ತ್ರಾಸ್ತ್ರಗಳನ್ನು ಶತ್ರುಗಳ ಕಾರ್ಯಾಚರಣೆಯನ್ನು ಎದುರಿಸುವುದರ ಜೊತೆಗೆ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಎರಡೂ ಕಾರ್ಯಾಚರಣೆಗಳಲ್ಲಿ ಬಳಸಬಹುದಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada