Dailyhunt Logo
  • Light mode
    Follow system
    Dark mode
    • Play Story
    • App Story
ಬಾಗಿಲು ತೆರೆ ಯುವತಿಯೇ, ಬಾಗಿಲು ತೆರೆ.!

ಬಾಗಿಲು ತೆರೆ ಯುವತಿಯೇ, ಬಾಗಿಲು ತೆರೆ.!

ನಾಶಿಕನಲ್ಲಿನ ಅಂತಾರಾಷ್ಟ್ರೀಯ ವ್ಯವಸಾಯಿಕ ಸಂಸ್ಥೆಯೊಂದರಲ್ಲಿ ನಡೆದ ಮತಾಂತರದ ಪ್ರಕರಣದ ಕುರಿತು ಹಿಂದೂಗಳ ಕಣ್ಣು ತೆರೆಸುವ ಲೇಖನ

ಲ್ಯಾಂಡ್ (ಭೂಮಿ) ಜಿಹಾದ್, ಲವ್ ಜಿಹಾದ್, ಜಿಮ್ (ಆಧುನಿಕ ವ್ಯಾಯಾಮ ಶಾಲೆ) ಜಿಹಾದ್, ಕಾರ್ಪೊರೇಟ್ (ವೃತ್ತಿಪರ) ಜಿಹಾದ್… ಈ ಪಟ್ಟಿ ಬೆಳೆಯುತ್ತಲೇ ಇದೆ.

ಈ ಘಟನೆಗಳು ಮತ್ತು ಅವುಗಳ ಪರಿಣಾಮಗಳು, ಹಾಗೆಯೇ ಯುವತಿಯರ ಶೋಷಣೆಯು ನಿರಂತರವಾಗಿ ಮುನ್ನೆಲೆಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳ ವಿಡಿಯೋಗಳು, ಸುದ್ದಿಗಳು, ವಿವರವಾದ ಬರಹಗಳು, ಚಲನಚಿತ್ರಗಳು, ವಿವಿಧ ಸಾಮಾಜಿಕ ಸಂಸ್ಥೆಗಳ ಮೂಲಕ ಜಾಗೃತಿ ಅಭಿಯಾನಗಳು… ಅಷ್ಟೇ ಏಕೆ, ಪೊಲೀಸರಿಂದ ಲಭಿಸುವ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳು; ಎಲ್ಲೆಡೆಯಿಂದಲೂ ಈ ವಿಷಯದ ಮೇಲೆ ಬೆಳಕು ಚೆಲ್ಲಲಾಗುತ್ತಿದೆ. ಒಟ್ಟಾರೆಯಾಗಿ ಅವರ ಬದಲಾಗುತ್ತಿರುವ 'ಮೋಡಸ್ ಆಪರೆಂಡಿ' (ಕೆಲಸದ ವಿಧಾನ) ನಮಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ಆದರೆ ಇಷ್ಟಾಗಿಯೂ ಸಮಾಜದ ಯುವತಿಯರು ತಮ್ಮ ಮನಸ್ಸಿನ ಬಾಗಿಲನ್ನು ಏಕೆ ಮುಚ್ಚಿಕೊಂಡಿದ್ದಾರೆ ? ಯಾರು ನಿರಪರಾಧಿಗಳೋ, ಅವರ ವಿಷಯ ಇಲ್ಲಿಲ್ಲ; ಆದರೆ ಯಾರು ಇದನ್ನು ತಪ್ಪಿಸಬಹುದೋ, ಅವರಿಗೆ ನೇರವಾದ ಪ್ರಶ್ನೆಗಳನ್ನು ಕೇಳುವುದು ಅಷ್ಟೇ ಮುಖ್ಯವಾಗಿದೆ. ಕೈಗಾರಿಕಾ ಸಂಸ್ಥೆಗಳು, ದುಷ್ಕೃತ್ಯಗಳಿಗಾಗಿ ಕೊಠಡಿಗಳನ್ನು ನೀಡುವ ಹೋಟೆಲ್‌ಗಳು, ಇವರೆಲ್ಲರನ್ನೂ ಅಷ್ಟೇ ಹೊಣೆಗಾರರನ್ನಾಗಿ ಮಾಡುವುದು, ಮತಾಂತರ ವಿರೋಧಿ ಕಠಿಣ ಕಾನೂನುಗಳು ಮತ್ತು ಅವುಗಳ ಅನುಷ್ಠಾನ, ಜಾಗೃತಿ, ಪೊಲೀಸ್ ಕ್ರಮಗಳ ಮೂಲಕ ಪರಿಹಾರಗಳು ನಡೆಯುತ್ತಿವೆ. ಆದರೆ ನನ್ನ ಪ್ರಶ್ನೆಯಿರುವುದು, ಸ್ವತಃ ಪೀಡಿತ ಮಾನಸಿಕತೆಯಲ್ಲಿ ಬದುಕುತ್ತಿರುವ ಯುವತಿಯರು ಮತ್ತು ಮಹಿಳೆಯರ ಬಗ್ಗೆ.

೧. …ಏತಕ್ಕಾಗಿ ?

ನಿಮ್ಮ ಬುದ್ಧಿಗೆ ಮುಸುಕು ಹಾಕಿ ಅಯೋಗ್ಯ ಮನುಷ್ಯರ ಮೇಲೆ ಅಂಧವಿಶ್ವಾಸವಿಡುವಂತಹ ಅಸಹಾಯಕತೆ ಯಾವುದಿದೆ ?ನಿಮ್ಮ ವೈಯಕ್ತಿಕ ಜೀವನದಲ್ಲಿ ಅಂತಹ ಯಾವ ಅಸಾಧಾರಣ ದುಃಖಗಳಿವೆ, ಅದಕ್ಕಾಗಿ ನೀವು ನಿರಂತರವಾಗಿ ಪೀಡಿತರಾಗಿ ಆಧಾರಕ್ಕಾಗಿ ಹೆಗಲನ್ನು ಹುಡುಕುತ್ತಿದ್ದೀರಿ ? ಆತ್ಮಗೌರವವನ್ನು ಮಾರಾಟ ಮಾಡಿ ನಿಮಗೆ ಉದ್ಯೋಗ ಮತ್ತು 'ಪ್ರಮೋಷನ್' (ಬಡ್ತಿ) ಬಯಸುವಂತೆ ಮಾಡುವ ಅಸಹಾಯಕತೆ ಯಾವುದಿದೆ ? ಕುಟುಂಬ ವ್ಯವಸ್ಥೆ, ಸಂಸ್ಕಾರ, ಒಳ್ಳೆಯ ಸಾಂಗತ್ಯ ಇವೆಲ್ಲವನ್ನೂ ಕ್ಷಣದಲ್ಲಿ ಬದಿಗೊತ್ತಿ 'ಮುಕ್ತ'ವಾಗುವುದರಲ್ಲಿ ಯುವತಿಯರಿಗೆ ಯಾಕೆ ಧನ್ಯತೆ ಅನಿಸುತ್ತಿದೆ ? ಪ್ರತಿದಿನ ಹೊಸ ಹೊಸ ಸಂಚುಗಳಿಗೆ, ಬೇರೆ ಬೇರೆ ರೀತಿಯ ಮನಪರಿವರ್ತನೆಗೆ ಬಲಿಯಾಗುತ್ತಿರುವಾಗ ನಿಮ್ಮ ಶಿಕ್ಷಣ, ವಿವೇಚನೆ ಮತ್ತು ಸ್ವಾಭಿಮಾನವನ್ನು ಎಲ್ಲಿ ಅಡವಿಡುತ್ತಿದ್ದೀರಿ ? ಹೆಜ್ಜೆ ಹೆಜ್ಜೆಗೂ ಹಾಕಲಾದ ಬಲೆಗಳನ್ನು ನಾವು ಗುರುತಿಸಬೇಕು ಮತ್ತು ಚಾತುರ್ಯದಿಂದ ಅವುಗಳಿಂದ ದೂರವಿರಬೇಕು ಎಂದು ನಿಮಗಿನ್ನೂ ಅನಿಸುತ್ತಿಲ್ಲವೇ ? ಈ ನೇರ ಪ್ರಶ್ನೆ ಎಲ್ಲರನ್ನೂ ಶೀಘ್ರವಾಗಿ ಎಚ್ಚರಿಸಲಿ.

'ಬಡತನ, ಶಿಕ್ಷಣದ ಕೊರತೆ ಮುಂತಾದವು ಸಮಾಜದಲ್ಲಿ ಭಯೋತ್ಪಾದಕರನ್ನು ಸೃಷ್ಟಿಸುತ್ತವೆ, ಮೂಲತಃ ಅವರು ನಿರಪರಾಧಿಗಳೇ ಆಗಿರುತ್ತಾರೆ' ಎಂಬ ಮೂರ್ಖತನದ ನಂಬಿಕೆ ಈಗ ದೂರವಾಗಿದೆ ಮತ್ತು ಅದರ ಮೂಲದಲ್ಲಿರುವ ತೀವ್ರ ಮತಾಂಧತೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಅದೇ ರೀತಿ ಗುರುತನ್ನು ಮರೆಮಾಚಿ ಮಾಡುವ ಸಂಚುಗಳು, ಯುವತಿಯರ ಶೋಷಣೆ, ಮತಾಂತರ ಮತ್ತು ನಂತರದ ಕ್ರೂರ ಹಿಂಸೆ - ಈ ಘಟನಾವಳಿಗಳು ಲವ್ ಜಿಹಾದ್‌ನ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ. ಇದು ವೈಯಕ್ತಿಕ ಸ್ವಾತಂತ್ರ್ಯ ಅಥವಾ ಅಂತರ ಧರ್ಮೀಯ ವಿವಾಹದಂತಹ ಕಾನೂನುಬದ್ಧ ವಿಷಯಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. (ಇಂದಿಗೂ ಕೆಲವು ನಕಲಿ ಜನರು ಈ ಘಟನೆಗಳನ್ನು ಸಾಮಾನ್ಯವೆಂದು ಪರಿಗಣಿಸುತ್ತಿದ್ದಾರೆ, ಅದು ಬೇರೆ ವಿಷಯ). ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ?

ರಕ್ಷಕನೋ ಅಥವಾ ಭಕ್ಷಕನೋ ? ಗುರುತಿಸುವುದು ಹೇಗೆ ?

 ಎ.ಐ. ನಿರ್ಮಿತ ಪ್ರಾತಿನಿಧಿಕ ಚಿತ್ರ

ಮನೆ ಬಾಗಿಲಿಗೆ ಸಾಮಾನು ತರುವ ಯುವಕರು ಅಪಾರ್ಟ್‌ಮೆಂಟ್ ಪ್ರವೇಶಿಸುವಾಗ ಸರಿಯಾಗಿ ನೋಂದಣಿ ಮಾಡುತ್ತಿದ್ದಾರೆಯೇ ? ಅವರು ಸರಿಯಾದ ವಿಳಾಸಕ್ಕೆ ಹೋಗುತ್ತಿದ್ದಾರೆಯೇ ? ಕೆಲಸ ಮುಗಿದ ತಕ್ಷಣ ಹೊರಡುತ್ತಿದ್ದಾರೆಯೇ ಅಥವಾ ಅಲ್ಲಿಯೇ ಸುಳಿದಾಡುತ್ತಾ ಮಾಹಿತಿ ಕಲೆಹಾಕುತ್ತಿದ್ದಾರೆಯೇ ? ಸೊಸೈಟಿಯ ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ಸಂಸ್ಥೆಯು ಯಾವ ರೀತಿಯ ಭದ್ರತಾ ಸಿಬ್ಬಂದಿಯನ್ನು ನೀಡುತ್ತಿದೆ ಎಂಬುದನ್ನು ಗಮನಿಸಬೇಕು. ಏನಾದರೂ ಸಂಶಯ ಬಂದಲ್ಲಿ ಕೂಡಲೇ ಅವರನ್ನು ಕೆಲಸದಿಂದ ತೆಗೆದುಹಾಕಬೇಕು. ದುರಸ್ತಿಗಾಗಿ ಬರುವ ಬಡಗಿಗಳು, ಪ್ಲಂಬರ್, ಎಲೆಕ್ಟ್ರಿಷಿಯನ್ ಅಥವಾ ಚಾಲಕರನ್ನು ಕಳುಹಿಸಿದ ಸಂಸ್ಥೆ ಯಾರನ್ನು ಕಳುಹಿಸಿದೆ ಎಂಬುದನ್ನು ಗಮನಿಸಬೇಕು. ಸಂಶಯಾಸ್ಪದ ವ್ಯಕ್ತಿಗಳನ್ನು ಮನೆಯೊಳಗೆ ಬರಲು ಬಿಡಬಾರದು. ಕೆಲಸದ ವೇಳೆ ಅಸಭ್ಯವಾಗಿ ವರ್ತಿಸಿದರೆ 'ರಿಮಾರ್ಕ್' ಬರೆಯಲು ಮರೆಯಬಾರದು.

- ಮೇಜರ ಸೌ. ಗರ್ಗೆ- ಕುಲಕರ್ಣಿ(ನಿವೃತ್ತ)

೨. ಸಶಕ್ತ ಪ್ರತಿಮೆ

ಯಾವುದಾದರು ವೈಯಕ್ತಿಕ ಸಮಸ್ಯೆಯಲ್ಲಿ ಸಿಲುಕಿರುವ ಯುವತಿಯರು ಶೋಷಣೆಗೆ ಬೇಗ ಬಲಿಯಾಗುತ್ತಿದ್ದಾರೆ. ಹೀಗೇಕೆ ? ಸಂಸ್ಕೃತದಲ್ಲಿ ಒಂದು ಸುಂದರ ಸುಭಾಷಿತವಿದೆ: ಯಾವ ಕಟ್ಟಿಗೆಯಲ್ಲಿ ಬೆಂಕಿ ಅಥವಾ ಕಿಡಿಗಳು ಸ್ಪಷ್ಟವಾಗಿ ಕಾಣುತ್ತವೆಯೋ, ಅದನ್ನು ದಾಟಲು ಯಾರೂ ಧೈರ್ಯ ಮಾಡುವುದಿಲ್ಲ; ಆದರೆ ಎಲ್ಲಿ ಅದು ಮೇಲ್ನೋಟಕ್ಕೆ ಕಾಣದೆ ಒಳಗಿರುತ್ತದೆಯೋ, ಅಂತಹ ಕಟ್ಟಿಗೆಯನ್ನು ಯಾರೂ ಬೇಕಾದರೂ ಸುಲಭವಾಗಿ ದಾಟುವ ಧೈರ್ಯ ತೋರುತ್ತಾರೆ. ವ್ಯಕ್ತಿಯ ಪ್ರತಿಮೆಯು ಜೀವನದಲ್ಲಿ ಅಷ್ಟೇ ಮುಖ್ಯವಾದುದು. ಪ್ರತಿಯೊಬ್ಬ ಹುಡುಗಿಯ ವ್ಯಕ್ತಿತ್ವವು ಕಠೋರವಾಗಿ ಏಕೆ ಇರಬಾರದು ? ಅವಳು ಪ್ರಯತ್ನಪೂರ್ವಕವಾಗಿ ಅದನ್ನು ರೂಪಿಸಿಕೊಳ್ಳಬೇಕು. ತನ್ನ ಆತ್ಮಬಲವನ್ನು ಹೆಚ್ಚಿಸಿಕೊಳ್ಳಬೇಕು. ಕಾಲೇಜು ಇರಲಿ, ಕಚೇರಿ ಇರಲಿ ಅಥವಾ ವ್ಯವಹಾರವಿರಲಿ, ಸಮರ್ಥ ಮತ್ತು ಸಶಕ್ತ ವ್ಯಕ್ತಿತ್ವವು ಸಂಕಟಗಳನ್ನು ತಾನಾಗಿಯೇ ದೂರವಿಡುತ್ತವೆ. ಇದಕ್ಕೆ ವಿರುದ್ಧವಾಗಿ, ತನ್ನ ಸೋಲಿಗಾಗಿ ಸದಾ ಪರಿಸ್ಥಿತಿಯನ್ನು ದೂಷಿಸುವುದು, ಕುಟುಂಬದ ಕಲಹಗಳನ್ನು ಹೊರಗೆ ಹೇಳುವುದು ಮತ್ತು ತನ್ನನ್ನು ತಾನು ದುರ್ಬಲ ಅಥವಾ ಅಸಹಾಯಕ ಎಂದು ಭಾವಿಸಿ ಪರಿಸ್ಥಿತಿಯನ್ನು ಅತಿಶಯೋಕ್ತಿ ಮಾಡುವುದನ್ನು ನಿಲ್ಲಿಸಬೇಕು. ಇಂತಹ ಕಡೆಗಳಿಂದಲೇ ಶೋಷಣೆಗಾಗಿ ಯುವತಿಯರನ್ನು ಮುತ್ತಿಕೊಳ್ಳಲಾಗುತ್ತದೆ. ಎದುರಿಗಿರುವವನು ನಿಮ್ಮ ದೌರ್ಬಲ್ಯದ ಲಾಭ ಪಡೆದು ಹೆಗಲು ನೀಡುತ್ತಾನೆ ಮತ್ತು ನೀವು ಅದರ ಸ್ವಾಗತವನ್ನೇ ಮಾಡುತ್ತೀರಿ !

೩. ನನ್ನ ಸುರಕ್ಷತೆ, ನನ್ನ ಜವಾಬ್ದಾರಿ

'ಮೈ ಲೈಫ್, ಮೈ ಸ್ಪೇಸ್' (ನನ್ನ ಜೀವನ, ನನ್ನ ಮುಕ್ತತೆ) ಎಂದು ಹೇಳುತ್ತೀರಿ, ಹೀಗಿರುವಾಗ ನಿಮ್ಮ ಸ್ವಂತ ಸುರಕ್ಷತೆಯ ಜವಾಬ್ದಾರಿಯನ್ನು ಎಷ್ಟು ತೆಗೆದುಕೊಳ್ಳುತ್ತೀರಿ ? ಸಾಮಾಜಿಕ ಸ್ತರದಲ್ಲಿ ಈ ವಿಷಯವು ಮುಖ್ಯವಾದುದೇ ಆಗಿದೆ; ಆದರೆ ಒಟ್ಟಾರೆ ನಮ್ಮ ಸುರಕ್ಷತೆಗಾಗಿ ನಾವು ಅರಿವಿನಿಂದ ಏನೇನು ಮಾಡುತ್ತೇವೆ ? ಎಷ್ಟು ಜಾಗರೂಕರಾಗಿದ್ದೇವೆ ? ಅಸಂಖ್ಯಾತ ಉದಾಹರಣೆಗಳಿವೆ. ಪರಿಶೀಲಿಸಿ ನೋಡಿ - ಪಾಲಕರಾಗಿ ಶಾಲೆ, ಖಾಸಗಿ ಟ್ಯೂಷನ್ ಅಥವಾ ಇತರ ಅಗತ್ಯ 'ವಾಟ್ಸಆಪ್ ಗ್ರೂಪ್‌ಗಳ' ಹೊರತಾಗಿ ನಾವು ಎಷ್ಟು 'ವಾಟ್ಸಆಪ್ ಗ್ರೂಪ್‌ಗಳ' ಭಾಗವಾಗಿದ್ದೇವೆ ? ಬ್ಯೂಟಿ ಪಾರ್ಲರ್ (ಸೌಂದರ್ಯವರ್ಧನಾಲಯ), ಆಹಾರ ಪದಾರ್ಥಗಳು, ಸೀರೆ ಮತ್ತು ಒಡವೆಗಳ ಖರೀದಿ, ಗೃಹಾಲಂಕಾರ, ಹಚ್ಚೆ ಹಾಕಿಸಿಕೊಳ್ಳುವುದು, ಹವ್ಯಾಸಗಳು, ಸೌಂದರ್ಯವರ್ಧಕಗಳು, ಇತರ ವಾಣಿಜ್ಯ ಗ್ರೂಪ್‌ಗಳು, ಆಸ್ತಿ ಖರೀದಿ-ಮಾರಾಟ, ವ್ಯಾಪಾರಕ್ಕೆ ಸಂಬಂಧಿಸಿದ ಇಂತಹ ಬೇರೆ ಬೇರೆ ಕಾರಣಗಳಿಂದಾಗಿ ಒಬ್ಬೊಬ್ಬ ಮಹಿಳೆಯೂ ಇಂದು ಎಷ್ಟೋ 'ವಾಟ್ಸಆಪ್ ಗ್ರೂಪ್‌ಗಳಲ್ಲಿ' ಸಹಜವಾಗಿ ಸಕ್ರಿಯಳಾಗಿರುತ್ತಾಳೆ, ಇದು ವಾಸ್ತವ ಸಂಗತಿ ! ಆ ಸಮೂಹದಲ್ಲಿನ ಇತರ ಸದಸ್ಯರನ್ನು ನೀವು ಗುರುತಿಸುತ್ತೀರಾ ?

