Dailyhunt Logo
  • Light mode
    Follow system
    Dark mode
    • Play Story
    • App Story
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !

ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !

ಢಾಕಾ (ಬಾಂಗ್ಲಾದೇಶ) - ಬಂಗಾಳದ ಬಾಂಗ್ಲಾದೇಶದ ಗಡಿಯಲ್ಲಿರುವ ಜಯಂತಿಪುರ ಚೌಕಿಯಿಂದ ಗಡಿ ಭದ್ರತಾ ಪಡೆಯು 10 ರಿಂದ 12 ಜನ ನುಸುಳುಕೋರ ಬಾಂಗ್ಲಾದೇಶಿಯರನ್ನು ಗಡಿಯಾಚೆಗೆ ತಳ್ಳಲಾಗಿತ್ತು; ಆದರೆ ವಿರೋಧದ ಕಾರಣದಿಂದಾಗಿ ಅವರನ್ನು ಹಿಂತಿರುಗಿಸಬೇಕಾಗಿ ಬಂದಿದೆ. ಈ ಘಟನೆಯ ಒಂದು ದಿನದ ನಂತರ 'ಬಾರ್ಡರ್ ಗಾರ್ಡ್ ಬಾಂಗ್ಲಾದೇಶ'ದ ('ಬಿಜಿಬಿ'ಯ) ವಿರೋಧದಿಂದಾಗಿ ಭಾರತೀಯ ಅರೆಸೇನಾ ಪಡೆಯ ಸ್ಥಳೀಯ ತುಕಡಿಯು ಆ ಜನರನ್ನು ಹಿಂತಿರುಗಿಸಬೇಕಾಗಿ ಬಂದಿದೆ.

ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ ಪ್ರಕಾರ, 7 ಮೇ 2025 ರಿಂದ 26 ಜನವರಿ 2026 ರವರೆಗೆ, ಅಂದರೆ 8 ತಿಂಗಳುಗಳಲ್ಲಿ ಭಾರತದಿಂದ 2 ಸಾವಿರದ 479 ಬಾಂಗ್ಲಾದೇಶಿ ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. ಇವರಲ್ಲಿ ಕನಿಷ್ಠ 120 ಜನರ ಗುರುತು ನಂತರ ಭಾರತೀಯ ನಾಗರಿಕರು ಎಂದು ತಿಳಿದುಬಂದಿದೆ, ಇನ್ನು ಕೆಲವರು ರೋಹಿಂಗ್ಯಾ ನಿರಾಶ್ರಿತರಾಗಿದ್ದರು. ಬಾಂಗ್ಲಾದೇಶವು ಇಂತಹ ಘಟನೆಗಳನ್ನು ತೀವ್ರವಾಗಿ ಖಂಡಿಸಿದೆ.

ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಉಬೈದ್ ಅವರು ಇತ್ತೀಚೆಗೆ, ನಾವು ಯಾವುದೇ ಪರಿಸ್ಥಿತಿಯಲ್ಲೂ ಜನರನ್ನು ಈ ರೀತಿ ಗಡಿಯಾಚೆಗೆ ತಳ್ಳುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಬಾಂಗ್ಲಾದೇಶ ಮತ್ತು ಭಾರತದ ನಡುವೆ ಮಹಾನಿರ್ದೇಶಕರ ಮಟ್ಟದ ಮಾತುಕತೆ

ಜೂನ್ 8 ರಿಂದ 11 ರ ಅವಧಿಯಲ್ಲಿ ನವದೆಹಲಿಯಲ್ಲಿ ಬಿಜಿಬಿ ಮತ್ತು ಗಡಿ ಭದ್ರತಾ ಪಡೆಯ ನಡುವೆ ಮಹಾನಿರ್ದೇಶಕರ ಮಟ್ಟದ ಸಭೆ ನಡೆಯಲಿದೆ. ಬಾಂಗ್ಲಾದೇಶದಲ್ಲಿ ಹೊಸ ಸರಕಾರ ಬಂದ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಈ ಸಭೆಯಲ್ಲಿ ಬಾಂಗ್ಲಾದೇಶದ ಕಡೆಯಿಂದ ಗಡಿಯಾಚೆಗೆ ತಳ್ಳಲ್ಪಡುತ್ತಿರುವ ಬಾಂಗ್ಲಾದೇಶಿಯರ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada