ಕೆಲವು ವರ್ಷಗಳ ಹಿಂದೆ ಬಂಗಾಳವು ಭಾರತದ ಸಾಂಸ್ಕೃತಿಕ ಮತ್ತು ವೈಚಾರಿಕ ರಾಜಧಾನಿಯಾಗಿತ್ತು; ಆದರೆ ದುರದೃಷ್ಟವಶಾತ್, ಕಳೆದ ಕೆಲವು ದಶಕಗಳಿಂದ ಬಂಗಾಳದ ಸ್ಥಿತಿಯನ್ನು ಗಮನಿಸಿದರೆ, ಅಲ್ಲಿ ಕೇವಲ ಅರಾಜಕತೆ, ಹಿಂಸಾಚಾರ ಮತ್ತು ಅಲ್ಪಸಂಖ್ಯಾತರ ಓಲೈಕೆಯನ್ನು ಹೊರತುಪಡಿಸಿ ಬೇರೇನೂ ಕಾಣಿಸುತ್ತಿಲ್ಲ.
ಗೂಂಡಾಗಿರಿ ಮತ್ತು ಹಿಂಸಾಚಾರದ ಕೇಂದ್ರವಾಗಿ ಬಂಗಾಳ ಗುರುತಿಸಿಕೊಂಡಿದೆ. 'ಇಂತಹ ಬಂಗಾಳ ರಾಜ್ಯವು ಭಾರತಕ್ಕೆ ಯಾವ ದಿಶೆ ನೀಡಬಲ್ಲದು ?' ಎಂಬ ಪ್ರಶ್ನೆ ಮನಸ್ಸಿನಲ್ಲಿರುವಾಗಲೇ ಬಂಗಾಲದಲ್ಲಿ ಅಧಿಕಾರ ಬದಲಾವಣೆಯಾಯಿತು. ಭಾಜಪ ಜಯಗಳಿಸಿತು. ಎಲ್ಲೋ ಒಂದು ಕಡೆ ಆಶಾಕಿರಣ ಮೂಡಿತು. ಇನ್ನೂ ಅಧಿಕಾರದ ಚದುರಂಗದಾಟ ಆರಂಭಿಸುವ ಮೊದಲೇ ಅಲ್ಲಿ ರಕ್ತಸಿಕ್ತ ಘಟನೆಗಳು ಜರುಗುತ್ತಿವೆ. ಭಾಜಪದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರಕಾಂತ ರಥ್ ಅವರನ್ನು ೫ ಗುಂಡುಗಳನ್ನು ಹಾರಿಸಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಯಿತು. ನಡುರಸ್ತೆಯಲ್ಲಿಯೇ ಈ ನಿರ್ದಯಿ ಕೃತ್ಯ ನಡೆದಿದೆ. ಬಂಗಾಳದ ಜನತೆಗೆ ಈ ಘಟನೆ ಆತಂಕಕಾರಿಯಾಗಿದೆ. ಆರೋಪಿಗಳು ಚಂದ್ರಕಾಂತ ರಥ್ ಅವರ ವಾಹನವನ್ನು ಹಿಂಬಾಲಿಸಿದ್ದರು ಮತ್ತು ಆ ಪರಿಸರದ ರೇಖಿಯನ್ನೂ ಮಾಡಿದ್ದರು. ರಥ್ ಅವರ ವಾಹನದ ವೇಗ ಕಡಿಮೆಯಾಗುತ್ತಿದ್ದಂತೆಯೇ ಆರೋಪಿಗಳು ಅವರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಅಧಿಕಾರಿ ಅವರು ಅತ್ಯಂತ ನಂಬಿಕಸ್ತ ಸಹೋದ್ಯೋಗಿಯನ್ನು ಕಳೆದುಕೊಳ್ಳಬೇಕಾಯಿತು. ರಥ್ ಅವರ ಹತ್ಯೆಯಲ್ಲಿ ಬಳಕೆಯಾದ ಪಿಸ್ತೂಲು ಆಸ್ಟ್ರಿಯಾ ದೇಶದ ತಯಾರಿಕೆಯದ್ದೆಂದು ಹೇಳಲಾಗುತ್ತಿದೆ. ಈ ಹತ್ಯೆಯ ನಂಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲ ಎಂದು ಹೇಗೆ ಹೇಳುವುದು ?
ಈ ಹತ್ಯೆಯು, ಭಾಜಪ ವಿರೋಧಿಗಳು ಆ ಪಕ್ಷಕ್ಕೆ ತನ್ನ ಆಡಳಿತವನ್ನು ನಡೆಸಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ನೀಡಿದ ಬೆದರಿಕೆಯೇ ಸರಿ. ವಿರೋಧವನ್ನು ನೇರವಾಗಿ ಎದುರಿಸುವ ಬದಲು, ವ್ಯಕ್ತಿಯನ್ನೇ ಹಾದಿಯಿಂದ ದೂರ ಮಾಡುವುದು ಅಥವಾ ಧ್ವಂಸಗೊಳಿಸುವುದು ಬಂಗಾಳದಲ್ಲಿ ನಡೆಯುತ್ತಿದೆ. ಬಂಗಾಳದ ಭೂಮಿ ಅಕ್ಷರಶಃ 'ಸುಲ್ತಾನನ ಆಡಳಿತ'ದಂತೆ ಇದೆ ಎಂಬುದು ಅಲ್ಲಿನ ನಾಗರಿಕರ ಪ್ರತಿದಿನದ ಅನುಭವವಾಗಿದೆ.
ಆಡಳಿತದ ಮೇಲೆ ನಿಯಂತ್ರಣವೇ ಮೊದಲ ಹೆಜ್ಜೆ !
ಭಾಜಪಗೆ ಈ ಪರಿಸ್ಥಿತಿಯನ್ನು ನಿಭಾಯಿಸುವುದು, ಅಧಿಕಾರ ಸ್ಥಾಪಿಸುವುದು ಮತ್ತು ರಾಜ್ಯವನ್ನು ಮುನ್ನಡೆಸುವುದು ಅಕ್ಷರಶಃ ಹಗ್ಗದ ಮೇಲಿನ ನಡಿಗೆಯಾಗಿದೆ. ಇದನ್ನು ಮಾಡುವಾಗ ಭಾಜಪ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಯನ್ನು ಅತ್ಯಂತ ಕಠಿಣವಾಗಿ ನಿಭಾಯಿಸಬೇಕಾಗುತ್ತದೆ. ಆಡಳಿತದ ಮೇಲೆ ನಿಯಂತ್ರಣ ಸಾಧಿಸದೆ ಭಾಜಪಗೆ ಒಂದೇ ಒಂದು ಹೆಜ್ಜೆಯನ್ನೂ ಇಡುವುದು ಕಷ್ಟವಾಗಲಿದೆ; ಏಕೆಂದರೆ ಇಂದಿನವರೆಗೆ ತೃಣಮೂಲ ಕಾಂಗ್ರೆಸ್ ಅಡಿಯಲ್ಲಿ ಕೆಲಸ ಮಾಡಿದ ಆಡಳಿತದ ಮಾನಸಿಕತೆ ಸಂಪೂರ್ಣವಾಗಿ ಹಿಂದೂವಿರೋಧಿ ಮತ್ತು ಜಾತ್ಯತೀತ (ಸೆಕ್ಯುಲರ್) ಎಂದೇ ಆಗಿದೆ. ಇಂತಹ ವಿಚಾರಧಾರೆ ಉಳ್ಳವರನ್ನು ಇಟ್ಟುಕೊಂಡು ರಾಜ್ಯಭಾರ ಮಾಡಬೇಕೆಂದರೆ ಭಾಜಪಗೆ ಏನೂ ಸಾಧ್ಯವಾಗದು. ಅಂತಹವರ ಕೈಗಳು ಅಲ್ಪಸಂಖ್ಯಾತರ ಓಲೈಕೆಯಲ್ಲಿ, ಹತ್ಯೆಯ ಪಿತೂರಿಯಲ್ಲಿ ಮತ್ತು ನುಸುಳುಕೋರರ ಅತಿಥ್ಯ ಮಾಡುವುದರಲ್ಲಿಯೇ ಮಲಿನವಾಗಿವೆ. ಇಂತಹ ಜನರು ಬಂಗಾಳದಲ್ಲಿ ಸುವ್ಯವಸ್ಥೆಯನ್ನು ಹೇಗೆ ಕಾಪಾಡಲು ಸಾಧ್ಯ ? ಈಗಿನ ಮಮತಾ ಅವರ ಗುಲಾಮರಾಗಿರುವ ಅಧಿಕಾರಿಗಳು ಹಿಂದೂಗಳಿಗೆ ಎಷ್ಟು ನ್ಯಾಯ ನೀಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಆದ್ದರಿಂದ ಹಿಂದೂಗಳ ಮೇಲಿನ ದೌರ್ಜನ್ಯದ ಸರಣಿ ಮುಂದುವರಿಯುವ ದಟ್ಟ ಸಾಧ್ಯತೆ ಇದೆ. ಬಂಗಾಳವು ಹತ್ತಿರ ಹತ್ತಿರ 'ಬಾಂಗ್ಲಾದೇಶ'ವೇ ಆಗಿತ್ತು, ಇನ್ನು ಕೇವಲ ಅದರ ಘೋಷಣೆಯಷ್ಟೇ ಬಾಕಿ ಇತ್ತು. ಈ ದುಸ್ಥಿತಿಯನ್ನು ಬದಲಾಯಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು.

ಮೊದಲು ಸ್ಥಳೀಯ ಸಂಸ್ಥೆಗಳು, ಪೊಲೀಸ್ ವ್ಯವಸ್ಥೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸರಕಾರಿ ಸಂಸ್ಥೆಗಳಲ್ಲಿನ ಸಂಪೂರ್ಣ ವ್ಯವಸ್ಥೆಯನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕಾಗಿ ಅಪಾರ ಶ್ರಮ ಬೇಕು. ಎಲ್ಲಿಯವರೆಗೆ ಆಡಳಿತಾತ್ಮಕ ಸ್ಥಿರತೆ ನಿರ್ಮಾಣವಾಗುವುದಿಲ್ಲವೋ, ಅಲ್ಲಿಯವರೆಗೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನೇಪಾಳದಲ್ಲಿ ಸರಕಾರ ಬದಲಾದಾಗ ಅಲ್ಲಿನ ಒಂದೂವರೆ ಸಾವಿರ ಆಡಳಿತಾಧಿಕಾರಿಗಳನ್ನು ತೆಗೆದುಹಾಕಲಾಗಿತ್ತು. ಬುನಾದಿಯೇ ಭದ್ರವಾಗಿಲ್ಲದಿದ್ದರೆ ಅಧಿಕಾರದ ಅರಮನೆಯನ್ನು ಹೇಗೆ ನಿಭಾಯಿಸುವುದು ? ಹಿಂದೂಗಳ ಮೇಲೆ ಅನ್ಯಾಯ-ದೌರ್ಜನ್ಯ ಮತ್ತು ಅವರ ಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ ನೀಡುವುದು, ಅಗತ್ಯವಿದ್ದಲ್ಲಿ ಅವರನ್ನು ವಜಾಗೊಳಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಜಾತ್ಯತೀತ ಮಾನಸಿಕತೆಯಲ್ಲಿ ಇಷ್ಟು ದಶಕಗಳ ಕಾಲ ಬದುಕಿದವರಲ್ಲಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಹಿತದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಮೂಡಿಸಬೇಕಿದೆ. ಬಂಗಾಳದಲ್ಲಿ ಹರಡಿರುವ ಕಪಟ ಅರಾಜಕತೆಯನ್ನು ನಾಶ ಮಾಡಲು ಅದರ ಬೇರು ಮಟ್ಟದಲ್ಲಿ ಆಳವಾದ ಕ್ರಮಗಳನ್ನು ಕೈಗೊಂಡರೆ ಮಾತ್ರ ಬಂಗಾಳದಲ್ಲಿ ಸರಕಾರ ಉಳಿಯಲು ಸಾಧ್ಯ. ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರದ್ರೋಹಿ ಸಾಂಘಿಕ ಜಾಲವನ್ನು ಧ್ವಂಸಗೊಳಿಸುವುದು ಆಡಳಿತಾರೂಢರ ಮುಂದಿರುವ ದೊಡ್ಡ ಸವಾಲಾಗಿದೆ. ತೃಣಮೂಲ ಕಾಂಗ್ರೆಸ್ ನಿರ್ಮಿಸಿರುವ ಕೆಸರನ್ನು ತೆಗೆದುಹಾಕಿದರೆ ಮಾತ್ರ ಆದರ್ಶ ರಾಜ್ಯಭಾರ ಮಾಡಲು ಸಾಧ್ಯ. ಇಂದಿನವರೆಗೆ ಬಂಗಾಳದಲ್ಲಿ ಭಾಜಪದ ಅನೇಕ ಕಾರ್ಯಕರ್ತರು ಮತ್ತು ರಾ.ಸ್ವ. ಸಂಘದ ಸ್ವಯಂಸೇವಕರ ಹತ್ಯೆಗಳಾಗಿವೆ. ಈ ಹಿಂದೂದ್ವೇಷಿ ಮಾನಸಿಕತೆಯನ್ನು ಹೊಸ ಸರಕಾರವು ಹತ್ತಿಕ್ಕಬೇಕಿದೆ.
ಸರಕಾರದೊಂದಿಗೆ ಹಿಂದೂಗಳಿಗೂ ಪರೀಕ್ಷೆ !
ಚುನಾವಣೆ ಗೆಲ್ಲಲು ಭಾಜಪ ಈವರೆಗೆ ಮಾಡಿದ ಪ್ರಯತ್ನ, ವ್ಯಯಿಸಿದ ಶಕ್ತಿ ಮತ್ತು ಬಲವನ್ನು ನಿಲ್ಲಿಸಬಾರದು. ಆ ಶಕ್ತಿಯು ಹಾಗೆಯೇ ಮುಂದುವರಿಯಲಿ. ಬಹುಶಃ ಚುನಾವಣೆ ಗೆಲ್ಲಲು ಪಟ್ಟ ಶ್ರಮಕ್ಕಿಂತಲೂ ರಾಜ್ಯವನ್ನು ನಡೆಸಲು ಹೆಚ್ಚಿನ ಶ್ರಮ ಬೇಕಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರನಿಷ್ಠ ಭೂಮಿಕೆಯೊಂದಿಗೆ ಮುನ್ನಡೆಯಬೇಕು. ಈವರೆಗೆ ಸರಕಾರವು ನಕ್ಸಲಿಸಂಅನ್ನು ಕೊನೆಗಾಣಿಸಿದೆ. ದೇಶಹಿತದ ಕಾನೂನುಗಳನ್ನು ಮಾಡಿ ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವ ಪ್ರಯತ್ನ ಮಾಡಿದೆ. ವಿವಿಧ ಕಾರ್ಯಾಚರಣೆಗಳ ಮೂಲಕ ಭಯೋತ್ಪಾದನೆಯ ಭಸ್ಮಾಸುರನನ್ನು ನಿಯಂತ್ರಿಸಿದೆ. ಅದೇ ರೀತಿ ಈಗ ಬಂಗಾಳದಲ್ಲಿನ ಆಂತರಿಕ ಭಯೋತ್ಪಾದನೆಯನ್ನು ಹೋಗಲಾಡಿಸಲು ಕಠಿಣ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ.
ಬಂಗಾಳದ ಸ್ಥಿತಿಯನ್ನು ಕಂಡು ಅನೇಕ ರಾಷ್ಟ್ರನಿಷ್ಠರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಸಚಿವ ಸಂಪುಟಕ್ಕಿಂತ ಮೊದಲು ಬಂಗಾಳದ ಜಿಹಾದಿಗಳ ಪಟ್ಟಿ ಮಾಡಿ', 'ಬಂಗಾಳವು ಬಾಂಗ್ಲಾದೇಶವಾಯಿತು; ಆದರೆ ಅದು ಬಂಗಾಳವೇ ಆಗಿರಲಿ', 'ಬಂಗಾಳವನ್ನು ಮಣಿಪುರವಾಗಲು ಬಿಡಬೇಡಿ', 'ಸರಕಾರವು ಏಟಿಗೆ ಎದಿರೇಟು ನೀಡುವ ನಿಲುವು ತಳೆಯಲಿ', 'ಯೋಗಿ ಆದಿತ್ಯನಾಥ ಅಥವಾ ಹಿಮಂತ ಬಿಸ್ವಾ ಶರ್ಮಾ ಅವರನ್ನು ಸ್ವಲ್ಪ ಕಾಲ ಜೊತೆಗಿಟ್ಟುಕೊಂಡು ರಾಜ್ಯವಾಳಿ' ಎಂಬ ಪ್ರತಿಕ್ರಿಯೆಗಳು ಬಂಗಾಳ ಸರಕಾರಕ್ಕೆ ಸಹಕಾರಿಯಾಗಬಹುದು. ಇದರಿಂದಲೇ ದೇಶದ ಜನತೆಗೆ ಏನು ಬೇಕು ಎಂಬುದು ತಿಳಿಯುತ್ತದೆ. ಬಂಗಾಳ ಸರಕಾರದ ಜೊತೆಗೆ ಅಲ್ಲಿನ ಹಿಂದೂಗಳಿಗೂ ಅಷ್ಟೇ ದೊಡ್ಡ ಪರೀಕ್ಷೆ ಇದೆ ಎಂಬ ಅರಿವು ಹಿಂದೂಗಳಿಗೆ ಈಗಾಗಲೇ ಬಂದಿರಬಹುದು. ಅಲ್ಲಿನ ಪ್ರತಿಯೊಬ್ಬ ಹಿಂದೂ ತನ್ನನ್ನು ತಾನು ಬದಲಿಸಿಕೊಂಡು ಶೌರ್ಯವಂತನಾಗಬೇಕು. ಹಿಂದೂವು ಸ್ವಾಭಿಮಾನದಿಂದ ಮತ್ತು ಧರ್ಮನಿಷ್ಠನಾಗಿ ಎದ್ದು ನಿಂತರೆ ಮಾತ್ರ ಬಂಗಾಳದ ಅರಾಜಕತೆ ಕೊನೆಗೊಳ್ಳಲು ಸಾಧ್ಯ. ಇದು ಸ್ವಾತಂತ್ರ್ಯ ಯುದ್ಧವೇ…!
ಭಾರತಕ್ಕೆ ಪಾಕಿಸ್ತಾನ, ಚೀನಾ ಮತ್ತು ಆಂತರಿಕ ಯುದ್ಧ ಹೀಗೆ ಎರಡೂವರೆ ರಣರಂಗಗಳ ಯುದ್ಧದ ಬಗ್ಗೆ ಹೇಳಲಾಗುತ್ತದೆ. ಇದರಂತೆ ಪಾಕ್ ಮತ್ತು ಚೀನಾ ಜೊತೆಗಿನ ಯುದ್ಧಗಳು ನಡೆಯುತ್ತಲೇ ಇವೆ. ಈಗ ಅದರಲ್ಲಿ ವಿಕಸಿತ ಭಾರತದ ಕಾಲು ಎಳೆಯುವ ಗುಂಪು ಬಂಗಾಳದ ಮೂಲಕ ಸಕ್ರಿಯವಾಗಿದೆ. ಬಂಗಾಳದ ಪರಿಸ್ಥಿತಿಯನ್ನು ನೋಡಿದರೆ 'ಇದು ಕೇವಲ ಯುದ್ಧವಲ್ಲ, ಬದಲಾಗಿ ಒಂದು ರೀತಿಯ ಸ್ವಾತಂತ್ರ್ಯ ಯುದ್ಧವೇ ನಡೆಯುತ್ತಿದೆ' ಎಂದು ಹೇಳಬಹುದು. ಸ್ವಾತಂತ್ರ್ಯ ಯುದ್ಧದಲ್ಲಿ ಆಗುವ ಹಾನಿಯನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ. ಅದೇ ರೀತಿ ಈ ಆಂತರಿಕ ಯುದ್ಧವನ್ನು ನಡೆಸುವ ಶತ್ರುಗಳೊಂದಿಗೆ ಹೋರಾಡುವುದು ಮಹಾಕಠಿಣವಾಗಿದೆ. ದೇಶವನ್ನು ಕರೆಯುತ್ತಿರುವ ದೇಶಾಂತರ್ಗತ ಶತ್ರುಗಳನ್ನು ಸೋಲಿಸಲು ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ಪಾಲಿಸುವುದು ಅನಿವಾರ್ಯವಾಗಿದೆ !

