Dailyhunt Logo
  • Light mode
    Follow system
    Dark mode
    • Play Story
    • App Story
'ಭಾರತ 'ಬ್ರಿಕ್ಸ್'ನಿಂದ ಹಿಂದೆ ಸರಿಯಲಿದೆ, ಪಾಕಿಸ್ತಾನ ಸೇರುವ ಸಿದ್ಧತೆಯಲ್ಲಿ !'

'ಭಾರತ 'ಬ್ರಿಕ್ಸ್'ನಿಂದ ಹಿಂದೆ ಸರಿಯಲಿದೆ, ಪಾಕಿಸ್ತಾನ ಸೇರುವ ಸಿದ್ಧತೆಯಲ್ಲಿ !'

  • ಪಾಕಿಸ್ತಾನ-ಇರಾನ್ ಬೆಂಬಲಿಸುವ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ವದಂತಿ
  • ಈ ಹೇಳಿಕೆಗಳು ಆಧಾರರಹಿತವೆಂದ ವಿದೇಶಾಂಗ ಸಚಿವಾಲಯ

ನವ ದೆಹಲಿ - ಬ್ರಿಕ್ಸ್' ಈ ಒಕ್ಕೂಟವು ಪರಂಪರಾಗತವಾಗಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಸಮೂಹವು ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಅಪಾರ ಪ್ರಾಮುಖ್ಯತೆಯನ್ನು ಗಳಿಸಿದೆ.

ಈ ಗುಂಪಿಗೆ ಇತರ ಅನೇಕ ದೇಶಗಳು ಸೇರ್ಪಡೆಗೊಂಡಿದ್ದರೂ, ಈ 5 ದೇಶಗಳ ಆರ್ಥಿಕತೆಯು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ, ಕೆಲವು ಪಾಕಿಸ್ತಾನ ಮತ್ತು ಇರಾನ್ ಬೆಂಬಲಿಗರು ಭಾರತವು ಅಮೆರಿಕದ ಒತ್ತಡಕ್ಕೆ ಮಣಿದು 'ಬ್ರಿಕ್ಸ್'ನಿಂದ ಹೊರಬರಲು ನಿರ್ಧರಿಸಿದೆ ಎಂದು 'ಎಕ್ಸ್' ನಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಶೀಘ್ರದಲ್ಲೇ ಪಾಕಿಸ್ತಾನವನ್ನು ಈ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದೂ ಸುದ್ದಿ ಹಬ್ಬಿಸಲಾಗಿದೆ. ಈ ವದಂತಿ ತೀವ್ರವಾಗಿ ಹರಡಿದ ನಂತರ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಹೇಳಿಕೆ ನೀಡಿದ್ದು, ಈ ಎಲ್ಲಾ ಸುದ್ದಿಗಳು ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.

ಈ ವದಂತಿಗಳಲ್ಲಿ ಕೆಲವು ಖಾತೆಗಳು, ವ್ಯಾಪಾರ ವಹಿವಾಟುಗಳಿಗಾಗಿ ಅಮೆರಿಕನ್ ಡಾಲರ್ ಬದಲಿಗೆ ಸ್ಥಳೀಯ ಕರೆನ್ಸಿಗಳನ್ನು ಬಳಸುವ 'ಬ್ರಿಕ್ಸ್' ದೇಶಗಳ ಪ್ರಸ್ತಾವನೆಯನ್ನು ಭಾರತವು ತಿರಸ್ಕರಿಸಿದೆ ಎಂದು ಆರೋಪಿಸಿವೆ. ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಇಸ್ರೇಲ್ ಪರವಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ 'ಫ್ಯಾಕ್ಟ್ ಚೆಕ್' (ಸತ್ಯಾಸತ್ಯತೆ ಪರಿಶೀಲನೆ) ಖಾತೆಯು ತನ್ನ ಅಧಿಕೃತ ಸರಕಾರಿ ಖಾತೆಯ ಮೂಲಕ ಈ ವಾದಗಳು ಸಂಪೂರ್ಣ ಸುಳ್ಳು ಎಂದು ಹೇಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada