ಬಂಗಾಲ ಸರಕಾರಕ್ಕೆ ಸವಾಲು ಹಾಕಿದ ಶಾಸಕ ಹುಮಾಯೂ ಕಬೀರ
ಮುರ್ಶಿದಾಬಾದ (ಬಂಗಾಲ) - ಬಂಗಾಲದಲ್ಲಿನ ಭಾಜಪ ಸರಕಾರವು ಬಕ್ರೀದ್ ನಿಮಿತ್ತ ಬಲಿ ನೀಡುವ ಬಗ್ಗೆ ಮಾರ್ಗದರ್ಶಕ ಸೂಚನೆಗಳನ್ನು ಪ್ರಸಾರ ಮಾಡುವಾಗ, ಹಸುವಿನೊಂದಿಗೆ ಕಾಯಿಲೆ ಬಿದ್ದ ಮತ್ತು ಕಡಿಮೆ ವಯಸ್ಸಿನ ಪ್ರಾಣಿಗಳ ಬಲಿಯ ಮೇಲೆ ನಿಷೇಧ ಹೇರಿದೆ.
ಹಾಗೆಯೇ ಸರಕಾರವು ಇದಕ್ಕೂ ಮುಂಚೆಯೇ ರಾಜ್ಯದಲ್ಲಿ ಗೋಹತ್ಯೆ ಮಾಡುವುದರ ಮೇಲೆ ನಿಷೇಧ ಹೇರಿರುವಾಗ 'ಬಕ್ರೀದ್ ದಿನದಂದು ಗೋಹತ್ಯೆ ಮಾಡೇ ಮಾಡುತ್ತೇವೆ', ಎಂದು ಇಲ್ಲಿನ ಶಾಸಕ ಹುಮಾಯೂ ಕಬೀರರು ಘೋಷಣೆ ಮಾಡಿದ್ದಾರೆ. (ಶಾಸಕ ಹುಮಾಯೂ ಅವರನ್ನು ತಕ್ಷಣ ಬಂಧಿಸಿ ಕಾರಾಗೃಹದಲ್ಲಿ ಹಾಕಬೇಕು ಮತ್ತು ಅವರಿಗೆ ಬುದ್ಧಿ ಹೇಳಬೇಕು, ಅಂದರೆ ಅವರು ಮತ್ತೆ ಹೀಗೆ ಮಾತನಾಡುವ ಮತ್ತು ಗೋಹತ್ಯೆ ಮಾಡುವ ಧೈರ್ಯ ಮಾಡುವುದಿಲ್ಲ, ಎಂದೇ ಹಿಂದೂಗಳಿಗೆ ಅನಿಸುತ್ತದೆ ! - ಸಂಪಾದಕರು) ಶಾಸಕ ಹುಮಾಯೂ ಅವರೇ ಇಲ್ಲಿ ಬಾಬರಿ ಮಸೀದಿ ಕಟ್ಟುತ್ತಿದ್ದಾರೆ.
ಶಾಸಕ ಹುಮಾಯೂ ಕಬೀರ, 'ನಾನು ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರಿಗೆ ನೇರವಾಗಿ ಹೇಳುತ್ತಿದ್ದೇನೆ, ಬೆಂಕಿಯೊಂದಿಗೆ ಆಟವಾಡಬೇಡಿ. ಒಂದುವೇಳೆ ಅವರು ಬಲಿ ನೀಡುವ ಮೇಲೆ ನಿಷೇಧ ಹೇರುವ ಪ್ರಯತ್ನ ಮಾಡಿದರೆ, ಅವರ ಮುಂದೆ ಅಡಚಣೆಗಳು ನಿರ್ಮಾಣವಾಗುವವು. ಬಲಿಯ ಸಂದರ್ಭದಲ್ಲಿ ಮುಸಲ್ಮಾನರು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಬಕ್ರೀದ್ ದಿನದಂದು ಹಸುಗಳ ಬಲಿಯನ್ನು ನಿಶ್ಚಿತವಾಗಿಯೂ ನೀಡುವರು; ಆಮೇಲೆ ಶುಭೇಂದು ಏನೂ ಮಾಡಲಿ' ಎಂದು ಹೇಳಿದರು.
'ಒಂದುವೇಳೆ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನವಾದರೆ, ಆಗ ರಾಜ್ಯದಲ್ಲಿನ ವಾತಾವರಣ ಹದಗೆಡುವುದು !'(ಅಂತೆ)
ನಮಾಜ ಅಂಶದ ಕುರಿತು ಸರಕಾರವು ಪ್ರಸಾರ ಮಾಡಿದ ನಿರ್ದೇಶನಗಳ ಮೇಲೂ ಹುಮಾಯೂ ಕಬೀರ ಬೆದರಿಕೆ ನೀಡುತ್ತಾ, 'ಒಂದುವೇಳೆ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನವಾದರೆ, ಆಗ ರಾಜ್ಯದಲ್ಲಿನ ವಾತಾವರಣ ಹದಗೆಡುವುದು ಮತ್ತು ಅದಕ್ಕೆ ಸರಕಾರವೇ ಹೊಣೆಯಾಗುವುದು' ಎಂದು ಹೇಳಿದರು.
ಮುಸಲ್ಮಾನ ಸಂಘಟನೆಗಳೂ ಹುಮಾಯೂ ಅವರಿಗೆ ಬೆಂಬಲ ನೀಡಿವೆ !
ಶಾಸಕ ಹುಮಾಯೂ ಅವರ ಈ ಹೇಳಿಕೆಯ ನಂತರ ಕೆಲವು ಮುಸಲ್ಮಾನ ಸಂಘಟನೆಗಳು ಬಹಿರಂಗವಾಗಿ ಹುಮಾಯೂ ಅವರ ಬೆಂಬಲಕ್ಕಾಗಿ ಮುಂದೆ ಬಂದಿವೆ. 'ಧಾರ್ಮಿಕ ಸ್ವಾತಂತ್ರ್ಯವು ಸಂವಿಧಾನವು ನೀಡಿರುವ ಅಧಿಕಾರವಾಗಿದೆ, ಆದ್ದರಿಂದ ಯಾವುದೇ ಸಮುದಾಯದ ಪರಂಪರೆಗಳ ಮೇಲೆ ನಿಷೇಧ ಹೇರುವ ಅಥವಾ ಅವರನ್ನು ಗುರಿಯಾಗಿಸುವ ಪ್ರಯತ್ನ ಮಾಡಬಾರದು', ಎಂದು ಮುಸಲ್ಮಾನ ಸಂಘಟನೆಗಳು ಹೇಳಿವೆ.

