ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜಶಾಲೆಯು ವಾಗ್ದೇವಿಯ (ಸರಸ್ವತಿ) ಮಂದಿರವಾಗಿದೆ ಎಂದು ಇಂದೋರ್ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ಅತ್ಯಂತ ಸ್ಪಷ್ಟವಾಗಿದೆ. ರಾಜ ಭೋಜನು ನಿರ್ಮಿಸಿದ ಈ ಮಂದಿರದ ಕಲ್ಲನ್ನು ಮುಟ್ಟಿ ನೋಡಿದರೆ, ಕಣ್ಣಿಲ್ಲದ ವ್ಯಕ್ತಿಯೂ ಸಹ ಇದು ಮಂದಿರವೆಂದೇ ಹೇಳಬಹುದು; ಅಷ್ಟರಮಟ್ಟಿಗೆ ಎಲ್ಲವೂ ಸ್ಪಷ್ಟವಾಗಿದೆ; ಆದರೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಇದನ್ನೂ ಸಹ ಸಾಬೀತುಪಡಿಸಬೇಕಾಗಿ ಬಂದಿತು.
ಪ್ರಜಾಪ್ರಭುತ್ವದ ಈ ಹೋರಾಟದಲ್ಲೂ ವಾಗ್ದೇವಿಯ ಭಕ್ತರು ಜಯಗಳಿಸಿದ್ದಾರೆ. ಸ್ವತಃ ವಸಂತಪಂಚಮಿಯ ದಿನದಂದೂ ಇಡೀ ದಿನ ಪೂಜೆ ಮಾಡುವ ಹಕ್ಕಿಗಾಗಿ ಹಿಂದೂಗಳು ರಸ್ತೆಯಿಂದ ನ್ಯಾಯಾಲಯದವರೆಗೆ ಹೋರಾಡಬೇಕಾಯಿತು, ಆದರೆ ಅಲ್ಲಿ ನಮಾಜ್ ಸರಕಾರಿ ಭದ್ರತೆಯಲ್ಲಿ ನಡೆಯುತ್ತಿತ್ತು. ಹಿಂದುಸ್ತಾನದಲ್ಲಿ ಹಿಂದೂಗಳಿಗಿದ್ದ ಈ ದಯನೀಯ ಸ್ಥಿತಿಯನ್ನು ಮಾತಾ ಶಾರದಾಂಬೆಯು ನೋಡಿರಲೇಬೇಕು; ಅದಕ್ಕಾಗಿಯೇ ಅಲ್ಲಿನ ಪ್ರತಿಯೊಂದು ಶಿಲೆಯೂ ಸರಸ್ವತಿ ದೇವಿಯ ಅಸ್ತಿತ್ವಕ್ಕೆ ಸಾಕ್ಷ್ಯಾಧಾರಗಳ ಮಹಾಪೂರವನ್ನೇ ಮುನ್ನೆಲೆಗೆ ತಂದಿದೆ. ಈ ನ್ಯಾಯಾಲಯದ ವಿಜಯವು ಶಾಂತಿಯುತವಾಗಿ ಪೂಜೆಗಾಗಿ ಹೋರಾಡಿದ ಹಿಂದೂಗಳಿಂದ ಹಿಡಿದು, ಆಂದೋಲನಕಾರರು ಮತ್ತು ನ್ಯಾಯಾಲಯದಲ್ಲಿ ಹೋರಾಡಿದ ವಕೀಲರಿಗೆ ಸಲ್ಲುತ್ತದೆ. ಇದರ ಶ್ರೇಯಸ್ಸು ಬೇರೆ ಯಾರಿಗೂ ಇಲ್ಲ! ರಾಜಕೀಯ ಇಚ್ಛಾಶಕ್ತಿಯಿಂದ ಇದು ಮೊದಲೇ ಸಾಧ್ಯವಾಗಬಹುದಿತ್ತು; ಆದರೆ ಇಂದು ಇದು ಧರ್ಮನಿಷ್ಠ ಹಿಂದೂಗಳ ಹೋರಾಟದಿಂದಾಗಿ ಸಾಧ್ಯವಾಗಿದೆ. ವಾಗ್ದೇವಿಯ ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪಿಸುವವರೆಗೂ ಈ ಹೋರಾಟ ಮುಂದುವರಿಯಲಿದೆ.

ಹಿಂದೂಗಳು ಶ್ರೀರಾಮ ಮಂದಿರಕ್ಕಾಗಿ 500 ವರ್ಷಗಳ ಕಾಲ ಹೋರಾಡಿದರು, ಭೋಜಶಾಲೆಗಾಗಿ 100 ವರ್ಷಗಳನ್ನು ನೀಡಿದರು, ಆದರೂ ಇನ್ನೂ ಕಾಶಿ-ಮಥುರಾ ಮುಕ್ತವಾಗುವುದು ಬಾಕಿ ಉಳಿದಿದೆ. ವಾಸ್ತವವಾಗಿ, ಇಷ್ಟು ವರ್ಷಗಳ ಕಾಲ ಭೋಜಶಾಲೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಸೀಮಿತ ಹಕ್ಕುಗಳು ಸಿಗುವುದು ಮತ್ತು ನಮಾಜ್ ನಡೆಯುತ್ತಿರುವುದು ಸ್ವತಂತ್ರ ಭಾರತದಲ್ಲಿ ಹಿಂದೂಗಳ ನಂಬಿಕೆಗೆ ಉಂಟಾದ ಅಪಮಾನವಾಗಿದೆ. ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ನಿಯಂತ್ರಣ ಸಾಧಿಸಲು ಮತಾಂಧರಿಗೆ ಯಾವುದೇ ಭಯವಿಲ್ಲ, ಇದಕ್ಕೆ ಇಲ್ಲಿನ ವ್ಯವಸ್ಥೆಯೇ ಕಾರಣವಾಗಿದೆ. ಇಂದಿಗಾದರೂ ವ್ಯವಸ್ಥೆಯ ಜಡತ್ವವು ದೂರವಾಗಲಿ ಮತ್ತು ಹಿಂದೂಗಳ ನಂಬಿಕೆಗಳ ಬಗ್ಗೆ ಸುಳ್ಳು ದಾವೆಗಳನ್ನು ಮಂಡಿಸುವವರಿಗೆ ಶಿಕ್ಷೆಯಾಗಲಿ ಹಾಗೂ ಅವರನ್ನು ಓಲೈಸುವವರಿಗೆ ದಂಡ ವಿಧಿಸುವ ಬುದ್ಧಿ ಬರಲಿ ಎಂದು ಮಾತಾ ವಾಗ್ದೇವಿಯ ಚರಣಗಳಲ್ಲಿ ಪ್ರಾರ್ಥನೆ!

