ದೂರು ನೀಡಿದರೂ ಕ್ರಮ ಕೈಗೊಳ್ಳದ ಕಾರಣಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ!
ಬಾಗಪತ (ಉತ್ತರ ಪ್ರದೇಶ) - ಬಡೌತ ನಗರದ ಕಮಲಾನಗರ ಪ್ರದೇಶದಲ್ಲಿ ಮಸೀದಿಯೊಂದರ ಅಕ್ರಮ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂಗಳು ಆಗಸ್ಟ ೨೭ ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಅವರು ಈ ಮಸೀದಿಯ ನಿರ್ಮಾಣವನ್ನು ತೆರವುಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರು ಈ ಹಿಂದೆ ಕೂಡ ಇದರ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು; ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದರು. (ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರಕಾರ ಇರುವಾಗ ದೂರು ನೀಡಿದರೂ ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಆಶ್ಚರ್ಯಕರವೆಂದು ಹೇಳಬೇಕಾಗುವುದು! - ಸಂಪಾದಕರು)
ಅಭಿವೃದ್ಧಿ ಪ್ರಾಧಿಕಾರದಿಂದ ಈ ಮಸೀದಿಗೆ ನೋಟಿಸು ಅಂಟಿಸಿ, ಸಂಸ್ಥೆಯ ನಿರ್ವಾಹಕರಿಗೆ ಕಟ್ಟಡದ ಮಂಜೂರಾದ ನಕ್ಷೆ ಮತ್ತು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು; ಆದರೆ ಮಸೀದಿ ಸಂಸ್ಥೆಯ ನಿರ್ವಾಹಕರಿಂದ ನಿಗದಿತ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸಲಾಗಲಿಲ್ಲ. ತದನಂತರ ಹಿಂದೂಗಳು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿದರು.
ಕಮಲಾನಗರದಲ್ಲಿರುವ ಮಸೀದಿಯ ಕಟ್ಟಡವನ್ನು ನಿಯಮಗಳಿಗೆ ವಿರುದ್ಧವಾಗಿ ಮತ್ತು ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆಡಳಿತಾಧಿಕಾರಿಗಳು ಪ್ರಕರಣದ ತನಿಖೆಯ ಭರವಸೆ ನೀಡಿದ್ದಾರೆ. ತನಿಖೆಯ ನಂತರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