 ಮೇಜರ್ ಸೌ. ಮೋಹಿನಿ ಗರ್ಗೆ-ಕುಲಕರ್ಣಿ (ನಿವೃತ್ತ)

ಆ ಮೂಲಕ ನಿಮ್ಮ ಬಗ್ಗೆ ಮಹತ್ವದ ಮಾಹಿತಿಯು ನಿಮ್ಮ ಅರಿವಿಲ್ಲದೆಯೇ ಎಷ್ಟು ಜನರಿಗೆ ಸುಲಭವಾಗಿ ತಲುಪುತ್ತದೆ. ನೀವು ಯಾರಿಂದಲಾದರೂ ಯಾವುದಾದರೂ ಉತ್ಪನ್ನಗಳು /ಸೇವೆಗಳನ್ನು ಪಡೆದಾಗ ಅವನು ಹೇಳುತ್ತಾನೆ, 'ನಾನು ನಿಮ್ಮನ್ನು 'ವಾಟ್ಸಆಪ್ ಗ್ರೂಪ್'ಗೆ ಸೇರಿಸುತ್ತೇನೆ, ಆಗ ಮುಂದಿನ ಉತ್ಪನ್ನಗಳು ಬಂದಾಗ ನಿಮಗೆ ಅವು ಅಲ್ಲಿ ತಿಳಿಯುತ್ತವೆ'… ಏಕೆ ? 'ನೋಟಿಫಿಕೇಶನ್'ಗಾಗಿ (ವಿವಿಧ ಸೇವೆ ಅಥವಾ ಉತ್ಪನ್ನಗಳ ಬಗ್ಗೆ ಬರುವ ಸೂಚನೆಗಳು) ಕೂಡ ಮೊಬೈಲ್ ಸಂಖ್ಯೆಯನ್ನು ನೀಡಬೇಡಿ. ಕೆಲಸ ಮುಗಿದ ನಂತರ ಆ ಸಂಖ್ಯೆಯನ್ನು ನಾವು ಎಷ್ಟು ಬಾರಿ 'ಬ್ಲಾಕ್' (ತಡೆಯುವ ಸೌಲಭ್ಯ) ಮಾಡುತ್ತೇವೆ ?

೪. ಅಗತ್ಯವಿದ್ದಷ್ಟೇ ಮಾತನಾಡಿ !

ಕೆಲ ದಿನಗಳ ಹಿಂದೆ ದಿನಸಿ ಅಂಗಡಿಯಲ್ಲಿ ಸಾಮಾನುಗಳನ್ನು ಮನೆಗೆ ತಲುಪಿಸುವಂತೆ ಫೋನ್ ಬಂದಾಗ, ಅಂಗಡಿಯವನು ಅದನ್ನು 'ಸ್ಪೀಕರ್'ನಲ್ಲಿಟ್ಟು, 'ಬೇಳೆ ೨ ಕಿಲೋ ನೀಡಲೇ ?' ಎಂದು ಕೇಳಿದಾಗ ಆ ಮಹಿಳೆ, 'ಬೇಡ, ಇಷ್ಟು ದೊಡ್ಡ ಮನೆಯಲ್ಲಿ ನಾವು ಇಬ್ಬರೇ ಇರುವುದು. ಅದರಲ್ಲೂ ನನ್ನ ಪತಿ ಹೆಚ್ಚಾಗಿ ಊರು ಬಿಟ್ಟು ಹೊರಗಿರುತ್ತಾರೆ, ಹೆಚ್ಚು ಸಾಮಾನು ಏನು ಮಾಡಲಿ ? ನೀವು ಒಂದು ಕಿಲೋ ಬರೆಯಿರಿ' ಎಂದರು. ನಾನು ಅಲ್ಲಿಯೇ ಇದ್ದೆ. ಒಂದು ಕಿಲೋ ಅಥವಾ ಎರಡು ? ಇಷ್ಟೇ ಮಾತನಾಡಿ. ಇತರ ಹರಟೆ ಏಕೆ ? ಮನೆ ಬಾಗಿಲಿಗೆ ಬರುವ ಸೌಲಭ್ಯವು ಸುಲಭವೆನಿಸುತ್ತದೆ, ಆದರೆ ಅಷ್ಟೇ ಅಪಾಯವೂ ಹೆಚ್ಚುತ್ತಿದೆ ಎಂಬುದನ್ನು ನೆನಪಿಡಿ.

೫. ಸುರಕ್ಷಿತ ವಲಯ (ಕಂಫರ್ಟ್ ಝೋನ್)

'ನಾನು 'ಸಾಫ್ಟವೇರ್ ಇಂಜಿನಿಯರ್' (ಗಣಕಯಂತ್ರ ಪ್ರಣಾಲಿಯ ಅಭಿಯಂತ) ಆಗಿದ್ದೇನೆ, ನಾನು 'ಮ್ಯಾನೇಜ್‌ಮೆಂಟ್' (ವ್ಯವಸ್ಥಾಪನ) ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ… ನನ್ನ ಹಾಗೂ ಇತರ ಸಾಮಾಜಿಕ ಸಮಸ್ಯೆಗಳಿಗೂ ಏನು ಸಂಬಂಧ ? eveಡಿಥಿಣhiಟಿg is ಠಿoಟiಣiಛಿs ಥಿಚಿಚಿಡಿ ಎಲ್ಲವೂ ರಾಜಕಾರಣ ಗೆಳೆಯ, ನಾನು ದೂರವಿರಬೇಕು…', ಎಂದು ಹೇಳುತ್ತಾ ಅನೇಕ ಸುಶಿಕ್ಷಿತ ಮಹಿಳೆಯರು ಮತದಾನ ಮಾಡುವ ತೊಂದರೆಯನ್ನೂ (ಶ್ರಮ) ತೆಗೆದುಕೊಳ್ಳುವುದಿಲ್ಲ. ಇಂತಹ ಗೋಡೆಗಳನ್ನು ನಿರ್ಮಿಸಿಕೊಳ್ಳುವ ಮಹಿಳೆಯರು ಸುತ್ತಮುತ್ತಲೂ ಸರ್ವೇಸಾಮಾನ್ಯವಾಗಿ ಕಂಡು ಬರುತ್ತಾರೆ. ಉದ್ಯೋಗ, ವಾರಾಂತ್ಯದ ರಜೆಯ ಜೀವನ, ಖರೀದಿ ಇತ್ಯಾದಿಗಳ ಚೌಕಟ್ಟಿನ ಸುರಕ್ಷಿತ ವಲಯ (ಸೇಫ್ ಜೋನ್) ಯಾವಾಗ ಸೃಷ್ಟಿಯಾಗುತ್ತದೆ ಎಂಬುದು ಅವರ ಅರಿವಿಗೂ ಬರುವುದಿಲ್ಲ ! ನೀವು ಯಾವ ರಾಷ್ಟ್ರದ ನಾಗರಿಕರಾಗಿದ್ದೀರೋ, ಯಾವ ಸಮಾಜದಲ್ಲಿ ವಾಸಿಸುತ್ತಿದ್ದೀರೋ, ಅದರ ಬಗ್ಗೆ ಇಷ್ಟೊಂದು ಉದಾಸೀನತೆ ಏತಕ್ಕಾಗಿ ? 'ವೃತ್ತಿ-ಜೀವನದ ಸಮತೋಲನ'ದ (ವರ್ಕ್ ಲೈಫ್ ಬ್ಯಾಲೆನ್ಸ್) ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿರುತ್ತವೆ; ಆದರೆ ಅದರಲ್ಲಿನ ಜೀವನದ ಪರಿಧಿ ಎಷ್ಟು ದೊಡ್ಡದಿದೆ ಎಂಬುದು ನಮಗೆ ತಿಳಿಯಬೇಕಲ್ಲವೇ ? ಸಮಾಜಕಾರಣ, ಧರ್ಮಕಾರಣ, ಅರ್ಥಕಾರಣ, ರಾಜಕಾರಣ ಇವೆಲ್ಲವೂ ನನಗೆ ತಿಳಿಯುವುದು ಅತಿ ಅವಶ್ಯಕವಾಗಿದೆ ಎಂಬ ಅರಿವು ಯಾವಾಗ ಮೂಡಲಿದೆ ? ಅದಕ್ಕಾಗಿ ಮನಸ್ಸಿನ ಬಾಗಿಲುಗಳನ್ನು ಯಾವಾಗ ತೆರೆಯುವೆ ಯುವತಿ !

೬. ವಿಘಟನೆಯೋ ಅಥವಾ ಸಂಘಟನೆಯೋ ?

ಕಳೆದ ತಿಂಗಳು ಮಹಾರಾಷ್ಟ್ರದ ಬೀಡ್‌ನಲ್ಲಿ ಒಂದು ಭಯಂಕರ ಘಟನೆ ನಡೆಯಿತು. ಅಕಸ್ಮಾತ್ತಾಗಿ ಗಾಡಿ ಸ್ವಲ್ಪ ತಗುಲಿತು ಎಂಬ ಕಾರಣಕ್ಕೆ ಒಬ್ಬ ನಿವೃತ್ತ ಸೈನಿಕನ ಮೇಲೆ ಮಾರಣಾಂತಿಕ ದಾಳಿ ನಡೆಯಿತು. ಕೆಲವೇ ನಿಮಿಷಗಳಲ್ಲಿ ರಹೀಂ ಶೇಕ್ ಎಂಬ ಗೂಂಡಾ ದೊಡ್ಡ ಗುಂಪನ್ನು ಜಮಾಯಿಸಿ ಆ ಸೈನಿಕನಿಗೆ ವಿಪರೀತ ಹೊಡೆದುದ್ದಲ್ಲದೆ, ಅವನ ಮೈಮೇಲೆ ಕುದಿಯುವ ಚಹಾವನ್ನು ಸುರಿದನು. ಇನ್ನೂ ಕೂಡ ವೇದನೆಯಿಂದ ಚೀರುತ್ತಿರುವ ಆ ಸೈನಿಕನ ಧ್ವನಿಯನ್ನು ಕೇಳಲು ಸಾಧ್ಯವಾಗುತ್ತಿಲ್ಲ. ಯಾವ ಸೈನಿಕನ ದೆಸೆಯಿಂದ ಇಲ್ಲಿ ಸುರಕ್ಷಿತವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆಯೋ, ಅಂತಹವನ ಪ್ರಾಣಕ್ಕೇ ಸಂಚು ತರುತ್ತಿದ್ದೀರಾ ? ಇಂತಹ ಯಾವುದೇ ಗುಂಪು ದಾಳಿ ಮಾಡಿ ಬಂದಾಗ, ವಿಘಟನೆಯನ್ನು ಹರಡುವ ಜಾತಿ-ಜಾತಿಗಳ ಗುಂಪುಗಳು ನಿಮ್ಮನ್ನು ರಕ್ಷಿಸುತ್ತವೆಯೇ ? ಅಥವಾ ಇಡೀ ಸಮಾಜವು ಒಟ್ಟಾಗಿ ಸೇರಿ ಈ ಆಕ್ರಮಣವನ್ನು ತಡೆಯುತ್ತೇವೆಯೇ ಎಂಬ ವಿಚಾರವನ್ನು ಗಂಭೀರವಾಗಿ ಮಾಡಬೇಕಿದೆ.

೭. ಸುಸಂವಾದದ ಸೇತುವೆ

ಪಾಲಕರು ಮತ್ತು ಮಕ್ಕಳ ನಡುವಿನ ಸಂವಾದವು ಉತ್ತಮವಾಗಿರಲೇಬೇಕು. ಅದರಲ್ಲೂ ತಾಯಿಯ ಪಾತ್ರವು ಬಹುಮುಖ್ಯವಾದುದು. ಪಾಲಕರೊಂದಿಗೆ ಮಾತನಾಡುವಾಗ ಒಂದು ವಿಷಯವು ಅರಿವಿಗೆ ಬರುತ್ತದೆ, ಅದೇನೆಂದರೆ 'ಧರ್ಮ, ಧರ್ಮಗಳ ನಡುವಿನ ವಿವಾದಗಳು ಇವೆಲ್ಲವನ್ನೂ ಮಕ್ಕಳಿಗೆ ಏಕೆ ಹೇಳಬೇಕು ? ಅವರೂ ಇನ್ನು ಚಿಕ್ಕವರು ! ಮುಂದೆ ಅವರು ಭಾರತದಲ್ಲಿ ಇರುತ್ತಾರೋ ಇಲ್ಲವೋ ಎಂಬುದು ಕೂಡ ತಿಳಿದಿಲ್ಲ !' ಎಂದು. ಸಣ್ಣ ವಯಸ್ಸಿನ ಗಂಡು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಇಂತಹ ಭಯಂಕರ ಅಪರಾಧಗಳು, ಅವರ ಶೋಷಣೆ ಆಗುತ್ತಿದ್ದರೂ ನಾವು ನಮ್ಮ ಮಕ್ಕಳನ್ನು ಮಾತ್ರ 'ಗುಲಾಬಿ ಭ್ರಮೆಯ ಲೋಕದಲ್ಲಿ' ಬೆಳೆಸುತ್ತಿರುವುದು ಎಂತಹ ದೊಡ್ಡ ತಪ್ಪು ಮತ್ತು ಈ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿವೆಯೇ ?

ಇಲ್ಲಿರುವ ಧರ್ಮಗಳ ಮುಖ್ಯ ಬೋಧನೆ, ಅವುಗಳ ಉಗಮ, ಇಲ್ಲಿಯವರೆಗಿನ ಇತಿಹಾಸ, ಆ ಧರ್ಮಗಳ ಮೌಲ್ಯಗಳು, ತುಲನಾತ್ಮಕ ವಿಷಯಗಳು, ಈಗಿನ ಸವಾಲುಗಳು… ಇವೆಲ್ಲವನ್ನೂ ಮುಕ್ತವಾಗಿ ಮಕ್ಕಳಿಗೆ ಕಲಿಸಬೇಕಲ್ಲವೇ ? ಯಾವುದೋ ಒಂದು ವಿಷಯವು ಮೇಲ್ನೋಟಕ್ಕೆ ಕಾಣುವ ಅಪರಾಧವೋ ಅಥವಾ ಅದು ಯಾವುದೋ ಒಂದು ಧರ್ಮದ ಮೂಲ ಬೋಧನೆ ಮತ್ತು ಅದರ ಅವಿಭಾಜ್ಯ ಅಂಗವೋ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿಯಬೇಕಲ್ಲವೇ ? ಅಥವಾ ಭಯೋತ್ಪಾದಕರ ವಿರುದ್ಧ ಹೋರಾಡಲು ಕೇವಲ ಸೈನಿಕರೇ ಮರಣ ಹೊಂದಬೇಕೇ ? ನಕ್ಸಲವಾದವನ್ನು ಮಟ್ಟ ಹಾಕುವಾಗ ಪೊಲೀಸರೇ ಪ್ರಾಣವನ್ನು ಪಣಕ್ಕಿಡಬೇಕೇ ? ನಾಗರಿಕ ಮತ್ತು ಪಾಲಕನಾಗಿ ನನ್ನ ಜವಾಬ್ದಾರಿ ಏನು ? ವಿಚಾರ ಮಾಡಿ. ಮನೆಯಿಂದ ಹೊರಬಂದ ಮೇಲೆ ಮಕ್ಕಳು ಯಾವುದೇ ರೀತಿಯ ಮನಃಪರಿವರ್ತನೆಗೆ ಸಿಲುಕದಂತೆ ಇರಲು, ನಮ್ಮ ಸಂವಾದದ ಸೇತುವೆಯು ಅಷ್ಟು ಗಟ್ಟಿಯಾಗಿದೆಯೇ ? ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ.

೮. 'ಹೋರಾಟವನ್ನು ತಪ್ಪಿಸುವುದು', ಇದೇ ಅದನ್ನು ಗೆಲ್ಲುವ ಅತ್ಯುತ್ತಮ ಮಾರ್ಗ !

'ದೌರ್ಬಲ್ಯವನ್ನು ಕೆಡವಿ ಹಾಕಬೇಕು. ಆತ್ಮವಿಶ್ವಾಸ, ಧೈರ್ಯ, ಚಾತುರ್ಯ, ಮುಖ್ಯವಾಗಿ ನಿರ್ಣಯ ಸಾಮರ್ಥ್ಯ ಮುಂತಾದ ಬಹಳಷ್ಟು ನಾಯಕತ್ವದ ಗುಣಗಳನ್ನು ನಾನು ಬೆಳೆಸಿಕೊಳ್ಳಬೇಕು', ಎಂದು ನಿಶ್ಚಯಿಸೋಣ. ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ - ಜೀವನದ ಈ ಎಲ್ಲಾ ಸ್ತರಗಳಲ್ಲಿ ನಾನು ಸಶಕ್ತಳಾಗಲೇಬೇಕು. ಸಮರ್ಥ ಮತ್ತು ವಿವೇಕಿ ಸ್ತ್ರೀಯು ಕಾಲದ ಅವಶ್ಯಕತೆಯಾಗಿದ್ದಾಳೆ.

'ಪಿತಾಪುತ್ರಭ್ರಾತೃಂಶ್ಚ ಭರ್ತಾರಮೇವಂ ಸುಮಾಗಂ ಪ್ರತಿ ಪ್ರೇರಯಂತೀಮಿಹ', ಅಂದರೆ 'ಸಮಯ ಬಂದಾಗ ತನ್ನ ತಂದೆ, ಪುತ್ರ, ಸಹೋದರ, ಪತಿ ಇವರೆಲ್ಲರಿಗೂ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವವಳು ಭಾರತೀಯ ಸ್ತ್ರೀ !' ಅಂದಮೇಲೆ ಅವಳೇ ದಾರಿ ತಪ್ಪಿದರೆ ಹೇಗೆ ?

ಸಾಹಸ ಕ್ರೀಡೆಗಳಿರಲಿ ಅಥವಾ ತಂತ್ರಜ್ಞಾನವಿರಲಿ, ಭಾರತೀಯ ಹೆಣ್ಣುಮಕ್ಕಳು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಒಂದೊಂದು ಶಿಖರವನ್ನು ಏರುತ್ತಿದ್ದಾರೆ. ಯುವತಿಯರೇ, ಶಿಕ್ಷಣ ಪಡೆಯಿರಿ, ಕನಸುಗಳನ್ನು ಕಾಣಿರಿ, ಅಪಾರ ಶ್ರಮವಹಿಸಿ ನಿಮ್ಮ ಗುರಿಯನ್ನು ಸಾಧಿಸಿ; ಆದರೆ ವೈಯಕ್ತಿಕ ಜೀವನದಲ್ಲಿಯೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಮೋಹಕ್ಕೆ ಒಳಗಾಗಬೇಡಿ. ಇಲ್ಲದಿದ್ದರೆ ನೀವು ಗಳಿಸಿದ ಯಶಸ್ಸು, ಜೀವಕ್ಕೆ ಜೀವ ನೀಡುವ ಕುಟುಂಬ ಮತ್ತು ಸ್ವಾತಂತ್ರ್ಯ ಎಲ್ಲವನ್ನೂ ಕಳೆದುಕೊಳ್ಳಬೇಕಾದೀತು. ಅದಕ್ಕಾಗಿ ಅವಿವೇಕದ ಮುಸುಕನ್ನು ತೆಗೆದು ತಲೆಯಲ್ಲಿ ವಿವೇಕದ ಪ್ರಕಾಶವು ಮೂಡಲಿ ! ಆತ್ಮಜ್ಞಾನವನ್ನು ಜಾಗೃತಗೊಳಿಸಿ. ಈ ಕ್ರೂರ ರಕ್ತಬೀಜಾಸುರನನ್ನು (ಜಿಹಾದ್‌ನ ರಾಕ್ಷಸ) ಅಂತ್ಯಗೊಳಿಸಲು ನಮ್ಮನ್ನು ನಾವು ಸಮರ್ಥರನ್ನಾಗಿ ಮಾಡಿಕೊಳ್ಳಲೇಬೇಕು !

- ಮೇಜರ್ ಸೌ. ಮೋಹಿನಿ ಗರ್ಗೆ-ಕುಲಕರ್ಣಿ (ನಿವೃತ್ತ), ಠಾಣೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada