ಮದರಸಾಗಳು ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕಾಗುವುದು
ಕೊಲಕಾತಾ (ಬಂಗಾಲ) - ಬಂಗಾಲದಲ್ಲಿನ ಭಾಜಪ ಸರಕಾರವು ರಾಜ್ಯದ 'ಅಲ್ಪಸಂಖ್ಯಾತ ವ್ಯವಹಾರ ಮತ್ತು ಮದರಸಾ ಶಿಕ್ಷಣ ವಿಭಾಗ'ದ ಅಡಿಯಲ್ಲಿ ಬರುವ ಎಲ್ಲ ಮದರಸಾಗಳಲ್ಲಿ 'ವಂದೇ ಮಾತರಮ್' ಗಾಯನವನ್ನು ಕಡ್ಡಾಯಗೊಳಿಸಿದೆ.
ಈ ನಿಯಮವು ಮದರಸಾಗಳಿಗೆ, ಹಾಗೆಯೇ ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಮದರಸಾಗಳಿಗೆ ತಕ್ಷಣವೇ ಅನ್ವಯವಾಗುವುದು. ಇದಕ್ಕನುಸಾರ ತರಗತಿ ಪ್ರಾರಂಭವಾಗುವ ಮೊದಲು ಮುಂಜಾನೆಯ ಪ್ರಾರ್ಥನಾಸಭೆಯಲ್ಲಿ 'ವಂದೇ ಮಾತರಮ್' ಹಾಡುವುದು ಅವಶ್ಯಕವಾಗಿದೆ. ಈಗ ಎಲ್ಲ ಮದರಸಾಗಳು ಈ ಆದೇಶವನ್ನು ಜಾರಿಗೊಳಿಸಿದ ನಂತರ ಇದರ ವರದಿಯನ್ನು ವಿಭಾಗಕ್ಕೆ ಸಲ್ಲಿಸಬೇಕಾಗುವುದು.
ಇದಕ್ಕೂ ಮುನ್ನ ಮದರಸಾಗಳಲ್ಲಿ ಮುಂಜಾನೆಯ ಪ್ರಾರ್ಥನೆಯ ಸಮಯದಲ್ಲಿ ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ಕವಿ ಗುಲಾಮ ಮುಸ್ತಫಾ ಇವರ 'ಅನಂತ ಅಸೀಮ ಪ್ರೇಮಮಯ ತುಮಿ' (ಬಂಗಾಲಿ ಗೀತೆ) ಹಾಡುತ್ತಿದ್ದರು.

