Thursday, 29 Jul, 6.31 am ಸನಾತನ ಪ್ರಭಾತ ಕನ್ನಡ

ಅಂತರರಾಷ್ಟ್ರೀಯ ವಾರ್ತೆಗಳು
ಅತ್ಯಂತ ಹೆಚ್ಚು ಕೊರೊನಾ ರೋಗಿಗಳು ಅಮೆರಿಕದಲ್ಲಿ ಮತ್ತೆ ಪತ್ತೆ !

ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ನಾಗರಿಕರು ಮತ್ತೆ ಮಾಸ್ಕಅನ್ನು ಧರಿಸಬೇಕಾಗಲಿದೆ !

ವಾಷಿಂಗ್ಟನ್ (ಅಮೇರಿಕಾ) - ಕಳೆದ ಕೆಲವು ದಿನಗಳಿಂದ ಅಮೇರಿಕಾದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ೬೦,೦೦೦ ಕ್ಕೂ ಹೆಚ್ಚು ರೋಗಿಗಳು ಪತ್ತೆಯಾಗಿದ್ದಾರೆ. ಆದ್ದರಿಂದ ಅತ್ಯಂತ ಹೆಚ್ಚು ರೋಗಿಗಳು ಪತ್ತೆಯಾದ ಪ್ರಕರಣದಲ್ಲಿ ಅಮೇರಿಕಾವು ಮೊದಲ ಸ್ಥಾನಕ್ಕೆ ತಲುಪಿದೆ. ಅಮೇರಿಕಾದಲ್ಲಿ ಕೊರೊನಾದ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಲಸಿಕೆ ಪಡೆದ ನಾಗರಿಕರು ಮತ್ತೊಮ್ಮೆ ಮಾಸ್ಕಅನ್ನು ಧರಿಸಬೇಕಾಗಬಹುದು. ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡ ನಾಗರಿಕರು ಸಹ ಸೋಂಕಿಗೆ ಒಳಗಾಗಬಹುದು ಹೇಳಲಾಗುತ್ತದೆ.

೧. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ನಿರ್ದೇಶಕರು ಮಾಸ್ಕ ಬಳಕೆಯ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ. ಅಂಕಿಅಂಶಗಳ ಪ್ರಕಾರ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದ್ದರೂ, ಕೊರೋನಾದ 'ಡೆಲ್ಟಾ' ರೋಗಾಣುವಿನ ಸೋಂಕು ಕೆಲವು ಅಪರೂಪದ ಪ್ರಕರಣಗಳಲ್ಲಿ ಹೆಚ್ಚಾಗುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.

೨. ಇತರ ದೇಶಗಳಿಗಿಂತ ಹೆಚ್ಚಿನ ಲಸಿಕೆಗಳು ಪೂರೈಕೆಯಾಗುತ್ತಿದ್ದರೂ, ಅಮೇರಿಕಾದಲ್ಲಿ ಹಲವಾರು ತಿಂಗಳುಗಳಿಂದ ವ್ಯಾಕ್ಸಿನೇಶನ್‌ನ ವೇಗವು ನಿಧಾನವಾಗಿದೆ. ಈ ಬಗ್ಗೆ ಅಮೇರಿಕಾದ ಅಧ್ಯಕ್ಷ ಜೊ ಬಾಯಡನ್ ಇವರು, ವ್ಯಾಕ್ಸಿನೇಷನ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ. ವ್ಯಾಕ್ಸಿನೇಷನ್‌ಅನ್ನು ಹೆಚ್ಚಿಸಲು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Sanatan Prabhat Kannada
Top