Dailyhunt Logo
  • Light mode
    Follow system
    Dark mode
    • Play Story
    • App Story
'ಬಡವರು, ದಲಿತರು, ಅಲ್ಪಸಂಖ್ಯಾತರ ಪರ ಮಾತನಾಡುವುದು ಸೈದ್ಧಾಂತಿಕ ನಕ್ಸಲಿಸಂ ಅಲ್ವಂತೆ !' - Sam Pitroda

'ಬಡವರು, ದಲಿತರು, ಅಲ್ಪಸಂಖ್ಯಾತರ ಪರ ಮಾತನಾಡುವುದು ಸೈದ್ಧಾಂತಿಕ ನಕ್ಸಲಿಸಂ ಅಲ್ವಂತೆ !' - Sam Pitroda

'ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್' ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರಿಂದ ಪ್ರಧಾನಿ ಮೋದಿಯವರ ಹೇಳಿಕೆಗೆ ಟೀಕೆ

ಶಿಕಾಗೋ (ಅಮೆರಿಕ) - ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಪರವಾಗಿ ಮಾತನಾಡುವುದು ನಕ್ಸಲಿಸಂ ಅಥವಾ ಕಮ್ಯುನಿಸಂ ಅಲ್ಲ ಎಂದು 'ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್' ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ 'ಮಾನಸಿಕ ನಕ್ಸಲಿಸಂ' ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದರು.

ನ್ಯೂಯಾರ್ಕ್‌ನಲ್ಲಿ ಪ. ಪೂ. ಸರಸಂಘಚಾಲಕ ಡಾ. ಮೋಹನ್‌ಜೀ ಭಾಗವತ್ ಅವರ 'ಮುಸ್ಲಿಮರನ್ನು ದೇಶದಿಂದ ಹೊರಹಾಕುವವನು ಹಿಂದೂ ಆಗಿರಲು ಸಾಧ್ಯವಿಲ್ಲ' ಎಂಬ ಹೇಳಿಕೆಯನ್ನು ಟೀಕಿಸಿದ ಪಿತ್ರೋಡಾ, ಭಾರತದಲ್ಲಿನ ವಿವಿಧ ಧರ್ಮಗಳ ಜನರಿಗೆ ಇಂದು ದೇಶದಲ್ಲಿ ಅವರಿಗೆ ಹೇಗನಿಸುತ್ತಿದೆ ಎಂದು ನೇರವಾಗಿ ಕೇಳಬೇಕು.

'ಭಾರತದಲ್ಲಿ ಎಲ್ಲರನ್ನೂ ಗೌರವಿಸಲಾಗುತ್ತದೆ' ಎಂದು ಹೇಳುವುದು ಸಾಕಾಗುವುದಿಲ್ಲ. ವಾಸ್ತವವು ಬೇರೆಯೇ ಆಗಿದ್ದರೆ, ಅದು ಮಾತು ಮತ್ತು ಕೃತಿಯ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿಯ ಬಗ್ಗೆ ಏನು ಹೇಳಲಾಗುತ್ತದೆ ಎನ್ನುವುದಕ್ಕಿಂತ ಅವರೊಂದಿಗೆ ಹೇಗೆ ವರ್ತಿಸಲಾಗುತ್ತದೆ ಎಂಬುದು ಹೆಚ್ಚು ಮುಖ್ಯ. ನೈಜ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಜನರ ಅನುಭವಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada