Dailyhunt Logo
  • Light mode
    Follow system
    Dark mode
    • Play Story
    • App Story
ಬಾಂಗ್ಲಾದೇಶ: ಭಾರತದ ತಪ್ಪಾದ ನಕ್ಷೆ ಪ್ರದರ್ಶನ!

ಬಾಂಗ್ಲಾದೇಶ: ಭಾರತದ ತಪ್ಪಾದ ನಕ್ಷೆ ಪ್ರದರ್ಶನ!

ಭಾರತೀಯ ರಾಜತಾಂತ್ರಿಕ ಅಧಿಕಾರಿ ತಪ್ಪು ತೋರಿಸಿದ ನಂತರ ಬಾಂಗ್ಲಾದೇಶ ಸ್ಪಷ್ಟನೆ

ಢಾಕಾ (ಬಾಂಗ್ಲಾದೇಶ) - ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾರತದ ತಪ್ಪು ನಕ್ಷೆಯನ್ನು ಪ್ರದರ್ಶಿಸಲಾಯಿತು. ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಈ ನಕ್ಷೆಯಲ್ಲಿ ತೋರಿಸಲಾಗಿತ್ತು.

ಆದರೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಕ್ಷಣ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸ್ಥಳದಲ್ಲೇ ಸ್ಪಷ್ಟಪಡಿಸಿದರು.

ಢಾಕಾದಲ್ಲಿ 'ಬಾಂಗ್ಲಾದೇಶ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಅಂಡ್ ಸ್ಟ್ರಾಟೆಜಿಕ್ ಸ್ಟಡೀಸ್' ವತಿಯಿಂದ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಭಾರತೀಯ ಹೈಕಮಿಷನ್‌ನ ದ್ವಿತೀಯ ಕಾರ್ಯದರ್ಶಿ ಪೂಜಾ ಕುಮಾರಿ ಝಾ ಅವರೂ ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಬಾಂಗ್ಲಾದೇಶದ ಮಾಜಿ ರಾಜತಾಂತ್ರಿಕ ಅಧಿಕಾರಿ ತಾರಿಕ್ ಎ. ಕರೀಮ್ ಅವರು ಒಂದು ನಕ್ಷೆಯನ್ನು ಪ್ರದರ್ಶಿಸಿದರು. ಈ ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ಬಿಂಬಿಸಲಾಗಿತ್ತು. ಇದಕ್ಕೆ ಪೂಜಾ ಕುಮಾರಿ ಝಾ ಅವರು ತಕ್ಷಣ ಆಕ್ಷೇಪ ವ್ಯಕ್ತಪಡಿಸಿದರು. "ಇಲ್ಲಿ ಪ್ರದರ್ಶಿಸಲಾಗಿರುವ ಭಾರತದ ನಕ್ಷೆ ತಪ್ಪಾಗಿದೆ. ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದೆ. ವಾಸ್ತವದಲ್ಲಿ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ತೋರಿಸಲಾದ ನಕ್ಷೆಯು ಸಂಪೂರ್ಣವಾಗಿ ತಪ್ಪು" ಎಂದು ಅವರು ಹೇಳಿದರು.

ಬಾಂಗ್ಲಾದೇಶ ನೀಡಿದ ಸ್ಪಷ್ಟನೆ

ಭಾರತೀಯ ರಾಜತಾಂತ್ರಿಕ ಅಧಿಕಾರಿಯ ತೀವ್ರ ಆಕ್ಷೇಪದ ನಂತರ ತಾರಿಕ್ ಎ. ಕರೀಮ್ ಅವರು ಸ್ಪಷ್ಟನೆ ನೀಡುತ್ತಾ, "ಈ ನಕ್ಷೆಯನ್ನು ಕೇವಲ ಸಾಂಕೇತಿಕ ಉದ್ದೇಶಕ್ಕಾಗಿ ಬಳಸಲಾಗಿದೆ ಮತ್ತು ನಕ್ಷೆಯಲ್ಲಿ ತೋರಿಸಿರುವ ಗಡಿ ಭಾಗಗಳು ವಾಸ್ತವಿಕವಲ್ಲ" ಎಂದು ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada