Dailyhunt Logo
  • Light mode
    Follow system
    Dark mode
    • Play Story
    • App Story
ಭಾರತೀಯ ನೌಕಾಪಡೆಗೆ 'ಐ.ಎನ್.ಎಸ್. ನಿಪುಣ್' ಯುದ್ಧನೌಕೆಯ ಸೇರ್ಪಡೆ !

ಭಾರತೀಯ ನೌಕಾಪಡೆಗೆ 'ಐ.ಎನ್.ಎಸ್. ನಿಪುಣ್' ಯುದ್ಧನೌಕೆಯ ಸೇರ್ಪಡೆ !

ನೀರಿನೊಳಗೆ ರಕ್ಷಣಾ ಕಾರ್ಯಾಚರಣೆ ನಡೆಸುವ ಎರಡನೇ ಯುದ್ಧನೌಕೆ !

ಮುಂಬಯಿ - ಆಳ ಸಮುದ್ರದಲ್ಲಿ ಡೈವಿಂಗ್ (ಮುಳುಗುವುದು), ನೀರಿನೊಳಗಿನ ಕಾರ್ಯಾಚರಣೆ ಮತ್ತು ಜಲಾಂತರ್ಗಾಮಿ ರಕ್ಷಣಾ ಕಾರ್ಯಗಳಿಗೆ ಸಜ್ಜಾಗಿರುವ 'ಐ.ಎನ್.ಎಸ್. ನಿಪುಣ್' ಎಂಬ ನಿಸ್ತಾರ್ ವರ್ಗದ ಎರಡನೇ 'ಡೈವಿಂಗ್' ಸಹಾಯಕ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆಗೊಂಡಿದೆ.

ಮುಂಬಯಿನ ನೌಕಾದಳದ ಡಾಕ್‌ಯಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರ ಹಸ್ತದಿಂದ ಈ ನೌಕೆಯನ್ನು ಪಡೆಗೆ ಸೇರಿಸಿಕೊಳ್ಳಲಾಯಿತು. ನೌಕಾಪಡೆಯ ಧ್ವಜವನ್ನು ಹಾರಿಸುತ್ತಿದ್ದಂತೆ 'ಐ.ಎನ್.ಎಸ್. ನಿಪುಣ್' ಔಪಚಾರಿಕವಾಗಿ ಸೇವೆಯನ್ನು ಪ್ರವೇಶಿಸಿತು. ಈ ವೇಳೆ ನೌಕಾಪಡೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶಾಖಪಟ್ಟಣಂನ 'ಹಿಂದೂಸ್ತಾನ್ ಶಿಪ್‌ಯಾರ್ಡ್' ಈ ನೌಕೆಯನ್ನು ಸ್ವದೇಶಿ ವಿನ್ಯಾಸ ಮತ್ತು ನಿರ್ಮಾಣ ಮಾಡಿದೆ. ಇದರಿಂದ ಅತ್ಯಾಧುನಿಕ ಮತ್ತು ತಾಂತ್ರಿಕವಾಗಿ ಸಂಕೀರ್ಣವಾದ ಯುದ್ಧನೌಕೆಗಳನ್ನು ದೇಶದಲ್ಲೇ ನಿರ್ಮಿಸುವ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada