ವಾಷಿಂಗ್ಟನ್ (ಅಮೆರಿಕ) - ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ೧೦,೦೦೦ ಜನರನ್ನು ಅಮೆರಿಕದ 'ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್' ಇಲಾಖೆಯು ಜೂನ್ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಬಂಧಿಸಿದೆ. ಅಮೆರಿಕದ ಪ್ರಮುಖ ನಗರಗಳಲ್ಲಿ ಹೆಚ್ಚು ಸದ್ದು ಮಾಡಿ ದಾಳಿ ನಡೆಸುವ ಬದಲಿಗೆ, ಈ ಇಲಾಖೆಯು ಈಗ ಹೆಚ್ಚು ರಹಸ್ಯ ಮತ್ತು ಯೋಜಿತ ರೀತಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದೆ.
ಆದಾಗ್ಯೂ, ಈ ಬಂಧನಗಳು ನಿಖರವಾಗಿ ಯಾವ ಯಾವ ಭಾಗಗಳಲ್ಲಿ ನಡೆದಿವೆ? ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

